ನ್ಯೂಸ್ ನಾಟೌಟ್:ನಟ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿ ಜತೆ ಸಂಕ್ರಾಂತಿ ಆಚರಣೆ ಮಾಡುತ್ತಿದ್ದಾರೆ. ಇಬ್ಬರು ಫಾರಂ ಹೌಸ್ನಲ್ಲಿ ಪ್ರಾಣಿಗಳ ಆರೈಕೆ ಮಾಡುತ್ತಿರುವ ಚಿತ್ರ ಇದೀಗ ವೈರಲ್ ಆಗಿದೆ.ದರ್ಶನ್ ಪ್ರತಿವರ್ಷವೂ ಸಂಕ್ರಾಂತಿ ಹಬ್ಬವನ್ನು ತಮ್ಮ ಫಾರಂ ಹೌಸ್ನಲ್ಲಿ ಆಚರಣೆ ಮಾಡುತ್ತಾರೆ. ಹೀಗಾಗಿ ಈ ಬಾರಿಯೂ ಮೈಸೂರಿನ ಫಾರಂಹೌಸ್ನಲ್ಲಿ ವಿಶೇಷವಾಗಿ ಎತ್ತುಗಳು, ಹಸು, ಕುದುರೆ ಇನ್ನಿತರೆ ಪ್ರಾಣಿಗಳಿಗೆ ಸ್ನಾನ ಮಾಡಿಸಿ, ಅಲಂಕಾರ ಮಾಡಿಸಿ ಅವುಗಳನ್ನು ಆರೈಕೆ ಮಾಡುವುದರ ಮೂಲಕ ಹಬ್ಬ ಆಚರಿಸಿದರು.
ಫಾರಂ ಹೌಸ್ನಲ್ಲಿ ದರ್ಶನ್ ಹಾಗೂ ವಿಜಯಲಕ್ಷ್ಮಿ ಪ್ರಾಣಿಗಳನ್ನು ಆರೈಕೆ ಮಾಡುತ್ತಿರುವ ಚಿತ್ರ ಇದೀಗ ವೈರಲ್ ಆಗಿದೆ. ದರ್ಶನ್ ಹಾಗೂ ವಿಜಯಲಕ್ಷ್ಮಿ ಇಬ್ಬರೂ ಸಹ ಚಿತ್ರದಲ್ಲಿ ಮುಖ ತೋರಿಸಿಲ್ಲ.ಆದರೂ ಪ್ರಾಣಿಗಳ ಮೇಲಿನ ವಿಶೇಷ ಕಾಳಜಿಯೊಂದಿಗೆ ಅವರು ತಮ್ಮ ಮುದ್ದಿನ ನಾಯಿಯನ್ನು ಫಾರಂ ಹೌಸ್ಗೆ ತೆಗೆದುಕೊಂಡು ಹೋಗಿದ್ದಾರೆ. ಆ ಚಿತ್ರಗಳು ಕ್ಯಾಮರಾದಲ್ಲಿ ಸೆರೆಯಾಗಿವೆ.