ಕ್ರೈಂವೈರಲ್ ನ್ಯೂಸ್

ಹುಡುಗಿಯರ ಹಾಸ್ಟೆಲ್ ಬಾತ್‌ರೂಮ್‌ನಲ್ಲಿ ಕ್ಯಾಮರಾ ಇಟ್ಟದ್ಯಾರು..? ಹಾಸ್ಟೆಲ್ ಪಕ್ಕದಲ್ಲೇ ರೂಂ ಪಡೆದಿದ್ದನಾ ಸಲೀಂ..?

ನ್ಯೂಸ್ ನಾಟೌಟ್ : ಅಲ್ಪಸಂಖ್ಯಾತರ ಹುಡುಗಿಯರ ಹಾಸ್ಟೆಲ್‌ನ ಬಾತ್ರೂಮ್‌ನಲ್ಲಿ ವ್ಯಕ್ತಿಯೊಬ್ಬ ಮೊಬೈಲ್ ಕ್ಯಾಮೆರಾ ಇಟ್ಟು ವಿಡಿಯೋ ಮಾಡಿದಂತಹ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಶಾಂತನಗರದಲ್ಲಿ ಗುರುವಾರ (ಡಿ.21) ಬೆಳಕಿಗೆ ಬಂದಿದೆ.

ಸಲೀಂ ಎನ್ನುವಾದ ಈ ಕೃತ್ಯ ಎಸಗಿದ್ದಾನೆ ಎಂದು ಗುರುತಿಸಲಾಗಿದೆ. ಶೌಚಾಲಯದಲ್ಲಿ ಕ್ಯಾಮರಾ ಇಟ್ಟಿರುವದನ್ನು ಕಂಡು ಅನುಮಾನ ವ್ಯಕ್ತಪಡಿಸಿದ ವಿದ್ಯಾರ್ಥಿನಿಯರು ಕ್ಯಾಮರಾ ಕಂಡು ಗಾಬರಿಗೊಂಡಿದ್ದು, ವಿಷಯ ತಿಳಿದ ತಕ್ಷಣ ಆತನನ್ನು ಹಿಡಿದು ಜನರು ಥ *ಳಿಸಿದ್ದಾರೆ.

ಬಾಲಕಿಯರ ಹಾಸ್ಟೆಲ್ ಪ್ರಕ್ಕದಲ್ಲಿಯೇ ಬಾಡಿಗೆಗೆ ರೂಂ ಪಡೆದಿದ್ದ ಸಲೀಂ ಹಾಸ್ಟೆಲ್‌ನ ಬಾತ್‌ರೂಮ್‌ನ ಕಿಟಕಿಯಿಂದ ಪೈಪ್ ಬಳಸಿ ಅದಕ್ಕೆ ವೈಫೈ ಕ್ಯಾಮೆರಾ ಅಳವಡಿಸಿದ್ದ ಎಂದು ಮೂಲಗಳಿಂದ ಮಾಹಿತಿ ತಿಳಿದುಬಂದಿದೆ ಎನ್ನಲಾಗಿದೆ.

Related posts

ವೃದ್ಧ ಅಪರಾಧಿಗೆ ಅಂಗನವಾಡಿಯಲ್ಲಿ ಸ್ವಯಂಸೇವಕನಾಗಿ ಕೆಲಸ ಮಾಡುವ ಶಿಕ್ಷೆ!

ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಬದುಕಿದ ಬೈಕ್ ಸವಾರ

ಕಡಬ: ಯುವಕ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್..! 5 ದಿನಗಳ ಬಳಿಕ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ..!