ಕ್ರೀಡೆ/ಸಿನಿಮಾಬೆಂಗಳೂರುವೈರಲ್ ನ್ಯೂಸ್

ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಹುಚ್ಚ ವೆಂಕಟ್..! ಯಾವುದು ಆ ಸಿನಿಮಾ..?

166

ನ್ಯೂಸ್‌ನಾಟೌಟ್‌: ವಿಚಿತ್ರ ವರ್ತನೆಗಳಿಂದ, ಭಾಷೆ, ಲುಕ್‌ನಿಂದಲೇ ಸುದ್ದಿಯಾಗಿದ್ದ ಹುಚ್ಚ ವೆಂಕಟ್. ಸಿನಿಮಾ ರಂಗದಲ್ಲಿ ಕೆಲ ವರ್ಷಗಳು ಸುದ್ದಿಯಾಗಿ ಮತ್ತೆ ವಿವಾದಗಳಿಂದಾಗಿ ಮರೆಯಾದರು. ಈಗ ಮತ್ತೆ ಸಿನಿಮಾ ತೆರೆಯಲ್ಲಿ ಕಾಣಿಸಿಕೊಳ್ಳುವ ಸೂಚನೆ ನೀಡಿದ್ದಾರೆ.

ಹುಚ್ಚ ವೆಂಕಟ್ ಹೆಸರು ಕೇಳಿದ ತಕ್ಷಣ ಕಣ್ಣ ಮುಂದೆ ಬರುವುದು ಅವರ ಕಣ್ಣುಗಳು ಮತ್ತು ಕೆದರಿದ ಕೂದಲಿನ ಮುಖ. ಮತ್ತೆ ಏನು ಅವಾಂತರ ಮಾಡಿಕೊಂಡರೋ, ಯಾವ ಬೀದಿಯಲ್ಲಿ ಮತ್ತೆ ಜಗಳ ಮಾಡಿಕೊಂಡರೇ ಎಂದು ಒಂದು ಕ್ಷಣ ಅನಿಸುವುದು ನಿಜ. ಸಿನಿಮಾಗಳಲ್ಲಿ ಹೆಣ್ಣು ಮಕ್ಕಳನ್ನು ಹೀಗೆಯೇ ತೋರಿಸಬೇಕು. ಹೆಣ್ಣು ಮಕ್ಕಳು ಬಟ್ಟೆ ಬಿಚ್ಚಿ ಕುಣಿಯೋ ಸಿನಿಮಾಗಳನ್ನ ಬ್ಯಾನ್ ಮಾಡಬೇಕು ಎಂದು ಸಾಕಷ್ಟು ಹೋರಾಟ ಮಾಡಿದ್ದರು ವೆಂಕಟರಾಮ್ ಲಕ್ಷ್ಮಣ್ ಅಂದರೆ ಹುಚ್ಚ ವೆಂಕಟ್. ಹುಚ್ಚ ವೆಂಕಟ್ ಸಿನಿಮಾಗಳಲ್ಲಿ ನಟಿಸುವುದನ್ನು ಬಿಟ್ಟು ತುಂಬಾ ವರ್ಷಗಳಾಗಿವೆ.

ಅವರ ನಟನೆಯ ಸಿನಿಮಾ ರಿಲೀಸ್ ಆಗಿ ವರ್ಷಗಳೇ ಕಳೆದಿವೆ. ಈಗ ಮತ್ತೆ ಕಿರು ಚಿತ್ರದ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ನಟ, ನಿರ್ಮಾಪಕ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಮತ್ತೆ ಸಿನಿಮಾ ರಂಗಕ್ಕೆ ರೀ ಎಂಟ್ರಿ ನೀಡುತ್ತಿದ್ದಾರೆ.

ಡಾ. ವಿಷ್ಣುವರ್ಧನ್ ಅವರ ಅಭಿಮಾನಿ ಸಂಘವಾದ ಡಾ.ವಿಷ್ಣು ಸೇನಾ ಸಮಿತಿ ನಿರ್ಮಾಣದಲ್ಲಿ ಮೂಡಿ ಬಮದಿರುವ “ವಿಷ್ಣು ಮಾರ್ಗ” ಕಿರುಚಿತ್ರದ ಮೂಲಕ ಹುಚ್ಚ ವೆಂಕಟ್ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. “ವಿಷ್ಣುಮಾರ್ಗ” ಕಿರುಚಿತ್ರದಲ್ಲಿ ಹುಚ್ಚ ವೆಂಕಟ್ ಅವರು, ಸಾಹಸ ಸಿಂಹ ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದಾರೆ. “ವಿಷ್ಣುಮಾರ್ಗ” ಕಿರುಚಿತ್ರದ ಟೀಸರ್ ಮತ್ತು ಟ್ರೈಲರ್ ರಿಲೀಸ್ ಆಗಿದ್ದು, ಫೆಬ್ರವರಿ 29 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.

See also  ಜಿಲ್ಲಾಸ್ಪತ್ರೆಯಿಂದ ಕಳವಾದ ನವಜಾತ ಶಿಶುವನ್ನು 36 ಗಂಟೆಯೊಳಗೆ ತಾಯಿಯ ಮಡಿಲಿಗೆ ಸೇರಿಸಿದ ಪೊಲೀಸರು..! ಭಾವುಕರಾದ ಪೋಷಕರು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget