Latestಕರಾವಳಿ

ವಿಟ್ಲ:ಪತ್ನಿಯ ಸೀಮಂತದ ದಿನವೇ ಪತಿ ಕುಸಿದು ಬಿದ್ದು ಸಾವು ! ಏನಿದು ಹೃದಯವಿದ್ರಾವಕ ಘಟನೆ?

1.2k

ನ್ಯೂಸ್‌ ನಾಟೌಟ್: ತನ್ನ ಮಗುವಿನ ಬಗ್ಗೆ ನೂರಾರು ಕನಸುಗಳನ್ನು ಹೊತ್ತು ಕೊಂಡು , ತನ್ನ ಪತ್ನಿಯ ಹೊಟ್ಟೆಯಲ್ಲಿರುವ ಮಗುವಿನ ಆಗಮನಕ್ಕಾಗಿ ಕಾದು ಕುಳಿತು ಕೊಂಡಿದ್ದ ಮಗುವಿನ ತಂದೆ ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬಗ್ಗೆ ವರದಿಯಾಗಿದೆ.

ದುರಂತವೆಂದರೆ ತನ್ನ ಪತ್ನಿಯ ಸೀಮಂತದ ದಿನವೇ ಪತಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಈ ಘಟನೆ ವಿಟ್ಲದ ಕನ್ಯಾನದಲ್ಲಿ (ಮೇ ೨೩) ನಡೆದಿದೆ.ಕನ್ಯಾನ ನಿವಾಸಿ ಮಿತ್ತನಡ್ಕ ಪಿಕಪ್ ಚಾಲಕ ಸತೀಶ್ (33) ಮೃತ ವ್ಯಕ್ತಿ.ಪತ್ನಿಯ ಸೀಮಂತದ ದಿನ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕೆತ್ಸೆ ಸ್ಪಂದಿಸದೆ ಮೃತರಾಗಿದ್ದಾರೆ ಎಂದು ತಿಳಿದು ಬಂದಿದೆ.

See also  ಗೋಳಿತ್ತೊಟ್ಟು: ಪಿಡಿಒ ಪರ ದಲಿತ ಸಂಘರ್ಷ ಸಮಿತಿ, ಊರವರ ಶಕ್ತಿ ಪ್ರದರ್ಶನ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget