ಕ್ರೈಂವೈರಲ್ ನ್ಯೂಸ್

ರಾತ್ರೋರಾತ್ರಿ ಕಾಣೆಯಾದ 89 ಹುಡುಗಿಯರು..! ಬಾಲಕಿಯರ ಹಾಸ್ಟೆಲ್‌ನಲ್ಲಿ ಏನು ನಡೆಯುತ್ತಿದೆ? ಜಿಲ್ಲಾಧಿಕಾರಿ ದಿಢೀರ್ ಭೇಟಿಯಿಂದ ರಹಸ್ಯ ಬಯಲು!

ನ್ಯೂಸ್ ನಾಟೌಟ್: ರಾಜ್ಯ ಸರ್ಕಾರ ನಡೆಸುತ್ತಿರುವ ವಸತಿ ಶಾಲೆಯೊಂದರಲ್ಲಿ ಅಧಿಕಾರಿಗಳು ಹಠಾತ್‌ ತಪಾಸಣೆ ಮಾಡಿದ್ದಾರೆ. ಈ ವೇಳೆ, ಅಲ್ಲಿನ ಸ್ಥಿತಿಯನ್ನು ಕಂಡು ಅಧಿಕಾರಿಗಳು ಗಲಿಬಿಲಿಗೊಂಡಿದ್ದಾರೆ. ಈ ಹಿನ್ನೆಲೆ ವಾರ್ಡನ್ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ರಾತ್ರಿ ಹಠಾತ್ ತಪಾಸಣೆಯ ವೇಳೆ ಉತ್ತರ ಪ್ರದೇಶದ ಗೊಂಡಾದಲ್ಲಿ ದಾಖಲಾಗಿದ್ದ ಒಟ್ಟು 100 ವಿದ್ಯಾರ್ಥಿನಿಯರಲ್ಲಿ 11 ಮಂದಿ ಮಾತ್ರ ಹಾಸ್ಟೆಲ್‌ನಲ್ಲಿ ಹಾಜರಿರುವುದು ಕಂಡುಬಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.
ಪರಸ್ಪುರ ಎಂಬಲ್ಲಿನ ಕಸ್ತೂರ್ಬಾ ಗಾಂಧಿ ವಸತಿ ಬಾಲಕಿಯರ ಶಾಲೆಯಲ್ಲಿ ಸೋಮವಾರ ರಾತ್ರಿ ತಪಾಸಣೆ ನಡೆಸಲಾಯಿತು ಎಂದೂ ಜಿಲ್ಲಾಧಿಕಾರಿ ನೇಹಾ ಶರ್ಮಾ ತಿಳಿಸಿದ್ದಾರೆ.

“ಅಲ್ಲಿ ಒಟ್ಟು 100 ವಿದ್ಯಾರ್ಥಿನಿಯರು ನೋಂದಾಯಿಸಿಕೊಂಡಿದ್ದಾರೆ. ಆದರೆ 11 ವಿದ್ಯಾರ್ಥಿನಿಯರು ಮಾತ್ರ ಶಾಲೆಯಲ್ಲಿ ಹಾಜರಿರುವುದು ಕಂಡುಬಂದಿದೆ. ಈ ಹಿನ್ನೆಲೆ 89 ವಿದ್ಯಾರ್ಥಿನಿಯರ ಗೈರುಹಾಜರಿಯ ಬಗ್ಗೆ ವಾರ್ಡನ್ ಸರಿತಾ ಸಿಂಗ್ ಕೇಳಿದಾಗ ಸಮರ್ಪಕ ಉತ್ತರವನ್ನು ನೀಡಿಲ್ಲ” ಎಂದೂ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಅಲ್ಲದೆ, “ಇದು ಗಂಭೀರ ನಿರ್ಲಕ್ಷ್ಯ ಎಂದು ಹೇಳಲಾಗಿದೆ. ವಸತಿ ಬಾಲಕಿಯರ ಶಾಲೆಗಳನ್ನು ಈ ರೀತಿ ನಡೆಸುವಂತಿಲ್ಲ” ಎಂದೂ ಜಿಲ್ಲಾಧಿಕಾರಿ ಹೇಳಿದ್ದು, ಈ ಹಿನ್ನೆಲೆ ಎಫ್‌ಐಆರ್ ದಾಖಲಿಸಲು ಆದೇಶಿಸಿದ್ದಾರೆ. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಶಾಲಾ ವಾರ್ಡನ್, ಪೂರ್ಣಾವಧಿ ಶಿಕ್ಷಕ, ಕಾವಲುಗಾರ ಮತ್ತು ಪ್ರಾಂತೀಯ ರಕ್ಷಣಾ ದಳದ (ಪಿಆರ್‌ಡಿ) ಗೇಟ್‌ ಬಳಿ ರಾತ್ರಿ ವೇಳೆ ಕರ್ತವ್ಯ ಕಾಯುತ್ತಿದ್ದ ಜವಾನನ ವಿರುದ್ಧ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಜಿಲ್ಲಾ ಶಿಕ್ಷಣ ಅಧಿಕಾರಿ (ಬಿಎಸ್‌ಎ) ಪ್ರೇಮ್ ಚಂದ್ ಯಾದವ್ ತಿಳಿಸಿದ್ದಾರೆ.

