ಕರಾವಳಿ

ಚಿಟ್ ಫಂಡ್ ಹೆಸರಲ್ಲಿ ಕೋಟ್ಯಂತರ ರೂ. ಉಂಡೆನಾಮ ತಿಕ್ಕಿದ ಗಂಡ-ಹೆಂಡತಿ

ನ್ಯೂಸ್ ನಾಟೌಟ್: ಹೀಗೆ ಫೋಟೋ ಮುಂದೆ ಅದ್ಭುತವಾಗಿ ಫೋಸ್ ಕೊಟ್ಟಿರುವ ದಂಪತಿ ಅಮಾಯಕರಿಗೆ ಚಿಟ್‌ ಫಂಡ್ ಹೆಸರಲ್ಲಿ ಕೋಟ್ಯಂತರ ರೂ. ವಂಚಿಸಿ ಈಗ ಕಂಬಿ ಎಣಿಸುತ್ತಿದ್ದಾರೆ.

ಮಂಗಳೂರು ಹೊರವಲಯದ ಸುರತ್ಕಲ್ ನಲ್ಲಿ ಭಾರ್ಗವಿ ಫೈನಾನ್ಸ್ ಮತ್ತು ಚಿಟ್ ಫಂಡ್ ನಡೆಸಿ ಅಮಾಯಕರಿಗೆ ಇವರು ವಂಚಿಸಿದ ಹಿನ್ನೆಲೆಲ್ಲಿ ಸಂಸ್ಥೆಯ ಮಾಲೀಕ ಅಶೋಕ್ ಭಟ್ ಹಾಗೂ ಆತನ ಪತ್ನಿ ವಿದ್ಯಾ ಭಟ್ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಸುರತ್ಕಲ್ ಪೊಲೀಸ್‌ ಠಾಣೆಗೆ ದೀಪಕ್ ಕುಮಾರ್ ಶೆಟ್ಟಿ ಎಂಬವರು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಅಲ್ಲದೆ ಮೋಸ ಹೋದ  ಅನೇಕರು ತಮಗೆ  ನ್ಯಾಯ ದೊರಕಿಸಿಕೊಡಬೇಕೆಂದು ಇದೀಗ ಮಾಧ್ಯಮಗಳ ಮುಂದೆ ಅವಲತ್ತುಕೊಂಡಿದ್ದಾರೆ. ಸದ್ಯ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ೫ ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

Related posts

ಮಡಿಕೇರಿ: ದೇಗುಲವೊಂದರ ಪ್ರಧಾನ ಅರ್ಚಕರ ಮೇಲೆ ಹಲ್ಲೆ,ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲು,ಹಲ್ಲೆ ಮಾಡಿದ್ಯಾರು?

3ನೇ ತರಗತಿ ವಿದ್ಯಾರ್ಥಿ ಟಿಫಿನ್ ಬಾಕ್ಸ್‌ ನಲ್ಲಿ ಬಿರಿಯಾನಿ ತಂದಿದ್ದಕ್ಕೆ ಶಾಲೆಯಿಂದ ಹೊರಹಾಕಿದ ಪ್ರಾಂಶುಪಾಲ..! ಮುಸ್ಲಿಮರೆಂದು ಈ ರೀತಿ ಮಾಡಿದ್ದಾರೆ ಎಂದ ಬಾಲಕನ ತಾಯಿ..!

ಸ್ನೇಹ ಶಾಲೆಯಲ್ಲಿ ಉಚಿತ ಕಂಪ್ಯೂಟರ್ ಕೌಶಲ್ಯ ತರಬೇತಿ ಉದ್ಘಾಟನೆ