Uncategorizedಕರಾವಳಿ

ಹುಕ್ರಪ್ಪಣ್ಣನ ಅಕ್ರಮ ಮದ್ಯದಂಗಡಿಗೆ ಪೊಲೀಸರ ದಾಳಿ, ಮದ್ಯದ ಬಾಟಲಿ ಹಿಡಿದುಕೊಂಡೇ ನಾಲ್ವರು ಪರಾರಿ

ನ್ಯೂಸ್ ನಾಟೌಟ್: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಪ್ರಕರಣ ಅಲ್ಲಲ್ಲಿ ಬೆಳಕಿಗೆ ಬರುತ್ತಿದೆ. ಈ ನಡುವೆ ಪೊಲೀಸರ ಕ್ಷಿಪ್ರ ದಾಳಿಯೂ ಹೆಚ್ಚುತ್ತಿದೆ. ಇದೀಗ ಪುತ್ತೂರಿನ ಇರ್ದೆ ಗ್ರಾಮದ ಮೇರ್ವೆ ಎಂಬಲ್ಲಿ ಹುಕ್ರಪ್ಪ ಪೂಜಾರಿಯವರು ಅಕ್ರಮವಾಗಿ ಮದ್ಯದಂಗಡಿ ತೆರೆದು ಅಲ್ಲಿ ಮಾರಾಟ ಮಾಡುತ್ತಿದ್ದರು. ಈ ವಿಷಯ ಅರಿತು ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದಾರೆ.

ಪೊಲೀಸ್ ಉಪ ನಿರೀಕ್ಷಕ ಜಂಬೂರಾಜ್ ಬಿ ಮಹಾಜನ್, ಸಿಬ್ಬಂದಿ ಹುಕ್ರಪ್ಪ ಅವರನ್ನು ವಶಕ್ಕೆ ಪಡೆದುಕೊಂಡರು. ಇದೇ ವೇಳೆ ಸ್ಥಳದಲ್ಲಿದ್ದ ಮೂವರು ಪರಾರಿಯಾಗಿದ್ದಾರೆ. ಆರೋಪಿಯ ಬಳಿ 90 ML ನ ಮದ್ಯ ತುಂಬಿದ 49 ಪ್ಯಾಕೆಟ್ ( ಒಟ್ಟು 4.410 ಲೀಟರ್ ) ಪತ್ತೆಯಾಗಿರುತ್ತದೆ. ಮದ್ಯ ಮಾರಾಟದಿಂದ ಗಳಿಸಿದ 100/- ರೂ. ನಗದು ದೊರಕಿದೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 43-2024 ಕಲಂ KARNATAKA EXCISE ACT, 1965 (U/s-32,34) ರಂತೆ ಪ್ರಕರಣ ದಾಖಲಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಕರಾವಳಿಯ ದೇಗುಲಗಳಲ್ಲಿ ಮುಂದುವರಿದ ವ್ಯಾಪಾರ ಧರ್ಮ ದಂಗಲ್..! ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈ ವರ್ಷವೂ ಅನ್ಯಮತೀಯರ ವ್ಯಾಪಾರಕ್ಕೆ ಬಹಿಷ್ಕಾರ..!

ಅಗ್ನಿ ಅವಘಡದಿಂದ ಪಾರಾದ ವಿದ್ಯಾರ್ಥಿಗಳು,ಕಟ್ಟಡದಿಂದ ಜಿಗಿದೇ ಬಿಟ್ಟರು!ವಿಡಿಯೋ ವೈರಲ್..

ಎಸ್ ಎಸ್ ಎಫ್ ಸುಳ್ಯ ವಿಭಾಗ ವತಿಯಿಂದ 308ನೇ ರಕ್ತದಾನ ಶಿಬಿರ, ಸಂಘಟನೆಯ ಕಾರ್ಯಕ್ಕೆ ಶಾಸಕಿ ಕು.ಭಾಗೀರಥಿ ಮುರುಳ್ಯ ಶ್ಲಾಘನೆ