Latestಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಟೀ ಚೆಲ್ಲಿದ್ದಕ್ಕೇ 432 ಕೋಟಿ ರೂ ದಂಡ ವಿಧಿಸಿದ ಕೋರ್ಟ್..! ಏನಿದು ವಿಚಿತ್ರ ಪ್ರಕರಣ..?

425

ನ್ಯೂಸ್ ನಾಟೌಟ್: ಟೀ ಪಾರ್ಸೆಲ್ ನೀಡುವಾಗ ಗ್ರಾಹಕನ ಮೇಲೆ ಟೀ ಬಿದ್ದ ಪರಿಣಾಮ ಟೀ ತಯಾರಿಕಾ ಸಂಸ್ಥೆಗೆ ಕೋರ್ಟ್ ಬರೊಬ್ಬರಿ 50 ಮಿಲಿಯನ್ ಡಾಲರ್ (4,32,81,55,000) ದಂಡ ಹೇರಿದ ಅಚ್ಚರಿ ಘಟನೆ ವರದಿಯಾಗಿದೆ.

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಡ್ರೈವ್-ಥ್ರೂನಲ್ಲಿ ಗ್ರಾಹಕನಿಗೆ ಟೀ ಪಾರ್ಸೆಲ್ ನೀಡುವಾಗ ಅಜಾಗರೂಕವಾಗಿ ವರ್ತಿಸಿ ಬಿಸಿ ಚಹಾ ಆತನ ಮೇಲೆ ಬೀಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಖ್ಯಾತ ಚಹಾ ತಯಾರಿಕಾ ಸಂಸ್ಥೆ Starbucks ಗೆ 50 ಮಿಲಿಯನ್ ಡಾಲರ್ ದಂಡ ಹೇರಲಾಗಿದೆ ಎನ್ನಲಾಗಿದೆ.

ಬಿಸಿ ಚಹಾ ಮೇಲೆ ಬಿದ್ದು ಸುಟ್ಟುಕೊಂಡ ಗ್ರಾಹಕನಿಗೆ ಸ್ಟಾರ್‌ ಬಕ್ಸ್‌ ಸಂಸ್ಥೆ 50 ಮಿಲಿಯನ್ ಡಾಲರ್ ಪಾವತಿಸುವಂತೆ ಕೋರ್ಟ್ ಆದೇಶಿಸಿದೆ.

ಫೆಬ್ರವರಿ 2020 ರಲ್ಲಿ ಮೈಕೆಲ್ ಗಾರ್ಸಿಯಾ ಎಂಬುವವರು ಕ್ಯಾಲಿಫೋರ್ನಿಯಾದ ಡ್ರೈವ್-ಥ್ರೂನಲ್ಲಿರುವ ಸ್ಟಾರ್‌ಬಕ್ಸ್‌ ಕೆಫೆಗೆ ಆಗಮಿಸಿದ್ದರು. ಈ ವೇಳೆ ಅವರು ಮೂರು ಸೂಪರ್-ಸೈಜ್ ಚಹಾ ಆರ್ಡರ್ ಮಾಡಿದ್ದರು. ಆರ್ಡರ್ ಪಡೆದ ಸ್ಟಾರ್ ಬಕ್ಸ್ ಮಹಿಳಾ ಸಿಬ್ಬಂದಿ ಮೂರು ಸೂಪರ್-ಸೈಜ್ ಚಹಾ ಕಪ್ ಗಳನ್ನು ಒಂದು ಟ್ರೇನಲ್ಲಿಟ್ಟುಕೊಂಡು ಮೈಕೆಲ್ ಗಾರ್ಸಿಯಾರ ಕಾರಿನ ಕಿಟಕಿಯೊಳಗೆ ನೀಡಿದ್ದಾರೆ. ಈ ವೇಳೆ ಚಹಾ ಕಪ್ ಕಾರಿಗೆ ತಗುಲಿ ನೋಡ ನೋಡುತ್ತಲೇ ಬಿಸಿ ಬಿಸಿ ಚಹಾ ಅವರ ಕಾಲಿನ ಮೇಲೆ ಬಿದ್ದಿದೆ. ಈ ವೇಳೆ ಮೈಕೆಲ್ ರ ಮರ್ಮಾಂಗ, ತೊಡೆಸಂದು ಮತ್ತು ಒಳ ತೊಡೆಗಳಿಗೆ ಸುಟ್ಟಗಾಯಗಳಾಗಿವೆ.

ಈ ಘಟನೆ ಬಳಿಕ ಮೈಕೆಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ತುಂಬಾ ಆಳವಾಗಿ ಸುಟ್ಟಗಾಯಗಳಾಗಿದ್ದರಿಂದ ಮೈಕೆಲ್ ಗೆ ಬಹು ಚರ್ಮದ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ನಂತರ, ಮೈಕೆಲ್ ಐದು ವರ್ಷಗಳ ಕಾಲ ಸುಟ್ಟಗಾಯಗಳಿಂದ ಉಂಟಾದ ವಿರೂಪ, ನೋವು, ಮಾನಸಿಕ ಹಿಂಸೆಗೆ ಒಳಗಾಗಿದ್ದರು ಎಂದು ಮೈಕಲ್ ಪರ ವಕೀಲರು ಎಂದು ಟ್ರಯಲ್ ಲಾಯರ್ಸ್ ಫಾರ್ ಜಸ್ಟೀಸ್‌ನ ವಾದಿಸಿದ್ದಾರೆ.

ಇನ್ನು ಸಿಬ್ಬಂದಿ ನಿರ್ಲಕ್ಷ್ಯದ ವಿರುದ್ಧ ಸಂತ್ರಸ್ಥ ಮೈಕೆಲ್ ದೂರು ದಾಖಲಿಸಿದ್ದು, ಲಾಸ್ ಏಂಜಲೀಸ್‌ ಕೋರ್ಟ್ ನಲ್ಲಿ ಕಳೆದ 5 ವರ್ಷಗಳಿಂದ ಈ ಪ್ರಕರಣದ ವಿಚಾರಣೆ ನಡೆದಿತ್ತು. ಆರಂಭದಲ್ಲಿ ಸ್ಚಾರ್ ಬಕ್ಸ್ ಸಂಸ್ಥೆ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಮೈಕೆಲ್ ಗೆ $30 ಮಿಲಿಯನ್‌ ಡಾಲರ್ ಹಣ ನೀಡಲು ನಿರಾಕರಿಸಿತ್ತು. ಇದೀಗ ಬರೊಬ್ಬರಿ 5 ವರ್ಷಗಳ ಬಳಿಕ ಮೈಕೆಲ್ ಪರವಾಗಿ ತೀರ್ಪು ಬಂದಿದ್ದು, ಸ್ಟಾರ್ ಬಕ್ಸ್ ಸಂಸ್ಥೆಗೆ ಕೋರ್ಟ್ ಇದೀಗ 30 ಅಲ್ಲ ಬರೊಬ್ಬರಿ 50 ಮಿಲಿಯನ್ ಡಾಲರ್ ಅಂದರೆ ಭಾರತೀಯ ರೂಪಾಯಿಯಲ್ಲಿ ಸುಮಾರು 432 ಕೋಟಿ 81 ಲಕ್ಷದ 55 ಸಾವಿರ ರೂ ಪರಿಹಾರ ನೀಡುವಂತೆ ಆದೇಶಿಸಿದೆ.

  Ad Widget   Ad Widget   Ad Widget   Ad Widget   Ad Widget   Ad Widget