ಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ 12 ದಿನಗಳ ಕಾಲ ಅತ್ಯಾಚಾರ..! ಹೊಟೇಲ್ ರೂಮ್ ನಲ್ಲಿ ಕೂಡಿ ಹಾಕಿದ್ದ ಆರೋಪಿಗಳು..!

ನ್ಯೂಸ್ ನಾಟೌಟ್: ಕಾಲೇಜು ವಿದ್ಯಾರ್ಥಿನಿಯನ್ನು ಆರೋಪಿಗಳು ಅಪಹರಿಸಿ ಹೋಟೆಲ್ ವೊಂದರಲ್ಲಿ ಸೆರೆವಾಸದಲ್ಲಿಟ್ಟು 12 ದಿನಗಳ ಕಾಲ ಸಾಮೂಹಿತ ಅತ್ಯಾಚಾರವೆಸಗಿರುವ ಘಟನೆ ಗಾಜಿಯಾಬಾದ್ ​ನಲ್ಲಿ ವರದಿಯಾಗಿದೆ. ಬಾಲಕಿಯ ಮೇಲೆ ಮೀರತ್ ಹಾಗೂ ಜಮ್ಮು ಎಂಬ ಹೆಸರಿನ ಇಬ್ಬರು ಆರೋಪಿಗಳು ಹೋಟೆಲ್ ​ನಲ್ಲಿ ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ.

ಜೊತೆಗೆ ಬಾಲಕಿಯ ಅಶ್ಲೀಲ ವಿಡಿಯೋವನ್ನು ಕೂಡ ಮಾಡಿದ್ದಾರೆ. ಇದಾದ ಬಳಿಕ ಆಕೆಗೆ ಬೆದರಿಕೆ ಹಾಕಿದ್ದಾರೆ ಎಂದು ವರದಿ ತಿಳಿಸಿದೆ. ಈ ಘಟನೆಯ ಬಳಿಕ ಜುಲೈ 6 ರಂದು ಗಾಜಿಯಾಬಾದ್​ನ ಭೋಜ್​ಪುರ್ ಪೊಲೀಸ್ ಠಾಣೆ ಬಳಿ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ಮೋದಿನಗರ ಎಂಬ ಗ್ರಾಮದ ನಿವಾಸಿಯಾಗಿರುವ ಬಾಲಕಿ ಇಲ್ಲಿನ ಕಾಲೇಜೊಂದರಲ್ಲಿ ಓದುತ್ತಿದ್ದಳು.

ಜೂನ್ 24ರಂದು ಕಾಲೇಜಿಗೆ ಹೋದವಳು ನಾಪತ್ತೆಯಾಗಿದ್ದಳು. ಕುಟುಂಬದವರು ಹುಡುಕಾಟ ನಡೆಸಿ, ನಾಪತ್ತೆ ಪ್ರಕರಣವನ್ನೂ ದಾಖಲಿಸಿದ್ದರು. ಇದೀಗ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ. ಜೂನ್ 24ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ತನ್ನನ್ನು ಇಬ್ಬರು ಅಪಹರಿಸಿದ್ದರು ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ. ದೂರಿನ ಆಧಾರದ ಮೇಲೆ ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Click 👇

https://newsnotout.com/2024/07/hardik-padya-divorce-announcement-officially-with-padya-kannada-news/
https://newsnotout.com/2024/07/dengue-awarness-reels-and-reward-for-that-kannada-news-viral-news/
https://newsnotout.com/2024/07/education-and-conflict-in-festivals-kannada-news-viral-post/

Related posts

ಬೀದಿ ನಾಯಿಗಳು ಕಣ್ಮರೆಯಾದದ್ದಕ್ಕೆ ಪೊಲೀಸ್ ಠಾಣಾ ಮೆಟ್ಟಿಲೇರಿದ ಈ ವ್ಯಕ್ತಿ ಯಾರು? ಇಲ್ಲಿದೆ ಪ್ರಾಣಿ ಪ್ರೇಮಿಯ ಕಣ್ಣೀರ ಕಥೆ

ಸುಬ್ರಹ್ಮಣ್ಯ: ತಡರಾತ್ರಿ ತೇಲಿ ಬಂದ ಆನೆಯ ಕಳೇಬರ..! ಆ ದೃಶ್ಯ ಕಂಡು ಶಾಕ್ ಆದ ಸ್ಥಳೀಯರು..!

ವಿಪಕ್ಷ ನಾಯಕನ ಕುತ್ತಿಗೆಗೆ ಚಾಕು ಇರಿತ..! ದಾಳಿಕೋರ ವಶಕ್ಕೆ..!