ಕ್ರೈಂಬೆಂಗಳೂರುವೈರಲ್ ನ್ಯೂಸ್

ಐಎಎಸ್‌ ಅಧಿಕಾರಿಯ ಮನೆಯಲ್ಲಿ ನೆಲೆಸಿದ್ದನಾ ಪಾಕ್‌ ಪರ ಘೋಷಣೆ ಕೂಗಿದ್ದ ಮುನಾವರ್..? ಮನೆಗೆ ಬೀಗ ಹಾಕಿ ತೆರಳಿದ ಕುಟುಂಬಸ್ಥರು..!

161

ನ್ಯೂಸ್ ನಾಟೌಟ್: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿ ಪಾಕ್ ಪ್ರೇಮ ಮೆರೆದಿದ್ದ ಮುನಾವರ್ ಅಹಮದ್‌ (Munawar Ahmad) ಐಎಎಸ್‌ ಅಧಿಕಾರಿಯ (IAS Officer) ಮನೆಯಲ್ಲಿ ಬಾಡಿಗೆ ಇದ್ದ ಎನ್ನಲಾಗಿದೆ.

ಬೆಂಗಳೂರಿನ ಪ್ರತಿಷ್ಠಿತ ಪ್ರದೇಶಗಳಲ್ಲಿ ಒಂದಾಗಿರುವ ಜಯಮಹಲ್ 1ನೇ ಕ್ರಾಸ್‌ನ ನಂಬರ್ 27ಸಿ ನಂಬರ್‌ನ ಮನೆಯಲ್ಲಿ ಆರೋಪಿ ಮುನಾವರ್ ಕುಟುಂಬದೊಂದಿಗೆ ವಾಸವಾಗಿದ್ದ ಎನ್ನಲಾಗಿದೆ. ಮುನಾವರ್ ನೆಲೆಸಿದ್ದ ಮನೆ ಜೆ.ಸಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವುದರಿಂದ ಆರೋಪಿ ಮನೆಗೆ ಜೆಸಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮುನಾವರ್‌ ಬಂಧನದ ಬೆನ್ನಲ್ಲೇ ಆತನ ಕುಟುಂಬಸ್ಥರು ಮನೆಗೆ ಬೀಗ ಹಾಕಿ ತೆರಳಿದ್ದಾರೆ ಎನ್ನಲಾಗಿದೆ. ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದ ಬೆನ್ನಲ್ಲೇ ಕಾಂಗ್ರೆಸ್ಸಿನ ನಾಸೀರ್ ಹುಸೇನ್ ಬೆಂಬಲಿಗರಾದ ಬ್ಯಾಡಗಿಯ ಮೊಹಮ್ಮದ್‌ ಶಾಫಿ ನಾಶಿಪುಡಿ, ಬೆಂಗಳೂರಿನ ಮುನಾವರ್ ಅಹ್ಮದ್, ದೆಹಲಿಯ ಮೊಹಮ್ಮದ್‌ ಇಲ್ತಾಜ್ ಪಾಕಿಸ್ತಾನ್ ಜಿಂದಾಬಾದ್‌ ಘೋಷಣೆ ಕೂಗಿದ್ದರು.

ಬಂಧಿತ ಮೂವರ ಪೈಕಿ ನಾಶೀಪುಡಿ, ಮುನಾವರ್ ಸ್ನೇಹಿತರಾಗಿದ್ದರೆ ಮಹಮ್ಮದ್ ಇಲ್ತಾಜ್‌ಗೆ ಇಬ್ಬರು ಆರೋಪಿಗಳಿಗೂ ಪರಿಚಯವಿಲ್ಲ. ಬಂಧಿತ ಮೂವರ ಮೊಬೈಲನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಪೊಲೀಸರು ಈಗ ಮುಂದಾಗಿದ್ದಾರೆ ಎನ್ನಲಾಗಿದೆ.

See also  ಬೆಳ್ತಂಗಡಿ: ಮೂವರು ಯುವಕರಿಂದ ಲೈಂಗಿಕ ದೌರ್ಜನ್ಯ , ಅಪ್ರಾಪ್ತ ಬಾಲಕಿ ಆರು ತಿಂಗಳ ಗರ್ಭಿಣಿ
  Ad Widget   Ad Widget   Ad Widget   Ad Widget   Ad Widget   Ad Widget   Ad Widget