ರಾಜಕೀಯ

ನಾನು ರಾಜಕೀಯಕ್ಕೆ ಬರುವುದಿಲ್ಲ: ನಟ ಕಿಚ್ಚ ಸುದೀಪ್ ಸ್ಪಷ್ಟನೆ

ನ್ಯೂಸ್ ನಾಟೌಟ್: ನಾನು ನನ್ನ ಆಪ್ತರ ಪರ ಚುನಾವಣಾ ಪ್ರಚಾರದಲ್ಲಿ ನಿಲ್ಲುತ್ತೇನೆ. ಆದರೆ ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂದು ನಟ ಕಿಚ್ಚ ಸುದೀಪ್ ಸ್ಪಷ್ಟಪಡಿಸಿದ್ದಾರೆ.


ಈ ಹಿಂದೆ ಸುದೀಪ್ ರಾಜಕೀಯಕ್ಕೆ ಸೇರುತ್ತಾರೆ ಅನ್ನುವ ಸುದ್ದಿಗಳು ಹರಿದಾಡಿದ್ದವು. ಆದರೆ ಈ ಬಗ್ಗೆ ಖಚಿತ ಮಾಹಿತಿ ಹೊರಬಿದ್ದಿರಲಿಲ್ಲ. ಇದೇ ವೇಳೆ ಮಾತನಾಡಿರುವ ಸುದೀಪ್, ನನಗೆ ಪಕ್ಷ ಮುಖ್ಯವಲ್ಲ. ವ್ಯಕ್ತಿ ಮುಖ್ಯ ಎಂದು ತಿಳಿಸಿದರು.ಯಾವುದೇ ಬೆದರಿಕೆ ತಂತ್ರಗಳಿಗೆ ನಾನು ಮಣಿಯುವುದಿಲ್ಲ. ಚಿತ್ರರಂಗದಲ್ಲಿ ನನಗೆ ವಿರೋಧಿಗಳು ಕೂಡ ಇದ್ದಾರೆ. ನನ್ನ ವಿರುದ್ಧ ಪಿಯೂರಿ ನಡೆಸುತ್ತಿರುವವರು ಯಾರು ಅನ್ನುವುದು ಕೂಡ ಗೊತ್ತಿದೆ. ಅವರಿಗೆ ಅವರದ್ದೇ ದಾರಿಯಲ್ಲಿ ಉತ್ತರ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ಸುದೀಪ್ ಅವರ ಖಾಸಗಿ ವಿಡಿಯೋವನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಪತ್ರವೊಂದು ಬಂದಿತ್ತು, ಈ ಬಗ್ಗೆ ಕಿಚ್ಚ ಉತ್ತರಿಸಿದರು.

Related posts

ಚುನಾವಣಾ ಬಾಂಡ್ ಹೆಸರಿನಲ್ಲಿ ಸಾವಿರಾರು ಕೋ.ರೂ. ಸುಲಿಗೆ..? ಎಫ್.ಐ.ಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ನಳಿನ್ ಕುಮಾರ್ ಕಟೀಲು..!

ಮೇ.8 ರಂದು ಚಿತ್ರನಟಿ ರಮ್ಯಾ ಪುತ್ತೂರಿಗೆ

ಸಂಧಾನ ವಿಫಲ: ಪಕ್ಷೇತರ ಸ್ಪರ್ಧೆ ಖಚಿತ ಎಂದ ಕೆ.ಎಸ್ ಈಶ್ವರಪ್ಪ, ಇಂದು(ಮಾ.18) ಶಿವಮೊಗ್ಗಕ್ಕೆ ಮೋದಿ ಆಗಮನ