ಕರಾವಳಿಸುಳ್ಯ

ವೇಣೂರು ಬಳಿ ಭೀಕರ ಪಟಾಕಿ ಸ್ಪೋಟ ಪ್ರಕರಣ‌, ಪರಾರಿಯಾಗುತ್ತಿದ್ದ ಆರೋಪಿ ಬಶೀರ್ ಸುಳ್ಯದಲ್ಲಿ ಬಂಧನ..!

ನ್ಯೂಸ್‌ ನಾಟೌಟ್‌: ವೇಣೂರು ಬಳಿ ಭೀಕರ ಸ್ಪೋಟ ಪ್ರಕರಣ‌ಕ್ಕೆ ಸಂಬಂಧ ಪಟ್ಟ ಹಾಗೆ ಆರೋಪಿ ಸಯ್ಯದ್ ಬಷೀರ್‌ನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.ವೇಣೂರಿನಿಂದ ಪರಾರಿಯಾಗುತ್ತಿದ್ದ ಬಶೀರ್‌ನನ್ನು ಸುಳ್ಯದಲ್ಲಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.ಈ ಘಟನೆಗೆ ಸಂಬಂಧಿಸಿದ ಹಾಗೆ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ಈ ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ “2011ರಲ್ಲಿ ಲೈಸನ್ಸ್ ಪಡೆದು ಪಟಾಕಿ ತಯಾರಿಸುತ್ತಿದ್ದರು.2024ರವರೆಗೂ ಲೈಸನ್ಸ್ ವ್ಯಾಲಿಡ್ ಇತ್ತು.ಈ ಘಟನೆಯಲ್ಲಿ ಮೂರು ಜನ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.ಊರಿನಲ್ಲಿಯು ಎಲ್ಲರೂ ಇವನಿಂದಲೇ ಪಟಾಕಿ ಖರೀದಿ ‌ಮಾಡುತ್ತಿದ್ದರು.

ಬಶೀರ್‌ಗೆ ಮೈಸೂರಿನಿಂದ ಆರ್ಡರ್ ಕೊಟ್ಟಿದ್ದರು.ಮೈಸೂರಿಗಾಗಿ ಪಟಾಕಿ ರೆಡಿ ಮಾಡಲಾಗುತ್ತಿತ್ತು.ಈ ಬಗ್ಗೆಯೂ ತನಿಖೆ ಮಾಡುತ್ತಿದ್ದೇವೆ.ಘಟನೆ ಬಗ್ಗೆ ಬಶೀರ್ ವಿಚಾರಣೆ ಮಾಡುತ್ತಿದ್ದೆವೆ.ಒಂದು ತಯಾರಿ ಮಾಡಿ, ಮತ್ತೊಂದು ಕಡೆ ಶೇಖರಣೆ ಮಾಡುತ್ತಿದ್ದರು.ಮೈಸೂರಿನ ಆರ್ಡರ್ ಗಾಗಿ ದೊಡ್ಡ ಸೈಜ್ ಪಟಾಕಿ ಮಾಡುತ್ತಿದ್ದರು.

ಜಾತ್ರೆ ಉತ್ಸವಗಳಿಗೆ ಇಲ್ಲಿಂದ ಪಟಾಕಿ ಖರೀದಿ ಮಾಡುತ್ತಿದ್ದರು.ಸೇಫ್ಟಿ ಮೆಜರ್ ತೆಗೆದುಕೊಳ್ಳಲಿಲ್ಲ ಅಂತ ಪ್ರಕರಣ ದಾಖಲಿಸಿದ್ದೇವೆ.ಪಕ್ಕದ ಮನೆಯವರಿಂದ ಕಂಪ್ಲೇಂಟ್ ತೆಗೆದುಕೊಂಡಿದ್ದೇವೆ.ದುರಂತ ಅಂತ್ಯ ಕಂಡಿರುವ ಕುಟುಂಬದವರಿಗೂ ಮಾಹಿತಿ ನೀಡಿದ್ದೇವೆ.ಉಸಿರು ಚೆಲ್ಲಿದ ಗುರುತು ಪತ್ತೆಗೆ DNA ಪರೀಕ್ಷೆ ಮಾಡುತ್ತೇವೆ ಎಂದಿದ್ದಾರೆ.

ವೇಣೂರಿನ ಗೋಳಿಯಂಗಡಿಯಲ್ಲಿ ಪಟಾಕಿ ಸ್ಫೋಟ ಗೊಂಡು ಸುತ್ತಮುತ್ತಲಿನ ಮನೆಗಳಿಗೆ ಹಾನಿ ಸಂಭವಿಸಿತ್ತು.ಮನೆಗಳು ಸಂಪೂರ್ಣವಾಗಿ ಜಖಂಗೊಂಡಿದ್ದವು.ತುಂಡು ತುಂಡಾಗಿ ಮನೆಯ ಛಾವಣಿಯ ಶೀಟ್ ಗಳು ಮುರಿದು ಕೆಳಗೆ ಬಿದ್ದಿದ್ದವು.

ಒಟ್ಟು ಐದು ಬಾರಿ ಭಾರೀ ಸ್ಫೋಟ ಸಂಭವಿಸಿತ್ತು.ಸ್ಫೋಟ ಆಗುತ್ತಿದ್ದಂತೆಯೇ ಕಣ್ಣು ಮಂಜಾಯಿತು.ಮನೆಯ ಶೀಟ್ ಗಳು ಮುರಿದು ಕೆಳಗೆ ಬಿತ್ತು.ಸ್ಫೋಟ ದ ಭೀಕರತೆ ಸ್ಥಳೀಯ ವೃದ್ದ ದಂಪತಿ ವಿವರಿಸಿದ್ದಾರೆ.ಘಟನೆಯಲ್ಲಿ ಮೂವರು ದುರಂತ ಅಂತ್ಯ ಕಂಡಿದ್ದರು.ಮಾತ್ರವಲ್ಲ ದೇಹವೆಲ್ಲ ಛಿದ್ರ ಛಿದ್ರವಾಗಿದ್ದು ಗುರುತೇ ಸಿಗದೇ ಹಾಗೆ ಪ್ರಾಣ ಹಾನಿಯಾಗಿತ್ತು.

https://www.youtube.com/watch?v=1JnHTxLJRGA

Related posts

ಶಿವಮೊಗ್ಗದಲ್ಲಿ ಕಲ್ಲು ತೂರಾಟ ಪ್ರಕರಣ; ಕಾಂಗ್ರೆಸ್ ಸರಕಾರದ ವಿರುದ್ಧ ಕಿಡಿಕಾರಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ;ಹೇಳಿದ್ದೇನು?

ಉಡುಪಿ:ತನ್ನ ಜಾಗಕ್ಕೆ ದನಗಳು ಪ್ರವೇಶ ಮಾಡುತ್ತವೆಯೆಂದು ಗುಂಡಿಟ್ಟ ಪ್ರಕರಣ;ವಿ.ಹಿಂ.ಪ. ಬಜರಂಗದಳ ಬೈಂದೂರು ಪ್ರಖಂಡದ ನೇತೃತ್ವದಲ್ಲಿ ಪ್ರತಿಭಟನೆ,ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹ,ವಿಡಿಯೋ ಇಲ್ಲಿದೆ..

ಹನುಮಗಿರಿಯ ಫ್ಯಾನ್ಸಿಯಲ್ಲಿ ಬೆಂಕಿ ಅವಘಡ, ಭಾರಿ ನಷ್ಟ