Latestಕ್ರೈಂವಿಡಿಯೋವೈರಲ್ ನ್ಯೂಸ್

ಚಲಿಸುತ್ತಿದ್ದ ಬಸ್ಸಿನ ಕಿಟಕಿಗೆ ಹತ್ತಿ ಬಸ್ ಚಾಲಕನ ಮೇಲೆ ಹಲ್ಲೆಗೆ ಯತ್ನ..! ಇಲ್ಲಿದೆ ವಿಡಿಯೋ

460

ನ್ಯೂಸ್ ನಾಟೌಟ್: ಈ ವಾಹನ ಸವಾರರು ಹಾಗೂ ಚಾಲಕರ ನಡುವೆ ಆಗಾಗ ಜಗಳಗಳು ನಡೆಯುತ್ತಲೇ ಇರುತ್ತದೆ. ಹೈದರಾಬಾದ್ ನ ಮಿಯಾಪುರದಲ್ಲಿ ಆರ್ ಟಿಸಿ ಬಸ್ ಚಾಲಕನ ಮೇಲೆ ಆಟೋ ಚಾಲಕನೊಬ್ಬ ಹಲ್ಲೆಗೆ ಯತ್ನಿಸಿದ್ದಾನೆ. ಆಟೋ ಹೋಗಲು ದಾರಿ ಬಿಡಲಿಲ್ಲ ಎನ್ನುವ ಕಾರಣಕ್ಕೆ ಆಟೋ ಚಾಲಕನು ಕೋಪಗೊಂಡು ಹಲ್ಲೆ ಮಾಡಲು ಮುಂದಾಗಿದ್ದಾನೆ. ಆರ್‌ ಟಿಸಿ ಬಸ್ ಕಾಚೆಗುಡದಿಂದ ಪತೆಂಚೇರಿಗೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಇದಕ್ಕೆ ಸಂಬಂಧ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

@greatandhranews ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಆಟೋ ಚಾಲಕನು ಬಸ್ ಚಾಲಕನ ಮೇಲೆ ಹಲ್ಲೆಗೆ ಯತ್ನಿಸುತ್ತಿರುವುದನ್ನು ನೋಡಬಹುದು.

ಆಟೋ ಹೋಗಲು ದಾರಿ ಬಿಡಲಿಲ್ಲ ಎನ್ನುವ ಕಾರಣಕ್ಕೆ ಆಟೋ ಚಾಲಕನು ಕೋಪಗೊಂಡಿದ್ದು, ಚಲಿಸುತ್ತಿದ್ದ ಬಸ್ ನ ಕಿಟಕಿಗೆ ಹತ್ತಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ನೋಡಬಹುದು. ಅದೇ ವೇಳೆ ಬಸ್ ಚಾಲಕನು ಪ್ರಯಾಣಿಕರ ಬಳಿ ವಿಡಿಯೋ ಮಾಡಿ ಎಂದಿದ್ದಾನೆ. ಇತ್ತ ಆಟೋ ಚಾಲಕನು ಗಾಡಿಯನ್ನು ಸೈಡ್ ಗೆ ಹಾಕಿ ಎನ್ನುತ್ತಾ, ಬಸ್ಸಿನೊಳಗೆ ನುಗ್ಗಿ ಚಾಲಕನ ಮೊಬೈಲ್ ಕಿತ್ತುಕೊಳ್ಳುವುದನ್ನು ಕಾಣಬಹುದು. ಆ ಬಳಿಕ ಆಟೋ ಚಾಲಕ ಹಾಗೂ ಬಸ್ ಚಾಲಕನ ನಡುವೆ ವಾಗ್ವಾದ ನಡೆದಿದೆ. ಈ ಬಗ್ಗೆ ಪ್ರಕರಣ ದಾಖಲಾಗಿರುವ ಸಾಧ್ಯತೆ ಇದೆ. 

ಒಂದೇ ಮಂಟಪದಲ್ಲಿ ಹಿಂದೂ ಮತ್ತು ಮುಸ್ಲಿಂ ಜೋಡಿಗಳ ವಿವಾಹ..! ಮಳೆ ತಂದ ಅವಾಂತರ..!

ಮತ್ತೆ ಕೋವಿಡ್‌ ಪ್ರಕರಣಗಳ ಏರಿಕೆ, ಮಾಸ್ಕ್‌ ಕಡ್ಡಾಯಗೊಳಿಸಿದ ಆಂಧ್ರ..! ಕರ್ನಾಟಕದಲ್ಲಿ 33 ಪ್ರಕರಣ ಪತ್ತೆ..!

See also  ಬೆಂಗಳೂರಿನಲ್ಲಿರೋರು ಅನಕ್ಷರಸ್ಥರೆಂದು ಅವಮಾನಿಸಿದ ಒಡಿಶಾ ಯುವತಿ: ಕನ್ನಡಿಗರಿಂದ ಭಾರೀ ಆಕ್ರೋಶ,ಏನಿದು ಘಟನೆ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget