ಕ್ರೈಂವಿಡಿಯೋವೈರಲ್ ನ್ಯೂಸ್

ಅರ್ಚಕರನ್ನು ತನ್ನ ಕುರ್ಚಿಯಲ್ಲಿ ಕೂಡಿಸಿ ಸನ್ಮಾನಿಸಿದ್ದೇಕೆ ಐಎಎಸ್ ಅಧಿಕಾರಿ..? ಈ ಬಗ್ಗೆ ಸರ್ಕಾರ ತನಿಖೆಗೆ ಆದೇಶಿಸಿದ್ದೇಕೆ? ಇಲ್ಲಿದೆ ವೈರಲ್ ವಿಡಿಯೋ

223

ನ್ಯೂಸ್ ನಾಟೌಟ್ : ಭಾರತೀಯ ಆಡಳಿತ ಸೇವೆ(IAS officer)ಯ ಅಧಿಕಾರಿಯೊಬ್ಬರು ನಡೆದುಕೊಂಡ ರೀತಿಯು ಭಾರೀ ಚರ್ಚೆಗೆ ಕಾರಣವಾಗಿದೆ. ಸಂವಿಧಾನ ನೀಡಿದ ಅಧಿಕಾರಕ್ಕೆ ಯಾವುದೇ ಚ್ಯುತಿ ಬಾರದಂತೆ ಚಲಾಯಿಸಬೇಕಿದ್ದ ನೈಋತ್ಯ ದಿಲ್ಲಿಯ (South West Delhi) ಜಿಲ್ಲಾಧಿಕಾರಿ ಲಕ್ಷ್ಯ ಸಿಂಘಾಲ್ (District Magistrate Lakshya Singhal) ಎಂಬ ಅಧಿಕಾರಿ ಅರ್ಚಕರೊಬ್ಬರನ್ನು ತಮ್ಮ ಚೇಂಬರ್‌ಗೆ ಆಹ್ವಾನಿಸಿ, ತಾವು ಕುಳಿತುಕೊಳ್ಳುವ ಕುರ್ಚಿಯನ್ನು ಅವರಿಗೆ ಬಿಟ್ಟುಕೊಟ್ಟಿದ್ದಾರೆ.

ಬಳಿಕ ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ. ಈ ಎಲ್ಲ ಸಂಗತಿಗಳನ್ನು ಸೆರೆ ಹಿಡಿಯಲಾದ ವಿಡಿಯೋ ಈಗ ಭಾರೀ ವೈರಲ್ ಆಗಿದ್ದು, ಜನರು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಈ ವಿಡಿಯೋ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಜಿಲ್ಲಾಧಿಕಾರಿ ಸ್ಥಾನದ ಘನತೆಯನ್ನು ಹಾಳು ಮಾಡಿದ್ದಾರೆಂದು ಟೀಕಿಸಿದ್ದಾರೆ. ಅಲ್ಲದೇ, ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ನಡೆದುಕೊಂಡ ರೀತಿಯ ಬಗ್ಗೆ ಅನುಮಾನಗಳನ್ನು ಹುಟ್ಟು ಹಾಕಿದೆ ಎನ್ನಲಾಗಗಿದೆ.

ಐಎಎಸ್‌ ಅಧಿಕಾರಿ ಲಕ್ಷ್ಯ ಸಿಂಘಾಲ್ ಅವರ ಈ ನಡೆಯ ಕುರಿತು ಹಿರಿಯ ಅಧಿಕಾರಿಯೊಬ್ಬರು ತನಿಖೆ ನಡೆಸಲಿದ್ದಾರೆಂದು ತಿಳಿದು ಬಂದಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ದಿಲ್ಲಿ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.

ಹಿರಿಯ ಅಧಿಕಾರಿಯು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದು, ಅರ್ಚಕರು ನನ್ನ ಜೀವನದಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದಾರೆ. ಅವರು ನನಗೆ ಅಜ್ಜನ ಸಮಾನ. ಹಾಗಾಗಿ, ಅವರಿಗೆ ಗೌರವದ ಆತಿಥ್ಯ ಸಲ್ಲಿಸಿದ್ದೇನೆ ಎಂದು ಐಎಎಸ್ ಅಧಿಕಾರಿ ಲಕ್ಷ್ಯ ಸಿಂಘಾಲ್ ಅವರು ಹೇಳಿಕೊಂಡಿದ್ದಾರೆ.

See also  ಜಮ್ಮು-ಕಾಶ್ಮೀರದಲ್ಲಿ ದಶಕಗಳ ಬಳಿಕ ಇಂದು(ಸೆ.18) ವಿಧಾನಸಭಾ ಚುನಾವಣೆಗೆ ಮತದಾನ..! ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget