ಕರಾವಳಿಕ್ರೈಂ

ಮದುವೆಯಾದ ಆರು ತಿಂಗಳಲ್ಲೇ ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿ ತಲಾಖ್‌ ನೀಡಿ ಹೊರದಬ್ಬಿದ ಪಾಪಿ ಪತಿ…!

265

ನ್ಯೂಸ್‌ ನಾಟೌಟ್‌: ಮದುವೆಯಾದ ಕೇವಲ ಆರು ತಿಂಗಳಲ್ಲೇ ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿ ತಲಾಖ್ ನೀಡಿದ ಅಮಾನವೀಯ ಘಟನೆ ಮಂಗಳೂರಿನ ಮಾರ್ನಮಿಕಟ್ಟೆ ಎಂಬಲ್ಲಿ ನಡೆದಿದೆ.

ಹಣ್ಣು ತರಕಾರಿ ವ್ಯಾಪಾರಿಯಾಗಿರುವ ಮಾರ್ನಮಿಕಟ್ಟೆಯ ಮಹಮ್ಮದ್ ಹುಸೇನ್ ಎಂಬಾತ ಕಳೆದ ಆರು ತಿಂಗಳ ಹಿಂದೆ ಶಬಾನಾ ಎಂಬವರನ್ನು ಎರಡನೇ ಮದುವೆಯಾಗಿದ್ದ. ಮದುವೆಯಾದ 8 ದಿನದಲ್ಲಿ ಪತ್ನಿಯಿಂದ ಹಣ ಒಡವೆ ಸೇರಿ 10 ಲಕ್ಷ ರೂಪಾಯಿ ಹುಸೇನ್ ಪೀಕಿಸಿ ಇದೀಗ ಮಾರಣಾಂತಿಕ ಹಲ್ಲೆ ನಡೆಸಿ ತಲಾಖ್ ತಲಾಖ್ ತಲಾಖ್ ಎಂದು ಶಬಾನಾ ಅವರನ್ನು ಮನೆಯಿಂದ ಹೊರದಬ್ಬಿದ ಅಮಾನವೀಯ ಘಟನೆ ನಡೆದಿದೆ. ಪತಿಯ ಅನ್ಯಾಯದ ವಿರುದ್ಧ ಪತ್ನಿ ಇದೀಗ ಮಂಗಳೂರಿನ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಶಬಾನಾ ಅವರಿಗೆ ಈ ಹಿಂದೆ ಒಂದು ಮದುವೆಯಾಗಿ ಅದರಲ್ಲಿ ಎರಡು ಮಕ್ಕಳಿವೆ. ಹುಸೇನ್‌ ಅವರನ್ನು ಮದುವೆಯಾದ ಬಳಿಕ ಗರ್ಭಿಣಿಯಾಗಿದ್ದು, ಆದರೆ ಒತ್ತಾಯಪೂರ್ವಕವಾಗಿ ಮಾತ್ರೆ ತಿನ್ನಿಸಿ ಅಬಾರ್ಷನ್ ಮಾಡಿಸಿದ್ದಾರೆ. ಬಳಿಕ ಹಣಕ್ಕಾಗಿ ಪೀಡಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಇದೀಗ ಪತಿಯ ಕಿರುಕುಳ ಮತ್ತು ತಲಾಖ್‌ ನೀಡಿದ್ದರಿಂದ ದಿಕ್ಕು ತೋಚದಂತಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಹುಸೇನ್‌ ಈ ಹಿಂದೆ ಇದ್ದ ಪತ್ನಿಗೂ ಹಣಕ್ಕಾಗಿ ಪೀಡಿಸಿ ಕೊನೆಗೆ ತಲಾಖ್ ನೀಡಿ ಇದೀಗ ಎರಡನೇ ಪತ್ನಿ ಶಬಾನಾಗೂ ಹುಸೇನ್‌ ತಲಾಖ್ ನೀಡಿದ್ದಾರೆ. ತಲಾಖ್ ನೀಡಿ ಎರಡು ಮಕ್ಕಳೊಂದಿಗೆ ಶಬಾನಾ ಅವರನ್ನು ಮನೆಯಿಂದ ಹೊರದಬ್ಬಿದ ಕಾರಣ ನನಗೆ ನ್ಯಾಯ ಕೊಡಿಸಿ ಎಂದು ಮಾಧ್ಯಮಗಳ ಮುಂದೆ ಶಬಾನಾ ಅಳಲು ತೋಡಿಕೊಂಡಿದ್ದಾರೆ. ಪತಿಯ ಹಲ್ಲೆಯಿಂದ ಗಂಭಿರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ಇದೀಗ ತ್ರಿಪಲ್ ತಲಾಖ್ ನೀಡಿ ಅನ್ಯಾಯವೆಸಗಿದ್ದಾರೆ. ನನಗಾದ ಪರಿಸ್ಥಿತಿ ಯಾವುದೇ ಹೆಣ್ಣು ಮಗಳಿಗೆ ಆಗ ಬರಬಾರದೆಂದು ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.

See also  ಸುಳ್ಯಕ್ಕೆ ಬರುತ್ತಿದ್ದಾರೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget