ಕರಾವಳಿ

ಜಸ್ಟ್ ಮಿಸ್..! ಸೆಲ್ಫಿ ಗೀಳಿಗೆ ಆನೆಯೊಂದಿಗೆ ಹುಚ್ಚಾಟ..!ಯಮನಪಾದ ಸೇರುತ್ತಿದ್ದಾತ ಕೂದಲೆಳೆ ಅಂತರದಲ್ಲಿಯೇ ಪಾರು..!

ನ್ಯೂಸ್‌ ನಾಟೌಟ್‌ :ದಿನಬೆಳಗಾದರೆ ಚಿತ್ರ ವಿಚಿತ್ರ ಸುದ್ದಿಗಳನ್ನು, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಿರುತ್ತೇವೆ. ಅಂತಹುದ್ದೇ ಒಂದು ವಿಚಿತ್ರ ಘಟನೆಯೊಂದು ಸದ್ಯ ವೈರಲ್ ಆಗಿದೆ.ಕಾಡಿನ ಮಧ್ಯೆ ಹಾದುಹೋಗುವ ಹೆದ್ದಾರಿಯಲ್ಲಿ ಕಾರು ನಿಲ್ಲಿಸಿಕೊಂಡು ಸೆಲ್ಫಿ ತೆಗೆಯುತ್ತಿದ್ದಾಗ ಕಾಡಾನೆಯೊಂದು ಅಟ್ಟಿಸಿಕೊಂಡು ಬರುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇಲ್ಲಿ ಆನೆ ಜತೆ ಹುಚ್ಚಾಟ ಮಾಡುತ್ತಿದ್ದಾತನಿಗೆ ಆನೆ ಸರಿಯಾಗಿ ಬುದ್ಧಿ ಕಲಿಸಿದೆ.ಅದರಲ್ಲೂ ಕಾಡಾನೆಗಳನ್ನು ಕಂಡ್ರೆ ಭಯ ಪಡುವವರೇ ಹೆಚ್ಚು ಮಂದಿ.ಅದರ ಜತೆ ಸಾಹಸ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.ಆನೆ ಅಟ್ಟಾಡಿಸಿಕೊಂಡು ಬರುತ್ತಿರುವಾಗಲೇ ಇಬ್ಬರು ಓಡಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ,ಒಬ್ಬ ತಪ್ಪಿಸಿಕೊಳ್ಳಲಾಗದೇ ಸ್ಥಳದಲ್ಲಿಯೆ ನೆಲಕ್ಕುರುಳಿದ್ದಾನೆ. ಇನ್ನೇನು ಆನೆ ಆತನ ಮೇಲೆ ದಾಳಿ ಮಾಡಬೇಕು ಅನ್ನುವಷ್ಟರಲ್ಲಿ, ರಸ್ತೆಯಲ್ಲಿ ಲಾರಿ ಬರುತ್ತಿರುವ ಸದ್ದಿಗೆ ಆನೆ ಆತನನ್ನು ಬಿಟ್ಟು ಅಲ್ಲಿಂದ ತೆರಳಿದೆ. ಸದ್ಯ ಬದುಕಿದೆವು ಎಂದು ಇಬ್ಬರೂ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ.

Related posts

ಮರದ ಕೊಂಬೆ ಕಡಿಯಲು ಹೋಗಿ ವ್ಯಕ್ತಿಗೆ ವಿದ್ಯುತ್ ತಂತಿ ಸ್ಪರ್ಶ,ಸಾವು, ಮರದಲ್ಲಿಯೇ ನೇತಾಡುತ್ತಿತ್ತು ವ್ಯಕ್ತಿಯ ಮೃತದೇಹ!

ಸುಳ್ಯ: ಸರ್ಕಾರಿ ಶಾಲೆಗೆ ನುಗ್ಗಿ ಪೀಠೋಪಕರಣಗಳನ್ನೇ ಹಾನಿಗೊಳಿಸಿದ ಕಿಡಿಗೇಡಿಗಳು..! ಕಿಟಕಿ ಮೂಲಕ ನುಗ್ಗಿದವರ ಹಿಡಿದು ಬೆಂಡೆತ್ತುವರೇ ಪೊಲೀಸರು..?

ಸುಳ್ಯ ಕ್ಷೇತ್ರದ ಸಹಕಾರ ಭಾರತಿ ಮತ್ತು ಬಿಜೆಪಿ ಅಭ್ಯರ್ಥಿಯಾಗಿ ಎಸ್‌.ಎನ್‌.ಮನ್ಮಥ ಆಯ್ಕೆ, ಈ ಸಲ ಒಗ್ಗಟ್ಟಿನಲ್ಲಿ ಬಲವಿದೆ ಮಂತ್ರ..!