ಇದರೊಂದಿಗೆ ನೌಕರರ ವಿರುದ್ಧವೂ ಇಲಾಖಾ ಕ್ರಮ ಕೈಗೊಳ್ಳಲಾಗುತ್ತಿದ್ದು, ಕರ್ತವ್ಯದಲ್ಲಿರುವ ಸಿಬ್ಬಂದಿ ವಿರುದ್ಧ ಇಲಾಖಾ ಕ್ರಮಕ್ಕಾಗಿ ಜಿಲ್ಲಾ ಯುವ ಕಲ್ಯಾಣಾಧಿಕಾರಿಗೆ ಪ್ರತ್ಯೇಕ ಪತ್ರ ಬರೆಯಲಾಗಿದೆ ಎಂದು ಬಿಎಸ್‌ಎ ತಿಳಿಸಿದೆ. ಇಲ್ಲಿ ಗೈರಾಗಿರುವ ವಿದ್ಯಾರ್ಥಿನಿಯರು ಬೇರೆ ಕಡೆ ತಿರುಗಾಡಲು ಹೋಗುತ್ತಿದ್ದಾರೊ ಅಥವಾ ಏನಾದರೂ ಸಮಸ್ಯೆಗಲ್ಲಿ ಸಿಲುಕಿದ್ದಾರಾ ಎಮಬ ಬಗ್ಗೆ ತನಿಖೆಯ ಬಳಿಕವಷ್ಟೇ ತಿಳಿಯಬೇಕಿದೆ.

Related posts

ವಯಸ್ಸು ಮೀರಿದ ಯುವಕರನ್ನೇ ಟಾರ್ಗೆಟ್‌ ಮಾಡ್ತಿದ್ದ ನಕಲಿ ಕುಟುಂಬ..! 3 ವರ್ಷದಲ್ಲಿ 5 ಮದುವೆಯಾಗಿದ್ದ ಆಕೆಯ ವಿಚಿತ್ರ ಕಹಾನಿ ಇಲ್ಲಿದೆ..!

ಕುಕ್ಕರ್, ಸೀರೆ ಕಂಡರೆ ಬೆಂಕಿ ಹಚ್ಚಿ ಎಂದು ಜೆಡಿಎಸ್ ಕಾರ್ಯಕರ್ತರಿಗೆ ಹೇಳಿದ ಹೆಚ್.ಡಿ.ಕೆ..! ಗ್ರಾಮಗಳಿಗೆ ಪ್ಯಾರಾ ಮಿಲಿಟರಿ ಪೋರ್ಸ್ ತರಲು ಹೇಳುತ್ತೇನೆ ಎಂದ ಮಾಜಿ ಮುಖ್ಯಮಂತ್ರಿ..!

ನಟ ದರ್ಶನ್ ಗನ್ ಲೈಸೆನ್ಸ್ ರದ್ದು..! ದರ್ಶನ್ ಮನವಿ ತಿರಸ್ಕರಿಸಿದ ಪೊಲೀಸರು..!