ಬೆಂಗಳೂರುಬೆಂಗಳೂರುರಾಜ್ಯವೈರಲ್ ನ್ಯೂಸ್

ಮತದಾನ ಮಾಡಿ ಬಂದವರಿಗೆ ಉಚಿತ ಫಿಲ್ಟರ್ ಕಾಫಿ, ಬಿಯರ್ ಆಫರ್..! ವಿಕಲಚೇತನರಿಗೆ ಕ್ಯಾಬ್ ಸಂಸ್ಥೆಗಳಿಂದ ಉಚಿತ ಪ್ರಯಾಣ

40
Spread the love

ನ್ಯೂಸ್ ನಾಟೌಟ್: ಮತದಾನ ಪ್ರಮಾಣ ಹೆಚ್ಚಿಸಲು ಕೆಲವು ಹೋಟೆಲ್ ಗಳಲ್ಲಿ ಬೆಣ್ಣೆ ದೋಸೆ, ಫಿಲ್ಟರ್ ಕಾಫಿ, ಬಿಯರ್ ಮತ್ತಿತರ ಆಕರ್ಷಕ ಕೊಡುಗೆಗಳನ್ನು ನೀಡಲಾಗುತ್ತಿರುವುದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್ ಹೋಟೆಲ್ ನಲ್ಲಿ ಮತದಾನ ಮಾಡಿ ಗುರುತು ತೋರಿಸಿದವರಿಗೆ ಬೆಣ್ಣೆ ಖಾಲಿ ದೋಸೆ, ತುಪ್ಪದ ಲಾಡು ಮತ್ತು ತಂಪು ಪಾನಕವನ್ನು ಉಚಿತವಾಗಿ ನೀಡಲಾಗುತ್ತಿದೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಹೋಟೆಲ್ ಮಾಲೀಕ ಎಸ್ ಪಿ ಕೃಷ್ಣರಾಜ್, 2018 ರಿಂದ ಉಚಿತವಾಗಿ ಆಹಾರ ನೀಡುವ ಮೂಲಕ ಪ್ರಜಾಪ್ರಭುತ್ವ ಹಬ್ಬ ಆಚರಿಸುತ್ತಿರುವುದಾಗಿ ತಿಳಿಸಿದ್ದಾರೆ. ಲುಲು ಮತ್ತು ಒರಿಯಾನ್ ಮಾಲ್ ನಲ್ಲಿ ಕಾಮತ್ ಹೊಸರುಚಿ ಮತ್ತು ಅಯ್ಯಂಗಾರ್ ಓವನ್ ಫ್ರೆಶ್‌ನಂತಹ ಆಹಾರ ಮಳಿಗೆಗಳು ಮತ್ತು ಬೇಕರಿಗಳು ಮತದಾರರಿಗೆ ಶೇ. 10 ರಷ್ಟು ರಿಯಾಯಿತಿ ನೀಡುತ್ತಿವೆ. ಇದೇ ವೇಳೆ ಕೆಫೆ ಉಡುಪಿ ರುಚಿ ಸೇರಿದಂತೆ ದರ್ಶಿನಿಗಳು ಪೂರಕ ಮಾಕ್‌ಟೇಲ್‌ಗಳನ್ನು ನೀಡಲಿದ್ದು, ಮಾಲ್ಗುಡಿ ಮೈಲಾರಿ ಮನೆ ಉಚಿತವಾಗಿ ಮೈಲಾರಿ ದೋಸೆ ಮತ್ತು ಫಿಲ್ಟರ್ ಕಾಫಿ ನೀಡುತ್ತಿದೆ. ಇನ್ನೂ ಪಬ್ಸ್ ಮತ್ತು ಬ್ರೂವರೀಸ್ ಗಳು ಕೂಡಾ ಇದರಲ್ಲಿ ಪಾಲ್ಗೊಂಡಿವೆ. ಕಾಡುಬೀಸನಹಳ್ಳಿಯ ಡೆಕ್ ಆಫ್ ಬ್ರೂಸ್ ಮೊದಲ 50 ಗ್ರಾಹಕರಿಗೆ ಬಿಯರ್ ನ್ನು ಉಚಿತವಾಗಿ ನೀಡಿದೆ. ಅವರ ಮಳಿಗೆಗಳಲ್ಲಿ ಉಳಿದ ಮತದಾರರಿಗೆ ಶೇ. 20 ರಷ್ಟು ರಿಯಾಯಿತಿ ಕೂಡಾ ಒದಗಿಸಲಾಗಿದೆ.

ಈ ಆಫರ್ ಇಂದಿನಿಂದ ಒಂದು ವಾರದವರೆಗೂ ಇರಲಿದೆ ಎನ್ನಲಾಗಿದೆ. ಈ ಕುರಿತು ಮಾತನಾಡಿದ ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿಸಿ ರಾವ್, ಮತದಾನ ಪ್ರಮಾಣ ಹೆಚ್ಚಳ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಈ ಹಿಂದೆ ಶೇ. 54 ರಷ್ಟು ಮತದಾನವಾಗಿತ್ತು. ಅಸೋಯೇಷನ್ ಅಡಿಯಲ್ಲಿನ ಅನೇಕ ಹೋಟೆಲ್ ಗಳು ಪೂರಕ ಪಾನೀಯಗಳು, ಸಿಹಿತಿಂಡಿಗಳನ್ನು ನೀಡುತ್ತಿವೆ ಎಂದು ತಿಳಿಸಿದರು. ಇದಲ್ಲದೆ, Rapido, BluSmart ಮತ್ತಿತರ ಕ್ಯಾಬ್ ಸಂಸ್ಥೆಗಳು ಕೂಡಾ ಹಿರಿಯ ನಾಗರಿಕರು ಮತ್ತು ದಿವ್ಯಾಂಗ ಮತದಾರರು ಮತಗಟ್ಟೆಗೆ ತೆರಳಲು ಉಚಿತ ಪ್ರಯಾಣದ ಆಫರ್ ನೀಡಿವೆ.

See also  ಸುಬ್ರಹ್ಮಣ್ಯ: 60 ಅಡಿ ಬಾವಿಗೆ ಬಿದ್ದ ಹಸುವಿನ ರಕ್ಷಣೆ, ಗೋಮಾತೆಯ ರಕ್ಷಣೆ ಹೇಗಿತ್ತು? ಇಲ್ಲಿದೆ ನೋಡಿ ರೋಚಕ ವಿಡಿಯೋ
  Ad Widget   Ad Widget   Ad Widget