Latestಕ್ರೈಂಬೆಂಗಳೂರುವೈರಲ್ ನ್ಯೂಸ್

ಮಕ್ಕಳ ಜೊತೆ ಪತ್ನಿ ಮನೆ ಬಿಟ್ಟು ಹೋದದ್ದಕ್ಕೆ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ..! ಮೂರಂತಸ್ತಿನ ಮನೆ ಈಗ ಸ್ಮಶಾನ..!

5.3k

ನ್ಯೂಸ್‌ ನಾಟೌಟ್‌: ಪತ್ನಿ ಮಕ್ಕಳನ್ನೂ ಕರೆದುಕೊಂಡು ಮನೆ ಬಿಟ್ಟುಹೋದ ಚಿಂತೆಯಲ್ಲಿ ನೇಣಿಗೆ ಪತಿ ಶರಣಾದ ಘಟನೆ ಬೆಂಗಳೂರಿನ ಕೆ.ಪಿ ಅಗ್ರಹಾರದ ಬಳಿ ನಡೆದಿದೆ.

ಗೋವರ್ಧನ್ ಮತ್ತು ಪ್ರಿಯಾ ಎಂಬವರು ಕಳೆದ 7 ವರ್ಷದ ಹಿಂದೆ ಮದುವೆಯಾಗಿದ್ದ ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ. ಬೆಂಗಳೂರಿನ ಕೆ.ಪಿ ಅಗ್ರಹಾರದಲ್ಲಿರುವ 12ನೇ ಕ್ರಾಸ್ ​ನಲ್ಲಿರುವ ಸ್ವಂತ ಮನೆಯಲ್ಲಿ ವಾಸವಾಗಿದ್ದರು. ಮೂರಂತಸ್ತಿನ ಮನೆಯಲ್ಲಿ ಕೆಳ ಮಹಡಿಯಲ್ಲಿ ಗೋವರ್ಧನ್ ತಾಯಿ ಮತ್ತು ತಮ್ಮ ವಾಸವಿದ್ರೆ 3ನೇ ಮಹಡಿಯಲ್ಲಿ ಗೋವರ್ಧನ್ ದಂಪತಿ ಇದ್ದರು.

ಜೀವನಕ್ಕೇನು ತೊಂದರೆ ಇರ್ಲಿಲ್ಲ. ಆದರೆ ಬರುತ್ತಿರೋ ಸಂಬಳ ಸಾಲುತ್ತಿರಲಿಲ್ಲ, ಈ ತಲೆಬಿಸಿಗೆ ಮನೆಗೆ ಕುಡಿದು ಬರ್ತಿದ್ದ ಗಂಡನ ಜೊತೆರ ಹೆಂಡತಿ ಜಗಳವಾಡುತ್ತಿದ್ದಳು. ಮನೆಯಲ್ಲಿ ಗಲಾಟೆ ಮಾಡ್ತಿದ್ದ ಪತ್ನಿ ಪದೇ ಪದೇ ತನ್ನ ತವರು ಮನೆಗೆ ಹೋಗ್ತಿದ್ದಳಂತೆ.. ಅದೇ ರೀತಿ ಒಂದು ತಿಂಗಳ ಹಿಂದೆ ಕೂಡ ಗಲಾಟೆ ಆಗಿ ಪತ್ನಿ ಮನೆ ಬಿಟ್ಟು ತವರು ಮನೆ ಸೇರಿದ್ದಳು. ಇಬ್ಬರು ಮಕ್ಕಳನ್ನು ತನ್ನ ಜೊತೆಗೆ ಕರೆದುಕೊಂಡು ಹೋಗಿದ್ದಳು ಎನ್ನಲಾಗಿದೆ. ಅದೇ ನೋವಿನಲ್ಲಿದ್ದ ಗೋವರ್ಧನ್ ದುಡುಕಿನ ನಿರ್ಧಾರ ಕೈಗೊಂಡಿದ್ದಾನೆ. ಕೆಲಸ ಮುಗಿಸಿ ಬಂದವನಿಗೆ ಸಂಜೆ ತಾಯಿ ಅಡುಗೆ ಮಾಡಿ ತಟ್ಟೆಯಲ್ಲಿ ಅನ್ನ ಹಾಕಿ ಕೊಟ್ಟಿದ್ದಾರೆ. ಊಟ ಕೂಡ ಮಾಡದೇ ಆತ, ಫ್ಯಾನಿಗೆ ನೇಣು ಬಿಗಿದುಕೊಂಡು ಜೀವ ತೆಗೆದುಕೊಂಡಿದ್ದಾನೆ.

ನಿನ್ನೆ(ಜೂ.9) ಬೆಳಗ್ಗೆ ಎದ್ದು ಎಲ್ಲರು ತಮ್ಮ ತಮ್ಮ ಕೆಲಸಕ್ಕೆ ಹೋಗಿದ್ದಾರೆ. ಫೋನ್ ಮಾಡಿದ್ರೂ ಗೋವರ್ಧನ್ ಕರೆ ಸ್ವೀಕರಿಸುತ್ತಿರಲಿಲ್ಲ, ಹಾಗಾಗಿ ಸಂಜೆ 4 ಗಂಟೆಗೆ ಬಂದು ನೋಡಿದಾಗ ಬಾಗಿಲು ಒಳಗಿನಿಂದ ಲಾಕ್ ಅಗಿತ್ತು. ಎಷ್ಟು ಬಡಿದರೂ ತೆರೆಯದೇ ಇದ್ದಾಗ ಬಾಗಿಲು ಒಡೆದು ಒಳ ಹೋಗಿದ್ದಾರೆ. ಅಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.

ಚಾರಣಕ್ಕೆ ಬಂದಿದ್ದ 10 ವಿದ್ಯಾರ್ಥಿಗಳು ದಾರಿ ತಪ್ಪಿ ಕಾಡಿನಲ್ಲಿ ನಾಪತ್ತೆ..! ಮಂಗಳೂರಿನ ಬಂಡಾಜೆ ಮಾರ್ಗವಾಗಿ ಹತ್ತಿದ್ದ ವಿದ್ಯಾರ್ಥಿಗಳು ಮಧ್ಯರಾತ್ರಿ ಪತ್ತೆ..!

See also  ಬಂಡುಕೋರರ ವಶವಾದ ಸಿರಿಯಾ, ಅಧ್ಯಕ್ಷ ರಷ್ಯಾಕ್ಕೆ ಪಲಾಯನ..! ಸಿರಿಯಾದಲ್ಲಿರುವ ಭಾರತೀಯರು ಸ್ವದೇಶಕ್ಕೆ ವಾಪಾಸ್ಸಾಗುವಂತೆ ಸೂಚನೆ..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget