ನ್ಯೂಸ್ ನಾಟೌಟ್: ನಾಳೆ (ಜು.29) ಸುಳ್ಯದ ವೆಜ್ಝ್ ಹೋಟೆಲ್ ನಲ್ಲಿ ಆಟಿ ಹಾಗೂ ನಾಗರ ಪಂಚಮಿ ಹಬ್ಬದ ಪ್ರಯುಕ್ತ ವಿಶೇಷ ಖಾದ್ಯಗಳನ್ನು ಗ್ರಾಹಕರಿಗೆ ನೀಡುವುದಕ್ಕೆ ಸರ್ವ ತಯಾರಿ ನಡೆಸಲಾಗಿದೆ.
ಈಗ ಆಟಿ ತಿಂಗಳು. ನಮ್ಮ ತುಳುನಾಡಿನ ಜನತೆ ಹೆಚ್ಚು ಇಷ್ಟಪಡುವ ಆಟಿ ತಿಂಗಳ ವಿಶೇಷ ಖಾದ್ಯವೆಂದರೆ ಅದು ಪತ್ರೋಡೆ. ಮರಕೆಸುವಿನಿಂದ ತಯಾರಿಸಲಾಗಿರುವ ಪತ್ರೋಡೆ ಗ್ರೇವಿಯನ್ನು ಇಷ್ಟಪಡದವರು ಬಹುಶಃ ಯಾರೂ ಇರಲಿಕ್ಕಿಲ್ಲ. ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರಿಗೂ ಪತ್ರೋಡೆ ಖಾದ್ಯವೆಂದರೆ ಬಲು ಇಷ್ಟ. ನೀವೆಲ್ಲರೂ ನಾಳೆ ತಪ್ಪದೆ ವೆಜ್ ಹೋಟೆಲ್ ಗೆ ಬಂದು ಪತ್ರೋಡೆ ಗ್ರೇವಿ ಸವಿಯಬಹುದು. ಅಲ್ಲದೆ ನಾಳೆ ನಾಡಿನಾದ್ಯಂತ ನಾಗರಪಂಚಮಿ ಹಬ್ಬವನ್ನು ಜನ ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅರಶಿನ ಎಲೆಯ ಗಟ್ಟಿ (ಮಂಜಲ್ದ ಇರೆತ ಅಡ್ಯೆ) ನಿಮ್ಮೆಲ್ಲರ ಬಾಯಿಯನ್ನು ಸಿಹಿಗೊಳಿಸಲಿದೆ. ಹಬ್ಬದ ಮೆರುಗನ್ನು ಇನ್ನಷ್ಟು ಹೆಚ್ಚಿಸಲಿದೆ. ಈ ವಿಶೇಷ ದಿನವನ್ನು ನೀವೆಲ್ಲ ಕುಟುಂಬ ಸಹಿತ ಕುಳಿತು ನಮ್ಮ ಹೋಟೆಲ್ ವೆಜ್ಝ್ ನಲ್ಲಿ ಆಸ್ವಾದಿಸಿ ಎಂದು ಹೋಟೆಲ್ ನ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. *ಹೋಟೆಲ್ ಇರುವುದು ಎಲ್ಲಿ..? ನೀವು ಸುಳ್ಯದ ಸರ್ಕಾರಿ ಬಸ್ ನಿಲ್ದಾಣಕ್ಕೆ ಸಮೀಪವಿರುವ ಸೂಂತೋಡು ಕಾಂಪ್ಲೆಕ್ಸ್ ಹತ್ರ ಬಂದರೆ ಮುಂಭಾಗದಲ್ಲಿಯೇ ಹೋಟೆಲ್ ವೆಜ್ಝ್ ರೆಸ್ಟೋರೆಂಟ್ ಕಾಣಸಿಗುತ್ತದೆ.