ನ್ಯೂಸ್ ನಾಟೌಟ್: ಸುಳ್ಯ ತಾಲೂಕಿನಲ್ಲಿಬುಧವಾರ ಸಂಜೆ ಸುರಿದ ಭಾರಿ ಗಾಳಿ ಮಳೆಗೆ ಗೂನಡ್ಕದ ದರ್ಖಾಸು ಎಂಬಲ್ಲಿ ಮನೆಗಳ ಮೇಲೆ ಮರ ಬಿದ್ದು ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ವಿಶ್ವನಾಥ್ ಬೆಳ್ಚಪ್ಪಾಡ, ಅವರ ಮನೆಯ ಸಿಟ್‌ಔಟ್ ಮೇಲೆ ಮರ ಬಿದ್ದುದರಿಂದ ಸಂಪೂರ್ಣವಾಗಿ ಹಾನಿಯಾಗಿದೆ. ಸುಮಾರು ಒಂದು ಲಕ್ಷ ರೂ. ವರೆಗೆ ನಷ್ಟಸಂಭವಿಸಿದೆ ಎಂದು ತಿಳಿದು ಬಂದಿದೆ. ಪಕ್ಕದಲ್ಲಿರುವ ಇನ್ನೆರಡು ಮನೆಗಳಿಗೂ ಹಾನಿಯಾಗಿದೆ ಎಂದು ವರದಿಯಾಗಿದೆ.
previous post