ಕರಾವಳಿಕ್ರೈಂಸುಳ್ಯ

ಬೆಳ್ಳಾರೆ: ಗಂಡ –ಹೆಂಡತಿ ಜಗಳ ವಿಷ ಸೇವಿಸಿ ಸಾವಿನಲ್ಲಿ ಅಂತ್ಯ, ಪತ್ನಿ ಸಾವು, ಪತಿ ಜೀವನ್ಮರಣ ಹೋರಾಟ

222

ನ್ಯೂಸ್ ನಾಟೌಟ್: ಗಂಡ –ಹೆಂಡತಿ ಜಗಳ ವಿಪರೀತ ಮಟ್ಟಕ್ಕೆ ತಿರುಗಿ ಸಾವಿನಲ್ಲಿ ಅಂತ್ಯವಾದ ಘಟನೆ ಕಡಬ ತಾಲೂಕಿನ ಕುದ್ಮಾರು ಗ್ರಾಮದ ಚಾಪೆಲ್ಲ ಎಂಬಲ್ಲಿ ಶನಿವಾರ  ಸಂಜೆ ನಡೆದಿದೆ. ಬೆಳ್ಳಾರೆ ಠಾಣೆಯಲ್ಲಿ ಕಲಂ  174 ಸಿ.ಆರ್.ಪಿ.ಸಿ ಪ್ರಕರಣ ದಾಖಲಾಗಿದೆ.

ಕುಸುಮ (39 ವರ್ಷ ) ಮತ್ತು ಆಕೆಯ ಪತಿ ಸಂಜೀವ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಅಂತೆಯೇ ಶನಿವಾರ ಕೂಡ ಮಾತಿಗೆ ಮಾತು ಬೆಳೆದಿದೆ. ಕೋಪದ ಭರದಲ್ಲಿ ಇಬ್ಬರು ಕೂಡ ವಿಷ ಸೇವಿಸಿದ್ದಾರೆ. ಈ ವಿಚಾರ ಸ್ಥಳೀಯರಿಗೆ ತಿಳಿದು ತಕ್ಷಣ ಅವರ ಸಂಬಂಧಿಕರಿಗೆ ವಿಚಾರವನ್ನು ತಿಳಿಸುತ್ತಾರೆ. ಅವರು ಬಂದು ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನದಲ್ಲಿದ್ದಾಗ ಕುಸುಮ ತನ್ನ ಪ್ರಾಣವನ್ನು ಕಳೆದುಕೊಂಡಿರುತ್ತಾರೆ. ಸದ್ಯ ಸಂಜೀವ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ತಿಳಿದು ಬಂದಿದೆ.

See also  ವಿಜೃಂಭಿಸಿದ ಸುಳ್ಯ ತಾಲೂಕು ಮಟ್ಟದ 27ನೇ ಕನ್ನಡ ಸಾಹಿತ್ಯ ಸಮ್ಮೇಳನ, ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು, ಆಸ್ಪತ್ರೆಯ ಪ್ರಾಂಶುಪಾಲ ಡಾ. ಲೀಲಾಧರ್ ಡಿ.ವಿಗೆ ಕನ್ನಡ ಕಸ್ತೂರಿ ಪುರಸ್ಕಾರ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget