ಕ್ರೈಂವೈರಲ್ ನ್ಯೂಸ್

ಮನೆಯಲ್ಲಿ ಸಾಕಿದ್ದ ಮೊಲ ಕಚ್ಚಿ ಮಹಿಳೆ ಸಾವು..? ಅನುಮಾನಗೊಂಡ ಪೊಲೀಸರಿಂದ ತನಿಖೆ

187

ನ್ಯೂಸ್ ನಾಟೌಟ್ : ಮನೆಯಲ್ಲೇ ಸಾಕಿದ್ದ ಬೆಕ್ಕು ಕಚ್ಚಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಹಲವು ಪ್ರಕರಣಗಳು ನಾವು ಕೇಳಿರುತ್ತೇವೆ. ಆದರೆ, ಮನೆಯಲ್ಲೇ ಮುದ್ದಿನಿಂದ ಸಾಕಿದ ಮೊಲದಿಂದ ಮಹಿಳೆ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಕೇರಳದ ಅಲಪ್ಪುಳದ ತಕಾಝೀಯಲ್ಲಿ ನಡೆದಿದೆ.

ಮನೆಯಲ್ಲೇ ಸಾಕಿದ ಮೊಲ ಕಚ್ಚಿ ಮಹಿಳೆ ಜೀವವನ್ನೇ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ತಕಾಝೀಯ ಶಾಂತಮ್ಮ(63) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಶಾಂತಮ್ಮ ಎನ್ನುವವರಿಗೆ ಅಕ್ಟೋಬರ್ 21ರಂದು ಆಟವಾಡಿಸುವಾಗ ಮನೆಯಲ್ಲೇ ಸಾಕಿದ್ದ ಮೊಲ ಕಚ್ಚಿತ್ತು. ಮೊದಲು ಬೇಡ ಅನಿಸಿದರು ಕೊನೆಗೆ ಮುಂಜಾಗೃತ ಕ್ರಮವಾಗಿ ಅಲಪ್ಪುಳ ವೈದ್ಯಕೀಯ ಕಾಲೇಜು ಆಸ್ಪತ್ರೆಯ ರೇಬಿಸ್ ಲಸಿಕೆ ಹಾಕಿಸಿಕೊಳ್ಳುತ್ತಿದ್ದರು.

ಈ ಹಿಂದೆ ಎರಡು ಡೋಸ್‌ ಗಳನ್ನು ಪಡೆದಿದ್ದ ಶಾಂತಮ್ಮ ಮೂರನೇ ಡೋಸ್ ಹಾಕಿದ ನಂತರ (ನ.21) ಏಕಾಏಕಿ ಕುಸಿದು ಬಿದ್ದಿದ್ದಾರೆ. ತೀವ್ರ ನಿತ್ರಾಣಗೊಂಡ ಶಾಂತಮ್ಮನನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾದೇ ಶಾಂತಮ್ಮ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶಾಂತಮ್ಮ ಸಾವಿಗೆ ಮೊಲ ಕಚ್ಚಿದ ಪರಿಣಾಮವೇ ಅಥವಾ ಡೋಸ್‌ ಪರಿಣಾಮವೇ ಎನ್ನುವುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬರಬೇಕಿದೆ. ಸಾಕು ಬೆಕ್ಕು ಕಚ್ಚಿ ಮಹಿಳೆ ಸಾವನ್ನಪ್ಪಿದ ಘಟನೆ ಕಳೆದ ಮೂರು ತಿಂಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತರಲಘಟ್ಟದಲ್ಲಿ ನಡೆದಿತ್ತು.

Click

https://newsnotout.com/2024/11/worlds-tallest-and-smallest-womens-met-in-london/
https://newsnotout.com/2024/11/govt-school-kannada-news-teacher-arrest-fjf/
https://newsnotout.com/2024/11/kasaragodu-family-issue-women-police-nomore-by-husband-kannada-news-fn/
https://newsnotout.com/2024/11/darshan-thugudeepa-kannada-news-highcourt-lawyer-kannada-news-d/
https://newsnotout.com/2024/11/bus-car-lorry-rayachur-kannada-news-bengaluru-viral-news-d/
https://newsnotout.com/2024/11/marriage-function-kannada-news-viral-video-bengaluru/
https://newsnotout.com/2024/11/naxal-kannada-news-encounter-chattisghar-d/
See also  ನಟ ದುನಿಯಾ ವಿಜಯ್ ನಿಂದ ಸಹಾಯ ಪಡೆದು ಜೈಲಿಂದ ಬಿಡುಗಡೆಯಾಗಿದ್ದವನಿಂದ ಜೋಡಿ ಕೊಲೆ..! ಏನಿದು ಘಟನೆ..?
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget