Latestಕ್ರೈಂಬೆಂಗಳೂರು

ಆಸ್ಪತ್ರೆ ಹೊರಗಿನ ಫುಟ್‍ ಪಾತ್‍ ನಲ್ಲಿ ತಂದೆಯೊಂದಿಗೆ ಮಲಗಿದ್ದ ಮಗುವಿನ ಅಪಹರಣ..! ಬಲೂನ್‍ ಗಳನ್ನು ಮಾರಾಟ ಮಾಡಿ ಜೀವಿಸುತ್ತಿದ್ದ ಕುಟುಂಬ..!

734
Representative image

ನ್ಯೂಸ್ ನಾಟೌಟ್: ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಹೊರಗಿನ ಫುಟ್‍ ಪಾತ್‍ನಲ್ಲಿ ತನ್ನ ತಂದೆಯೊಂದಿಗೆ ಮಲಗಿದ್ದ ಮಗುವನ್ನು ಅಪಹರಿಸಿದ ಆರೋಪದಡಿ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜಸ್ಥಾನ ಮೂಲದ ರೋಹಿತ್ (1 ವರ್ಷ) ಎಂಬ ಮಗು ಅಪಹರಣಕ್ಕೊಳಗಾಗಿದೆ ಎನ್ನಲಾಗಿದೆ. ರೋಹಿತ್‍ ನ ತಂದೆ ಮುಖೇಶ್ ಎಂಬವರ ಕುಟುಂಬವು ಶಿವಾಜಿನಗರ ಬಸ್ ನಿಲ್ದಾಣ ಮತ್ತು ಸುತ್ತಮುತ್ತ ಬಲೂನ್‍ ಗಳನ್ನು ಮಾರಾಟ ಮಾಡಿ ಫುಟ್‍ ಪಾತ್‍ ಗಳಲ್ಲಿ ಜೀವಿಸುತ್ತಿತ್ತು ಎಂದು ತಿಳಿದುಬಂದಿದೆ.

ಮೇ 15ರ ಗುರುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಮುಖೇಶ್ ಎಚ್ಚರವಾದಾಗ, ತನ್ನ ಮಗ ರೋಹಿತ್ ಕಾಣೆಯಾಗಿದ್ದಾನೆಂದು ತಿಳಿದು ಗಾಬರಿಗೊಂಡಿದ್ದಾರೆ. ಎಲ್ಲ ಕಡೆ ಹುಡುಕಿದರೂ ಮಗು ಪತ್ತೆಯಾಗಿಲ್ಲ. ಬಳಿಕ ಮುಖೇಶ್ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಪ್ರಕರಣ ಸಂಬಂಧ ಆಸ್ಪತ್ರೆಯ ಒಳಗೆ ಮತ್ತು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ನಂತರ, ಮಹಿಳೆಯೊಬ್ಬರು ಮಗುವನ್ನು ಎತ್ತಿಕೊಂಡು ಸ್ಥಳದಿಂದ ಪರಾರಿಯಾಗುತ್ತಿರುವುದು ಕಂಡುಬಂದಿದೆ. ಆಕೆಯ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿವೆ ಎನ್ನಲಾಗಿದೆ.

ಆಪರೇಷನ್ ಸಿಂಧೂರವನ್ನು ಆರಂಭಿಸಿದಾಗಲೇ ಪಾಕ್ ಗೆ ಮಾಹಿತಿ ನೀಡಿದ್ದೆವು ಎಂದ ಸಚಿವ ಎಸ್. ಜೈಶಂಕರ್..! ಆರಂಭದಲ್ಲೇ ದಾಳಿ ಬಗ್ಗೆ ಮಾಹಿತಿ ನೀಡಿದ್ದು ದೊಡ್ಡ ಅಪರಾಧ ಎಂದ ರಾಹುಲ್ ಗಾಂಧಿ..!

See also  ತುಂಡುಡುಗೆ ತೊಟ್ಟು ತೃತೀಯ ಲಿಂಗಿ ಮಹಿಳೆಯಂತೆ ಅಶ್ಲೀಲ ವಿಡಿಯೋ ಮಾಡ್ತಾನೆ ಎಂದು ಗಂಡನ ವಿರುದ್ಧ ದೂರು ದಾಖಲಿಸಿದ ಪತ್ನಿ..! ಸರ್ಕಾರಿ ವೈದ್ಯನ ವಿರುದ್ಧ ಎಫ್.ಐ.ಆರ್..!
  Ad Widget   Ad Widget     Ad Widget   Ad Widget   Ad Widget   Ad Widget