ಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಪತ್ನಿ ಮನೆ ಬಿಟ್ಟು ಹೋಗುತ್ತಿರುವ ಕೋಪಕ್ಕೆ ಕಾರಿನಿಂದ ಗುದ್ದಿಸಿದ ಪತಿ..! ಭೀಕರ ಹಲ್ಲೆಯ ದೃಶ್ಯ ವೈರಲ್..!

ನ್ಯೂಸ್ ನಾಟೌಟ್: ಗಂಡ ಹೆಂಡತಿ ಜಗಳದಿಂದ ರಸ್ತೆಯಲ್ಲಿ ಕಾರುಗಳ ಮೂಲಕ ಗುದ್ದಿಕೊಂಡ ವಿಚಿತ್ರ ಘಟನೆ ವರದಿಯಾಗಿದೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಿನ್ನೆ ಮಂಗಳವಾರ(ಆ.20) ಎಸ್‌ಯುವಿ ಚಾಲಕನೊಬ್ಬ ಉದ್ದೇಶಪೂರ್ವಕವಾಗಿ ತನ್ನ ವಾಹನವನ್ನು ಮತ್ತೊಂದು ಕಾರಿಗೆ ಎರಡು ಬಾರಿ ಡಿಕ್ಕಿ ಹೊಡೆದಿದ್ದರಿಂದ ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ.

ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನನಿಬಿಡ ರಸ್ತೆಯಲ್ಲಿ ಕಪ್ಪು ಬಣ್ಣದ ಎಸ್‌ಯುವಿ ಪದೇ ಪದೇ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆಯುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ಘಟನೆಯಲ್ಲಿ ಒಂದು ಮಗು ಸೇರಿ ನಾಲ್ವರಿಗೆ ಗಾಯಗಳಾಗಿವೆ.

ಕಪ್ಪು ಬಣ್ಣದ ಎಸ್‌ಯುವಿ ಚಲಾಯಿಸುತ್ತಿದ್ದ ವ್ಯಕ್ತಿ ಮತ್ತು ಆತನ ಪತ್ನಿಯ ನಡುವಿನ ಜಗಳ ಈ ಘಟನೆಗೆ ಕಾರಣ ಎನ್ನಲಾಗಿದೆ. ಇತರ ಕುಟುಂಬ ಸದಸ್ಯರು ಮಧ್ಯಪ್ರವೇಶಿಸಿ ಮಹಿಳೆ ಮತ್ತು ದಂಪತಿಯ ಮಗುವನ್ನು ತಮ್ಮೊಂದಿಗೆ ಕರೆದೊಯ್ಯಲು ನಿರ್ಧರಿಸಿದ ನಂತರ, ಕೋಪಗೊಂಡ ವ್ಯಕ್ತಿ ಉದ್ದೇಶಪೂರ್ವಕವಾಗಿ ಅವರು ಚಲಿಸುತ್ತಿದ್ದ ಬಿಳಿ ಬಣ್ಣದ ಕಾರಿಗೆ ತನ್ನ ಕಪ್ಪು ಬಣ್ಣದ ಕಾರಿನ ಮೂಲಕ ಢಿಕ್ಕಿ ಹೊಡೆಸಿದ್ದಾನೆ. ಫಾರ್ಚುನರ್ ಕಾರಿನ ಹಿಂಬದಿಯ ಸೀಟಿನಲ್ಲಿ ತಾಯಿ ಮತ್ತು ಮಗು ಕುಳಿತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Click

https://newsnotout.com/2024/08/fir-on-protested-perents-kannada-news-school-students-issue/
https://newsnotout.com/2024/08/serial-ki-kannada-news-kkenya-42-womens-are-suspence-nomore-j/
https://newsnotout.com/2024/08/baby-bites-snake-kannada-news-and-doctor-reveals-fact/
https://newsnotout.com/2024/08/bantwal-netravathi-river-issue-kannada-news-body-found/
https://newsnotout.com/2024/08/hijra-case-boy-suspence-issue-at-bengaluru-kannada-news-police/
https://newsnotout.com/2024/08/cm-siddaramayya-muda-case-and-his-wife-wrote-a-latter-t/

Related posts

ಉಪಚುನಾವಣೆ ಹೊಸ್ತಿಲಲ್ಲಿ ಮಿಡ್‌ನೈಟ್‌ ಆಪರೇಷನ್‌ ಸಕ್ಸಸ್‌,ಯೋಗೇಶ್ವರ್‌ ಕಾಂಗ್ರೆಸ್‌ ಗೆ ಸೇರ್ಪಡೆ..!ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ರಾಜಕೀಯ ರಣತಂತ್ರ..!

ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ, ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಐವರು ಶಂಕಿತ ಉಗ್ರರ ಬಂಧನ

ಮತ್ತೆ ಸದ್ದು ಮಾಡುತ್ತಿರುವ ಮಥುರಾ ಕೃಷ್ಣ ಜನ್ಮಭೂಮಿ ವಿವಾದ..! ಮಸೀದಿ ಪರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್‌