ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಬಿಸಿ ಗಾಳಿ ಭೀತಿ, ಏ.30ರ ತನಕ ಹಗಲು ಹೊತ್ತಿನಲ್ಲಿ ಈ ಕೆಲಸ ಮಾಡಬೇಡಿ, ಹವಾಮಾನ ಇಲಾಖೆ ಹೇಳಿದ್ದೇನು..? ಇಲ್ಲಿದೆ ಡಿಟೇಲ್ಸ್

ನ್ಯೂಸ್ ನಾಟೌಟ್: ಕರಾವಳಿ ಬಿಸಿಲಿನಿಂದ ಧಗಧಗ ಎನ್ನುತ್ತಿದೆ. ಕೆಲವು ಕಡೆ ಕುಡಿಯುವುದಕ್ಕೂ ನೀರಿಲ್ಲ. ಇಂತಹ ಸನ್ನಿವೇಶದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಮತ್ತೊಂದು ಆತಂಕ ಎದುರಾಗಿದೆ. ಅದುವೇ ಬಿಸಿಗಾಳಿ ಆತಂಕ. ಏ.30ರ ತನಕ ಬಿಸಿಗಾಳಿ ಕರಾವಳಿಯಾದ್ಯಂತ ಬೀಸಲಿದ್ದು ಈ ಅವಧಿಯಲ್ಲಿ ಅಲೆಯ ಶಕ್ತಿ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಿರುವಾಗ ಸಾರ್ವಜನಿಕರು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಹವಮಾನ ಇಲಾಖೆ ತಿಳಿಸಿದೆ.

ಬಿಸಿ ಗಾಳಿಯಿಂದ ಸನ್ ಸ್ಟೋಕ್ ಮತ್ತಿತರ ಸಮಸ್ಯೆ ಎದುರಾಗುವ ಅಪಾಯವಿದೆ. ಹೀಗಾಗಿ ಇಂತಹ ಅಪಾಯದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಮಧ್ಯಾಹ್ನ 1 ರಿಂದ ಅಪರಾಹ್ನ 3 ರವರೆಗೆ ಹೊರಗೆ ಹೋಗಬಾರದು, ತೆಳುವಾದ, ಹಗುರವಾದ ಬಟ್ಟೆಗಳನ್ನು ಧರಿಸಬೇಕು, ನಿರ್ಜಲೀಕರಣವಾಗದಂತೆ ತಡೆಯಲು ಆಗಾಗ ನೀರು ಕುಡಿಯುತ್ತಿರಬೇಕು ಎಂದು ಸೂಚನೆ ನೀಡಿದೆ.

Related posts

ಹನುಮಗಿರಿಯ ಫ್ಯಾನ್ಸಿಯಲ್ಲಿ ಬೆಂಕಿ ಅವಘಡ, ಭಾರಿ ನಷ್ಟ

ಓಮ್ನಿ ಕಾರು -ಪಲ್ಸರ್ ಬೈಕ್ ಅಪಘಾತ-ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಗೌಡ್ರು!

ನೇತ್ರಾವತಿ ನದಿಯಲ್ಲಿ ಬಜರಂಗದಳ ಕಾರ್ಯಕರ್ತನ ಶವ ಪತ್ತೆ