ಕ್ರೈಂಮಹಿಳೆ-ಆರೋಗ್ಯವೈರಲ್ ನ್ಯೂಸ್

ಅವಧಿ ಮುಗಿದ ಐಸ್ ಕ್ರೀಂ ಸೇವಿಸಿ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥ..! ಮದುವೆ ಸಮಾರಂಭದಲ್ಲಿ ಐಸ್ ಕ್ರೀಂ ಅನಾಹುತ..!

ನ್ಯೂಸ್ ನಾಟೌಟ್: ಅವಧಿ ಮುಗಿದ ಐಸ್ ಕ್ರೀಂ ಸೇವಿಸಿ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ರಾಮನಗರದ ಚನ್ನಪಟ್ಟಣ ಟಿಪ್ಪುನಗರದ ಮಿಲನ್ ಶಾದಿಮಹಲ್‌ ನಲ್ಲಿ ನಡೆದಿದೆ.

ಮಿಲನ್ ಶಾದಿಮಹಲ್‌ನಲ್ಲಿ ಭಾನುವಾರ(ಮೇ.೬) ನಡೆದ ಮದುವೆ ಸಮಾರಂಭವೊಂದರಲ್ಲಿ 80ಕ್ಕೂ ಹೆಚ್ಚು ಮಂದಿ ಐಸ್ ಕ್ರೀಂ ಸೇವಿಸಿದ್ದರು. ಈ ಪೈಕಿ 40 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ. ಇದರಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದ್ದಾರೆ. ಸಂತ್ರರನ್ನು ಚಿಕಿತ್ಸೆಗಾಗಿ ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವಾದರೂ ಘಟನೆಯಿಂದ ಸ್ಥಳೀಯರು ಗಾಬರಿಗೊಂಡಿದ್ದಾರೆ. ಸ್ಥಳಕ್ಕೆ ಚನ್ನಪಟ್ಟಣ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

ಮಂತ್ರಿ ಮಾಲ್‌ಗೆ ಬೀಗ ಜಡಿದದ್ದೇಕೆ ಅಧಿಕಾರಿಗಳು..? ಬೀಗ ತೆರೆಯದಂತೆ ಮಾರ್ಷಲ್‌ ಗಳ ಭದ್ರತೆ ಒದಗಿಸಿದ್ಯಾರು..? ಇಲ್ಲಿದೆ ಸಂಪೂರ್ಣ ಮಾಹಿತಿ

ಡಿಸಿಎಂ ಗೆ 50 ಸಾವಿರ ರೂಪಾಯಿ ದಂಡ..! ಬಿಬಿಎಂಪಿ ಡಿಕೆ ಶಿವಕುಮಾರ್ ಗೆ ದಂಡ ವಿಧಿಸಿದ್ದೇಕೆ?

ನಿಮ್ಮ ಮನೆಯ ಶ್ವಾನ ರಾತ್ರಿ ಹೊತ್ತಲ್ಲಿ ಅಳುತ್ತಿದೆಯಾ?ಅದು ದೆವ್ವ ಕಂಡಿದ್ದಕ್ಕಲ್ಲ..! ಇದರ ಕಾರಣ ಇಲ್ಲಿದೆ ಓದಿ..