ಕ್ರೈಂಬೆಂಗಳೂರುವೈರಲ್ ನ್ಯೂಸ್

ನೇಣು ಬಿಗಿದುಕೊಳ್ಳುವಂತೆ ಪತ್ನಿಗೆ ಹೆದರಿಸಲು ಹೋಗಿ ಪ್ರಾಣ ಕಳೆದುಕೊಂಡ ಪತಿ..! ಏನಿದು ವಿಡಿಯೋ ಕಾಲ್ ಪ್ರಕರಣ..?

251

ನ್ಯೂಸ್ ನಾಟೌಟ್: ಪತ್ನಿಗೆ ವಿಡಿಯೋ ಕಾಲ್ ಮಾಡಿ ಮನೆಗೆ ಬಂದಿಲ್ಲ ಅಂದರೆ ನೇಣು ಬಿಗಿದುಕೊಳ್ಳುತ್ತೇನೆ ಎಂದು ಹೆದರಿಸಲು ಹೋಗಿ ಅನಿರೀಕ್ಷಿತವಾಗಿ ಪತಿ ಮೃತಪಟ್ಟಿರುವಂತಹ ಘಟನೆ ಬೆಂಗಳೂರಿನ ಬಾಗಲಗುಂಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ(ಮೇ.15) ನಡೆದಿದೆ.

ಅಮಿತ್ ಕುಮಾರ್​​ ಮೃತ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಪತ್ನಿಗೆ ವಿಡಿಯೋ ಕಾಲ್​ ಮಾಡಿ ನೇಣು ಹಾಕಿ ಕೊಳ್ಳುತ್ತೇನೆ ನೋಡು ಎಂದು ಹೆದರಿಸುತ್ತಿರುವಾಗಲೇ ಪ್ರಾಣ ಬಿಟ್ಟಿದ್ದಾನೆ. ಜಿಮ್ ಟ್ರೈನರ್ ಅಮಿತ್ ಒಂದು ವರ್ಷದ ಹಿಂದೆ ಜಿಮ್‌ ಪಕ್ಕದಲ್ಲೇ ವಾಸವಿದ್ದ ಹಾಸನ ಮೂಲಕ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಪೋಷಕರ ವಿರೋಧದ ನಡುವೆ ಇವರು ವಿವಾಹವಾಗಿದ್ದರು. ಮದುವೆ ಬಳಿಕ ಅಮಿತ್ ಕುಮಾರ್ ಪತ್ನಿ ಫ್ರೆಂಡ್ಸ್ ಜೊತೆಗೆ ಪದೇ ಪದೆ ಫೋನ್ ಕರೆಯಲ್ಲಿ ಹೊತ್ತು ಕಳೆಯುತ್ತಿದ್ದಳು. ಇದೇ ವಿಚಾರಕ್ಕೆ ಆಗಾಗ್ಗೆ ಪತಿ- ಪತ್ನಿ ನಡುವೆ ಆಗಾಗ ಜಗಳವಾಗುತ್ತಿತ್ತು.(gym trainer)

ಹೀಗಾಗಿ ಪತ್ನಿ ಬೇರೊಂದು ಕಡೆ ವಾಸವಾಗಿದ್ದಳು. ನಿನ್ನೆ ಸಂಜೆ ಮರಳಿ ಮನೆಗೆ ಬರುವಂತೆ ಅಮಿತ್‌ ಪತ್ನಿಗೆ ವಿಡಿಯೋ ಕಾಲ್ ಮಾಡಿ, ಮನೆಗೆ ಬಂದಿಲ್ಲ ಅಂದರೆ ನೇಣು ಬಿಗಿದುಕೊಳ್ಳುವುದಾಗಿ ಹೆದರಿಸಲು ಮುಂದಾಗಿದ್ದಾನೆ. ಕತ್ತಿಗೆ ಹಗ್ಗ ಹಾಕಿಕೊಂಡು ವೀಡಿಯೋ ಕಾಲ್‌ನಲ್ಲಿ ಹೆದರಿಸಿದ್ದಾನೆ. ಈ ವೇಳೆ ಮೊಬೈಲ್ ಕೈ ಜಾರಿದ್ದು, ಅದನ್ನು ಹಿಡಿಯಲೆಂದು ಹೋದಾಗ ಅಚಾನಕ್ ಆಗಿ ಉರುಳು ಬಿಗಿದುಕೊಂಡಿದೆ. ಅಮಿತ್‌ ಅಲ್ಲೇ ಮೃತಪಟ್ಟಿದ್ದಾನೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಾಗಿದೆ.

https://newsnotout.com/2024/05/narendra-modi-and-comedian-in-varanasi
See also  ಕಾಸರಗೋಡು: ಕತ್ತಿಯಿಂದ ಪತ್ನಿ ಮೇಲೆ ಹಲ್ಲೆ! ರೊಚ್ಚಿಗೆದ್ದ ಪತ್ನಿಯಿಂದ ಪತಿಯ ಬರ್ಬರ ಕೊಲೆ!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget