ಕರಾವಳಿಕೊಡಗುಕ್ರೀಡೆ/ಸಿನಿಮಾ

‘ಛಾವ’ ಚಿತ್ರದ ಬಳಿಕ ನಿವೃತ್ತಿ ಘೋಷಿಸಲಿದ್ದಾರೆಯೇ ನಂ.1 ನಟಿ ರಶ್ಮಿಕಾ ಮಂದಣ್ಣ..?! ಕಾರ್ಯಕ್ರಮವೊಂದರಲ್ಲಿ ನ್ಯಾಶನಲ್ ಕ್ರಶ್ ‘ನಿವೃತ್ತಿ’ ಬಗ್ಗೆ ಮಾತಾಡಿದ್ದೇಕೆ?

ನ್ಯೂಸ್‌ ನಾಟೌಟ್: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ಕಿರಿಕ್ ಪಾರ್ಟಿಯಲ್ಲಿ ಅಭಿನಯಿಸಿದ ಬಳಿಕ ಅನೇಕ ಅವಕಾಶಗಳು ಅವರಿಗೆ ಹುಡುಕಿಕೊಂಡು ಬಂದವು. ಅವರನ್ನು ಇದೀಗ ನ್ಯಾಶನಲ್ ಕ್ರಶ್‌ ಎಂದು ಕರಿತಾರೆ.ಸತತ ಸೂಪರ್ ಹಿಟ್ ಚಿತ್ರಗಳ ಮೂಲಕ ಮನರಂಜಿಸಿದವರು. ಇದೀಗ ಮರಾಠ ರಾಣಿ, ಛತ್ರಪತಿ ಶಿವಾಜಿ ಮಹಾರಾಜ್ ಪತ್ನಿ ಮಹಾರಾಣಿ ಯೋಸುಬಾಯಿ ಭೋನ್ಸಾಲೆ ಪಾತ್ರದಲ್ಲಿ ಕಾಣಿಸಿಕೊಂಡಿರುವ ಛಾವಾ ಚಿತ್ರ ಭಾರಿ ಸೆನ್ಸೇಶನ್ ಕ್ರಿಯೇಟ್ ಮಾಡಿದೆ. ಎಲ್ಲೆಡೆ ಇದರದ್ದೇ ಹವಾ.. ಟ್ರೇಲರ್ ಲಾಂಚ್‌ ಕಾರ್ಯಕ್ರಮವೊಂದರಲ್ಲಿ ರಶ್ಮಿಕಾ ಮಂದಣ್ಣ ಮಾತುಗಳು ಅನೇಕರಿಗೆ ಅಚ್ಚರಿ ತಂದಿದೆ. ಛಾವಾ ಚಿತ್ರದ ಬಳಿಕ ನಾನು ಚಿತ್ರರಂಗದಿಂದ ನಿವೃತ್ತಿಯಾದರೂ ಸಂತೋಷ ಎಂದಿದ್ದಾರೆ.ಈ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಭಾವುಕರಾಗಿನುಡಿದಿದ್ದಾರೆ.

ದಕ್ಷಿಣ ಭಾರತದದಿಂದ ಬಂದ ನನಗೆ ಮರಾಠಾ ಸಾಮ್ರಾಜ್ಯದ ಮಹಾರಾಣಿ ಪಾತ್ರ ಮಾಡಲು ಸಿಕ್ಕಿರುವುದು ನನ್ನ ಹೆಮ್ಮೆ ಹಾಗೂ ಭಾಗ್ಯ ಎಂದು ಭಾವಿಸುತ್ತೇನೆ. ಮಹಾರಾಣಿ ಯೇಸುಬಾಯಿ ಭೋನ್ಸಾಲೆ ಪಾತ್ರ ಮಾಡುತ್ತಿರುವುದು ನನ್ನ ಜೀವಮಾನದ ಅತ್ಯಂತ ಶ್ರೇಷ್ಠ ಎಂದು ಭಾವಿಸುತ್ತೇನೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಈ ಛಾವಾ ಚಿತ್ರದ ಬಳಿಕ ನಾನು ಚಿತ್ರರಂಗದಿಂದ ನಿವೃತ್ತಿಯಾಗಲು ನನಗೆ ಬೇಸರವಿಲ್ಲ. ಈ ಪಾತ್ರದಿಂದ ನನ್ನಲ್ಲಿ ಸಾರ್ಥಕ ಭಾವವಿದೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ಈ ಚಿತ್ರದಲ್ಲಿ ವಿಕ್ಕಿ ಕೌಶಾಲ್ ದೇವರಂತೆ ಕಾಣುತ್ತಾರೆ. ವಿಕ್ಕಿ ಈ ಚಿತ್ರದ ಛಾವ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಹಲವು ಭಾರಿ ನನಗೆ ಅಚ್ಚರಿಯಾಗುತ್ತದೆ.ಕಾರಣ ಮಹಾರಾಣಿ ಪಾತ್ರಕ್ಕೆ ನನ್ನನ್ನು ಏಕೆ ಆಯ್ಕೆ ಮಾಡಿದರೂ, ನನಗೆ ಈ ಮಹತ್ತರ ಜವಾಬ್ದಾರಿ ಯಾಕೆ ಕೊಟ್ಟರು ಅನ್ನೋದು ನನ್ನನ್ನು ಕಾಡಿದೆ. ನಟನೆ, ಶೈಲಿ, ಭಾಷೆ ಎಲ್ಲವನ್ನೂ ಸತತವಾಗಿ ಅಭ್ಯಾಸ ಮಾಡುತ್ತಿದ್ದೇನೆ. ನಿರ್ದೇಶಕರು ಈ ವಿಚಾರದಲ್ಲಿ ಬಹಳ ಶಿಸ್ತಿನಿಂದ ಚಿತ್ರ ಮಾಡುತ್ತಿದ್ದಾರೆ. ಇಡೀ ತಂಡದ ಮೇಲೆ ಮಹತ್ತರ ಜವಾಬ್ದಾರಿ ಇದೆ ಎಂದು ರಶ್ಮಿಕಾ ಮಂದಣ್ಣ ಮಾತನಾಡಿದ್ದಾರೆ.ರಶ್ಮಿಕಾ ಮಂದಣ್ಣ ಮಹಾರಾಣಿಯಾಗಿ ಕಾಣಿಸಿಕೊಂಡ ಛಾವ ಚಿತ್ರದ ಕುತೂಹಲ ಹೆಚ್ಚಾಗಿದೆ.ಬಾಲಿವುಡ್ ಸಿನಿಮಾ ಇತಿಹಾಸದಲ್ಲಿ ಛಾವಾ ಚಿತ್ರ ಹೊಸ ಮೈಲಿಗಲ್ಲು ಬರೆಯುವ ಸಾಧ್ಯತೆ ಇದೆ. ಛಾವಾ ಚಿತ್ರದ ಮೇಲೆ ನಿರೀಕ್ಷೆಗಳು ಹೆಚ್ಚಾಗಿದೆ. ಬಿಗುಗಡೆಗೂ ಮೊದಲೇ ಬಾರಿ ಸಂಚಲನ ಸೃಷ್ಟಿಸಿದೆ.

Related posts

ಸಂಪಾಜೆ :ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕಾಲಾವಧಿ ಜಾತ್ರೆಗೆ ಗೊನೆ ಕಡಿಯುವ ಮುಹೂರ್ತಕ್ಕೆ ಚಾಲನೆ

ನಿಮ್ಗೆ ತಾಕತ್ತಿದ್ದರೆ ಬಜರಂಗದಳ ನಿಷೇಧ ಮಾಡಿ ನೋಡಿ, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಹುಚ್ಚ ವೆಂಕಟ್..! ಯಾವುದು ಆ ಸಿನಿಮಾ..?