Uncategorized

ಹೋಟೆಲ್ ಫುಡ್ ಗಳ ದರ ಗಗನದೆತ್ತರಕ್ಕೆ ಏರಲಿದೆ..!

ನ್ಯೂಸ್ ನಾಟೌಟ್ : ಹೋಟೆಲ್ ಫುಡ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ…? ಬಗೆಬಗೆಯ ಫುಡ್ ನೋಡಿದಾಗ ಪ್ರತಿಯೊಬ್ಬರ ಬಾಯಲ್ಲೂ ನೀರೂರುತ್ತೆ. ಆದರೀಗ ಬೆಲೆ ಏರಿಕೆ ಪರಿಣಾಮ ತಿಂಡಿ-ತಿನಿಸಿನ ಬೆಲೆ ಗಗನದೆತ್ತರಕ್ಕೆ ಏರುವ ಸಾಧ್ಯತೆ ಇದೆ. ಮುಂದಿನ ಕೆಲವು ದಿನಗಳಲ್ಲಿ ಗ್ರಾಹಕರ ಕಿಸೆಗೆ ಕತ್ತರಿ ಬೀಳುವುದು ಗ್ಯಾರಂಟಿ ಅನ್ನುವ ಸುದ್ದಿ ಹರಿದಾಡುತ್ತಿದೆ.

ಅಡುಗೆ ಅನಿಲ , ಅಡುಗೆ  ಎಣ್ಣೆ , ವಿದ್ಯುತ್ ಹಾಗೂ ಇನ್ನಿತರ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಆಗಿದೆ.  ಹಾಗಾಗೀ ಹೋಟೆಲ್ ಮಾಲೀಕರು  ಫುಡ್‌ಗಳ ಬೆಲೆ ಏರಿಕೆ ಮಾಡಲು ನಿರ್ಧರಿಸಿದ್ದಾರೆ. 

ನಂ. 18 ರಂದು ಹೋಟೆಲ್ ಮಾಲೀಕರೆಲ್ಲರೂ ಸೇರಿ ಸಭೆ ನಡೆಸಿದ್ದಾರೆ. ಹೋಟೆಲ್ ಊಟ, ತಿಂಡಿ ದರ ಹೆಚ್ಚಳದ ಕುರಿತು ನಿರ್ಧಾರ ಕೈ ಗೊಂಡಿದ್ದಾರೆ. ನಗರದ ಹೋಟೆಲ್ ಗಳ ತಿಂಡಿ – ತಿನಿಸುಗಳ ಬೆಲೆ ಇನ್ನು ಮುಂದೆ  ಕನಿಷ್ಠ ಶೇ. 10 ರಷ್ಟು ಹೆಚ್ಚಿಸಲು ಬೆಂಗಳೂರು ಹೋಟೆಲ್  ಗಳ ಮಾಲೀಕರು ಹೇಳಿದ್ದಾರೆ. ಸಾಮಾನ್ಯವಾಗಿ ಹೋಟೆಲ್ ಫುಡ್ ಗಳೇ ಎಲ್ಲರ ಬಾಯಿ ರುಚಿ ಹಿಡಿದು ಬಿಟ್ಟಿದೆ. ಹಾಗಿರುವಾಗ  ಫುಡ್ ಗಳ ಬೆಲೆ ಏರಿಕೆ ಆದರೆ,  ಇನ್ನು ಹೋಟೆಲ್ ಫುಡ್ ತಿನ್ನುವರ ಸಂಖ್ಯೆ ಕಡಿಮೆಯಾಗಬಹುದಾ……? ಅನ್ನುವ ಮಾತುಗಳು ಜಾಲತಾಣದಲ್ಲಿ ಹರಿದಾಡುತ್ತಿದೆ.

Related posts

ನಟ ಸಿದ್ದಿಕ್‌ ಗೆ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು..! 8 ವರ್ಷಗಳ ಬಳಿಕ ದೂರು ನೀಡಲು ಕಾರಣ ಕೇಳಿದ ಸುಪ್ರೀಂ ಕೋರ್ಟ್..!

ಹಳೆಯ ಬಸ್‌ ಪಾಸ್ ಜೂನ್ 15 ರವರೆಗೆ ವಿಸ್ತರಣೆ

ನಿಖಿಲ್‌ ಸೋಲಿನಿಂದ ಬೇಸರಗೊಂಡು ವಿಷ ಸೇವಿಸಿದ ಅಭಿಮಾನಿ..! 15 ವರ್ಷಗಳಿಂದ ಜೆಡಿಎಸ್‌ ಕಾರ್ಯಕರ್ತನಾಗಿರುವ ಮಂಜುನಾಥ್‌ ಆತ್ಮಹತ್ಯೆಗೆ ಯತ್ನ..!