ಕರಾವಳಿಸುಳ್ಯ

ಮನೆಗೆ ನುಗ್ಗಿ ಮಹಿಳೆಯ ಚಿನ್ನ ಸರ ಕಳವು

89
Spread the love

ನ್ಯೂಸ್ ನಾಟೌಟ್ : ಮಹಿಳೆಯೊಬ್ಬರ ಮನೆಗೆ ನುಗ್ಗಿ ಕಳ್ಳನೊಬ್ಬ ಮಹಿಳೆಯ ಕುತ್ತಿಗೆಯಲ್ಲಿದ್ದ ಸರವನ್ನು ಎಳೆದು ಪರಾರಿಯಾಗಿದ್ದಾನೆ. ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಅಡ್ಕಾರಿನ ಬೈತಡ್ಕ ವೈಲ್ಡ್ ಕೆಫೆ ಬಳಿ ಈ ಘಟನೆ ನಡೆದಿದೆ.

ಬೈತಡ್ಕ ನಿವಾಸಿ ದಿವಂಗತ ಶಿವರಾಯವರ ಪತ್ನಿ ಕಮಲ (64) ಇವರ ಮನೆಗೊಬ್ಬ ಕಳ್ಳನೋರ್ವ ನುಗ್ಗಿ ಮಹಿಳೆಯ ಚಿನ್ನ ಸರವನ್ನು ಕಳವು ಮಾಡಿದ್ದಾನೆ. ಈ ಮಹಿಳೆ ಒಬ್ಬರೆ ಇರುವ ವೇಳೆಗೆ ಒಬ್ಬ ವ್ಯಕ್ತಿ ಮೋಟರ್ ಸೈಕಲ್ ನಲ್ಲಿ ಬಂದು ಕೆಟಿ .ರಾಜ ಅವರ ಮನೆ ಎಲ್ಲಿ ಎಂದು ಕೇಳಿದ, ಆಗ ಮಹಿಳೆ ಗೊತ್ತಿಲ್ಲ ಎಂದು ಹೇಳಿದಾಗ ಸ್ವಲ್ಪ ವಿಶ್ರಾಂತಿ ಪಡೆಯಬಹುದೇ? ಎಂದು ಕೇಳಿ ಬಳಿಕ ಕುಡಿಯಲು ನೀರು ಕೇಳಿದ್ದ . ಆಕೆ ನೀರು ತರಲು ಎಂದು ಮನೆಯೊಳಗೆ ಹೋದಾಗ ಆತ ಹಿಂದೆಯೇ ಬಂದು ಮಹಿಳೆಯ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದಿದ್ದಾನೆ. ಬೊಬ್ಬೆ ಹಾಕಿದರೆ ಕೊಂದು ಬಿಡುತ್ತೇನೆ ಎಂದು ಬೆದರಿಕೆಯೊಡ್ಡಿದ್ದಾನೆ . ಕುತ್ತಿಗೆಯಲ್ಲಿದ್ದ ಸರವನ್ನು ಆತ ಹಿಡಿದೆಳೆದಿದ್ದಾನೆ. ಈ ವೇಳೆ ಮಹಿಳೆ ಸರವನ್ನು ಗಟ್ಟಿ ಹಿಡಿದುಕೊಂಡಿದ್ದಾಳೆ. ಇಬ್ಬರ ಎಳೆದಾಟದ ನಡುವೆ ಸರ ತುಂಡಾಗಿದೆ. ಆಕೆಯನ್ನು ನೆಲಕ್ಕೆ ದೂಡಿ ಹಾಕಿ ಅರ್ಧ ಸರವನ್ನು ಕಿತ್ತುಕೊಂಡು ಮೋಟರ್ ಸೈಕಲ್ ಏರಿ ಪರಾರಿಯಾಗಿದ್ದಾನೆ. ಸುಳ್ಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

See also  ಪುತ್ತೂರು: ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ ಪ್ರಣಾಳಿಕೆ ಬಿಡುಗಡೆ
  Ad Widget   Ad Widget   Ad Widget   Ad Widget