ಕ್ರೀಡೆ/ಸಿನಿಮಾಕ್ರೈಂವೈರಲ್ ನ್ಯೂಸ್

ಆಸ್ಪತ್ರೆಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿದ್ದ ಆಕೆ ಸಿನಿಮಾದಲ್ಲಿ ನಟಿಸುವ ಆಸೆಯಿಂದ ಹಣ ಕಳೆದುಕೊಂಡದ್ದು ಹೇಗೆ? ಯುವತಿಗೆ ಮೋಸ ಮಾಡಿ ಬೆದರಿಕೆ ಹಾಕಿದ ಆ ನಿರ್ಮಾಪಕ ಯಾರು?

ನ್ಯೂಸ್ ನಾಟೌಟ್: ಸಿನಿಮಾದಲ್ಲಿ ಚಾನ್ಸ್​ ನೀಡುವುದಾಗಿ ನಂಬಿಸಿ ಯುವತಿಯೊಬ್ಬರು ವಂಚನೆಗೆ ಒಳಗಾಗಿರುವುದು ತಿಳಿದು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ರಂಗಿನರಾಟೆ ಹೆಸರಿನ ಸಿನಿಮಾ ನಿರ್ಮಾಪಕ ಸಂತೋಷ್​ ವಿರುದ್ಧ ವಂಚನೆ ಆರೋಪ ಕೇಳಿಬಂದಿದ್ದು, ಹಾಸನ ಮೂಲದ ಭವ್ಯಶ್ರೀ ಎಂಬಾಕೆ ಮೋಸ ಹೋಗಿದ್ದಾರೆ ಎನ್ನಲಾಗಿದೆ. ಚಾನ್ಸ್​ ಕೊಡಿಸುವುದಾಗಿ ಹಣ ಪಡೆದು ಸಂತೋಷ್​ ವಂಚಿಸಿದ್ದಾರೆ. ಹಂತ ಹಂತವಾಗಿ ಗೂಗಲ್​ ಪೇ, ಫೋನ್​ ಪೇ ಮೂಲಕ ಹಣ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಂತೋಷ್​ ಹಾಗೂ ಚಂದ್ರು ಎಂಬ ಇಬ್ಬರಿಗೂ ಭವ್ಯಶ್ರೀ ಹಣ ಪಾವತಿ ಮಾಡಿದ್ದಾರೆ ಎನ್ನಲಾಗಿದ್ದು. ಒಟ್ಟು 20 ಸಾವಿರ ರೂ. ಹಣ ಪಡೆದಿರುವ ಸಂತೋಷ್​ ಹಾಗೂ ಚಂದ್ರು, ಇದೀಗ ಹಣ ವಾಪಸ್​ ಕೇಳಿದರೆ ಇಲ್ಲಸಲ್ಲದ ಕಾರಣ ಹೇಳುತ್ತಿದ್ದಾರಂತೆ. ಅಲ್ಲದೆ, ಜೀವ ಬೆದರಿಕೆ ಸಹ ಹಾಕುತ್ತಿದ್ದಾರೆ ಎಂದು ದೂರಲಾಗಿದೆ. ಸಿನಿಮಾ ಅವಕಾಶಗಳ ಬಗ್ಗೆಯೂ ಆರೋಪಿಗಳು ಹಣ ದೊರೆತ ಮೇಲೆ ಏನು ಹೇಳುತ್ತಿಲ್ಲ ಎನ್ನಲಾಗಿದೆ.

ಭವ್ಯಶ್ರೀ, ಗೊರಗುಂಟೆ ಪಾಳ್ಯದ ಆಸ್ಪತ್ರೆಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ನಟಿಸುವ ಆಸೆಗೆ ಬಿದ್ದು, ಹಣ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೇಕಪ್​ ಕಿಟ್​ಗಾಗಿ 20 ಸಾವಿರ ರೂ. ಹಣ ಬೇಕಿದೆ ಎಂದು ಹಣ ಪಡೆದುಕೊಂಡ ಆರೋಪಿಗಳು ಇದೀಗ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Related posts

ಲುಲೂ ಮಾಲ್‌ನಲ್ಲಿ ಭಾರತ ಧ್ವಜಕ್ಕೆ ಅವಮಾನ..! ಮಾಲ್ ನಲ್ಲಿ ರಾರಾಜಿಸಿದ ಪಾಕ್ ಧ್ವಜ! ಏನಿದು ವಿವಾದ?

ಸಂಪಾಜೆ ದರೋಡೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಎಂಟು ಮಂದಿ ಅರೆಸ್ಟ್..?

ನನ್ನ ಹತ್ಯೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಯತ್ನ ಎಂದ ಮಾಜಿ ಶಾಸಕ..! ದೂರು ದಾಖಲಿಸಿದ ಸಂಜಯ್ ಪಾಟೀಲ್