ನೆಲ್ಯಾಡಿ

ಕಡಬ: ಸರ್ಕಾರಿ ಜಮೀನಿನಲ್ಲಿ ನಿರ್ಮಿಸಿದ್ದ ಮನೆಯನ್ನು ಬುಲ್ಡೋಜರ್ ಹತ್ತಿಸಿ ಪುಡಿಗೈದ ಅಧಿಕಾರಿಗಳು, ತಹಶೀಲ್ದಾರ್-ಪೊಲೀಸರ ನೇತೃತ್ವದಲ್ಲಿ ತೆರವು

ನ್ಯೂಸ್ ನಾಟೌಟ್: ಸರ್ಕಾರಿ ಜಮೀನಿನಲ್ಲಿ ನಿರ್ಮಿಸಲಾಗಿದ್ದ ಮನೆಯನ್ನು ಜೆಸಿಬಿ ಮೂಲಕ ಅಧಿಕಾರಿಗಳು ಪುಡಿಗೈದಿದ್ದಾರೆ.

ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ಸರ್ಕಾರಿ ಜಾಗದಲ್ಲಿ ಮುತ್ತುಸ್ವಾಮಿ ಎಂಬುವರು ನಿರ್ಮಿಸಿಕೊಂಡಿದ್ದರು. ಈ ಮನೆಯನ್ನು ಬುಧವಾರ ಕಂದಾಯ ಇಲಾಖೆ ತೆರವುಗೊಳಿಸಿತು. ಕಡಬ ತಹಶೀಲ್ದಾರ್, ಪೊಲೀಸರ ಬಿಗಿ ಬಂದೋಬಸ್ತ್ ನಲ್ಲಿ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಯಿತು.

ಮನೆ ತೆರವುಗೊಳಿಸುವ ಬದಲು ದಯಾಮರಣಕ್ಕೆ ಅವಕಾಶ ನೀಡಬೇಕು ಎಂದು ಕೋರಿ ಮುತ್ತುಸ್ವಾಮಿ –ರಾಧಮ್ಮ ದಂಪತಿ ರಾಷ್ಟ್ರಪತಿಗೆ ಮನವಿ ಮಾಡಿದ್ದರು. ಕಂದಾಯ ಇಲಾಖೆ ಒಮ್ಮೆ ತೆರವು ಕಾರ್ಯಕ್ಕೆ ಮುಂದಾದರೂ, ಸಾರ್ವಜನಿಕರ ಪ್ರತಿಭಟನೆಯಿಂದ ಅದು ಸಾಧ್ಯವಾಗಿರಲಿಲ್ಲ.

ಚಿತ್ರದುರ್ಗ ಮೂಲದವರಾದ ಮುತ್ತುಸ್ವಾಮಿ ಕೂಲಿ ಕೆಲಸಕ್ಕಾಗಿ ಬಂದು, ಆರು ವರ್ಷಗಳ ಹಿಂದೆ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ಸರ್ಕಾರಿ ಜಾಗದಲ್ಲಿ ಸಿಮೆಂಟ್ ಶೀಟ್‌ನಿಂದ ಸಣ್ಣ ಮನೆ ನಿರ್ಮಿಸಿಕೊಂಡು ಪತ್ನಿಯೊಂದಿಗೆ ವಾಸವಿದ್ದರು. ಮನೆಯ ಪರಿಸರದಲ್ಲಿ ಬಾಳೆ ಹಾಗೂ ಇತರೆ ಕೃಷಿಯನ್ನು ಕೂಡ ಮಾಡಿದ್ದರು. ಜಾಗದ ಸಮೀಪವೇ ಸಣ್ಣ ಅಂಗಡಿಯೊಂದನ್ನು ಇಟ್ಟು ವ್ಯಾಪರ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು.

ಸರ್ಕಾರ ಜಾಗದಲ್ಲಿ ಮನೆ ನಿರ್ಮಿಸಿರುವುದನ್ನು ಪ್ರಶ್ನಿಸಿ ಬೆಳ್ತಂಗಡಿಯ ಅಶೋಕ ಆಚಾರ್ಯ ಎಂಬವರು ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು. ಕೋರ್ಟ್‌ ಆದೇಶದಂತೆ ಕಂದಾಯ ಇಲಾಖೆ ಬುಧವಾರ ತೆರವು ಕಾರ್ಯ ನಡೆಸಿದೆ. ಮನೆ ತೆರವುಗೊಳಿಸುವಂತೆ ಮುತ್ತುಸ್ವಾಮಿ ಅವರಿಗೆ ಈ ಹಿಂದೆಯೇ ನೋಟಿಸ್ ನೀಡಲಾಗಿತ್ತು. ಅವರಿಗೆ  ಮನೆ, ನಿವೇಶನ ನೀಡುವ ಸಂಬಂಧ ಕ್ರಮ ಕೈಗೊಳ್ಳಲು ಕೌಕ್ರಾಡಿ ಗ್ರಾಮ ಪಂಚಾಯಿತಿಗೆ ಸೂಚನೆ ನೀಡಲಾಗಿದೆ’ ಎಂದು ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ ಹೇಳಿದರು. ಕಡಬ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕಂದಾಯ ನಿರೀಕ್ಷಕ ಪೃಥ್ವಿರಾಜ್, ಕೌಕ್ರಾಡಿ ಗ್ರಾಮ ಲೆಕ್ಕಾಧಿಕಾರಿ ಸಿದ್ದಲಿಂಗ ಜಂಗಮಶೆಟ್ಟಿ,  ಪಿಡಿಒ ದೇವಿಕಾ, ಮೆಸ್ಕಾಂನ ಸಜಿಕುಮಾರ್ ಇದ್ದರು. ಉಪ್ಪಿನಂಗಡಿ ಎಸ್.ಐ. ಅವಿನಾಶ್ ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.

Related posts

ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗೆ ಭಾರಿ ಮಳೆ ಅಪ್ಪಳಿಸುವ ನಿರೀಕ್ಷೆ, ಕರಾವಳಿಗೆ ಇಂದಿನಿಂದ ಎಲ್ಲೋ ಅಲರ್ಟ್

ನಾಳೆ (ಜು.6) ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ- ಕಾಲೇಜುಗಳಿಗೆ ರಜೆ, ಜಿಲ್ಲಾಧಿಕಾರಿ ಘೋಷಣೆ

ದಕ್ಷಿಣ ಕನ್ನಡ: ರಾತ್ರಿ ಐರಾವತ ಹಾಗೂ ರಾಜಹಂಸ ಬಸ್‍ಗಳ ನಡುವೆ ಡಿಕ್ಕಿ..! ಹಳ್ಳಕ್ಕೆ ಬಿದ್ದ ಈಚರ್ ಲಾರಿ..!