ಕ್ರೀಡೆ/ಸಿನಿಮಾಕ್ರೈಂ

ಭೀಕರ ರಸ್ತೆ ಅಪಘಾತ: ಮಾನವೀಯತೆ ಮೆರೆದ ಕಿಚ್ಚ! ವಿಡಿಯೋ ವೈರಲ್

ನ್ಯೂಸ್‌ನಾಟೌಟ್‌: ರಸ್ತೆಯಲ್ಲಿ ಭೀಕರ ಅಪಘಾತಕ್ಕೊಳಗಾಗಿ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ವ್ಯಕ್ತಿಯನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಉಪಚರಿಸಿ, ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಆಕ್ಸಿಡೆಂಟ್ ಜಾಗದಲ್ಲಿ ಮನುಷ್ಯತ್ವ ಗೊತ್ತಿಲ್ಲದ ಜನಕ್ಕೆ ಉಗಿದು ಬುದ್ಧಿ ಹೇಳಿದ ಅಭಿನಯ ಚಕ್ರವರ್ತಿ ಎಂಬ ಶೀರ್ಷಿಕೆಯೊಂದಿಗೆ ರಾಜು ಎಂಬವರು ವೈರಲ್ ವಿಡಿಯೋವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

https://www.facebook.com/reel/3008084429496787

ಅಪರಿಚಿತ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಭೀಕರ ಅಪಘಾತಕ್ಕೆ ಒಳಗಾಗಿ ಕರುಳು ಹೊರ ಬಂದು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರೂ ಯಾರೊಬ್ಬರೂ ಹತ್ತಿರ ಬಂದು ಸಹಾಯ ಮಾಡಲಿಲ್ಲ. ಈ ಹೊತ್ತಿನಲ್ಲಿ ನಟ ಕಿಚ್ಚ ಸುದೀಪ ತಮ್ಮ ಕೈಗಳಲ್ಲೇ ಆತನನ್ನು ಹಿಡಿದು ಆಂಬ್ಯುಲೆನ್ಸ್ ಗೆ ವ್ಯವಸ್ಥೆ ಮಾಡಿದ್ದಾರೆ. ಆ ನಂತರ ಸುತ್ತ ನಿಂತಿದ್ದ ಜನರಿಗೆ ಬೈದು ಬುದ್ಧಿ ಹೇಳಿರುವ ದೃಶ್ಯ ಎಲ್ಲೆಡೆ ವೈರಲ್ ಆಗುತ್ತದೆ.

Related posts

ಸುಳ್ಯ: 6-7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್ ಬಲೆಗೆ, ಶರೀಫ್ ಸಿಕ್ಕಿಬಿದ್ದಿದ್ದು ಹೇಗೆ..?

ಪೊಲೀಸ್ ಠಾಣೆಗೆ ದಾಳಿ ಪ್ರಕರಣ: ಠಾಣೆಗೆ ನುಗ್ಗಿದ ಶಾಸಕರೇ ಆಗಿರಲಿ ಸಂಸದರೇ ಆಗಿರಲಿ, ಯಾರನ್ನೂ ಕೂಡ ಬಿಡುವುದಿಲ್ಲ ಎಂದ ಗೃಹ ಸಚಿವ..! ಪೊಲೀಸರಿಗೆ ಕಮಿಷನ್​ ಕೊಡಲಿಲ್ಲ ಎಂದು ಅರೆಸ್ಟ್ ಮಾಡಿದ್ದಾರೆ ಎಂದ ಸ್ಥಳೀಯರು..!

ನ್ಯಾಯಾಲಯದ ತೀರ್ಪನ್ನೇ ತಿದ್ದಿದ್ದೇಕೆ ಸ್ವಾಮೀಜಿ..? ಸ್ವಾಮಿಜಿ ವಿರುದ್ಧ ಕ್ರಿಮಿನಲ್‌ ಕೇಸ್ ಗೆ ಆದೇಶಿಸಿದ ಜಿಲ್ಲಾಧಿಕಾರಿ! ಯಾರು ಆ ಸ್ವಾಮೀಜಿ?