ಕ್ರೈಂವೈರಲ್ ನ್ಯೂಸ್

ಹೊಟೇಲ್ ನಲ್ಲಿ ದುಡಿಯುತ್ತಿದ್ದವಳ ಮೇಲೆ ಸಾಮೂಹಿಕ ಅತ್ಯಾಚಾರ! ಸಿಸಿಟಿವಿಯಲ್ಲಿ ಬಯಲಾದ ರಹಸ್ಯವೇನು? ಆ ಮಹಿಳೆಯನ್ನು ಬಂಧಿಸಿದ್ದೇಕೆ ಪೊಲೀಸರು?

ನ್ಯೂಸ್ ನಾಟೌಟ್: ಹೋಟೆಲ್‌ವೊಂದರಲ್ಲಿ ಯುವತಿಗೆ ಮದ್ಯ ಸೇವಿಸುವಂತೆ ಒತ್ತಾಯಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣ ಉತ್ತರ ಪ್ರದೇಶ ಆಗ್ರಾದ ಹೋಟೆಲ್​ವೊಂದರಲ್ಲಿ ನಡೆದಿದೆ.
ತನ್ನ ಸ್ನೇಹಿತ ಮತ್ತು ಇತರ ಕೆಲವರು ತನಗೆ ಬಲವಂತವಾಗಿ ಕುಡಿಯಲು ಒತ್ತಾಯಿಸಿದರು ಎಂದು ಯುವತಿ ಪೊಲೀಸರಿಗೆ ತಿಳಿಸಿದ್ದು, ಮೊದಲು ಕೋಣೆಯೊಳಗೆ ಎಳೆದೊಯ್ದರು ಮತ್ತು ಕಿರುಚಿದಾಗ ಥಳಿಸಿದ್ದಾರೆ ಎಂದಿದ್ದಾಳೆ.
ಹೋಟೆಲ್​ನಲ್ಲಿ ಉದ್ಯೋಗಿಯಾಗಿದ್ದ ಆಕೆ ಒಂದೂವರೆ ವರ್ಷದಿಂದ ಅಲ್ಲಿಯೇ ಕೆಲಸ ಮಾಡುತ್ತಿದ್ದಳು. ಸಿಸಿ ಟಿವಿ ವಿಡಿಯೋದಲ್ಲಿ ಓರ್ವ ವ್ಯಕ್ತಿಯು ಕೋಣೆಗೆ ಆಕೆಯನ್ನು ಎಳೆದುಕೊಂಡು ಹೋಗುತ್ತಿರುವುದು ಹಾಗೂ ಸಹಾಯಕ್ಕಾಗಿ ಮನವಿ ಮಾಡುತ್ತಿರುವುದು ಕಂಡುಬಂದಿದೆ ಎನ್ನಲಾಗಿದೆ.
ಕೋಣೆಯಲ್ಲಿ ಬಲವಂತವಾಗಿ ಹಿಡಿದುಕೊಂಡು ಅಮಾನುಷವಾಗಿ ಥಳಿಸಲಾಗಿದೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ಆರೋಪಿಗಳು ಆಕೆಗೆ ಮದ್ಯ ಸೇವಿಸುವಂತೆ ಒತ್ತಾಯಿಸಿದ್ದಾರೆ. ಮಹಿಳೆ ತಲೆಯಲ್ಲಿ ರಕ್ತಸ್ರಾವವಾಗುತ್ತಿತ್ತು. ಆರೋಪಿಯೊಬ್ಬ ಮದ್ಯದ ಬಾಟಲಿಯಿಂದ ಆಕೆಯ ತಲೆಗೆ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಅತ್ಯಾಚಾರ, ಹಲ್ಲೆ ಮತ್ತು ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪುರುಷರು ಹಾಗೂ ಓರ್ವ ಮಹಿಳೆಯನ್ನು ಬಂಧಿಸಲಾಗಿದೆ. ಅತ್ಯಾಚಾರ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ.

Related posts

ಗುಂಡ್ಯ: ರಸ್ತೆ ಬದಿ ಕಾರು ನಿಲ್ಲಿಸಿದ್ದ ವ್ಯಕ್ತಿ ಮರಬಿದ್ದು ಪತ್ನಿ, ಮಕ್ಕಳ ಕಣ್ಣೆದುರೇ ಸಾವು

Viral: “ಬಾಸ್​, ನಾನು ಗರ್ಭಿಣಿಯಾಗಿದ್ದೇನೆ”, ಈ ವಾಟ್ಸಪ್​ ಚಾಟ್​ ಮಿಲಿಯನ್​ಗಟ್ಟಲೆ ವೈರಲ್‌ ಆಗಿದ್ಯಾಕೆ ಗೊತ್ತಾ?

FREE BUS ಸಂಪಾಜೆ : ಕೈ ಕೊಟ್ಟ ಬಸ್ ಟಿಕೇಟ್ ಮೆಷಿನ್! ಬದಲಿ ಚೀಟಿ ಟಿಕೇಟ್ ವಿತರಣೆಗೆ ಪರದಾಡಿದ ನಿರ್ವಾಹಕ!