ಕರಾವಳಿಪುತ್ತೂರುಭಕ್ತಿಭಾವ

ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೆಗೆ ಹರಿದು ಬಂದ ಹೊರೆಕಾಣಿಕೆ

373

ನ್ಯೂಸ್‌ನಾಟೌಟ್‌: ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಳದ ವರ್ಷಾವಧಿ ಜಾತ್ರೋತ್ಸವ ಏ.10ರಿಂದ 20ರವರೆಗೆ ಕ್ಷೇತ್ರದ ತಂತ್ರಿ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿವೆ.

ಈ ಪ್ರಯುಕ್ತ ಶನಿವಾರ ಸಾಯಂಕಾಲ ದರ್ಬೆ ವೃತ್ತ ಹಾಗೂ ಬೊಳುವಾರು ಸುಬ್ರಹ್ಮಣ್ಯ ನಗರದಿಂದ ಹಸಿರುವಾಣಿ ಮೆರವಣಿಗೆ ದೇವಳಕ್ಕೆ ವಿವಿಧ ವಾಹನಗಳೊಂದಿಗೆ ಸಾಗಿ ಬಂತು. ಮೆರವಣಿಗೆಯಲ್ಲಿ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಮಹಿಳೆಯರು ಪೂರ್ಣಕುಂಭ ಸ್ವಾಗತದೊಂದಿಗೆ ಕಾಲ್ನಡಿಗೆಯೊಂದಿಗೆ ಕಲಶ ಹಿಡಿದುಕೊಂಡು ಹೊರೆಕಾಣಿಕೆಗೆ ಮೆರವಣಿಗೆಯೊಂದಿಗೆ ಸಾಗಿಬಂದರು. ಮೆರವಣಿಗೆಗೆ ಚೆಂಡೆ, ಕುಣಿತ ಭಜನೆ, ಪೂರ್ಣಕುಂಬ ಸ್ವಾಗತ ಮೆರುಗು ತುಂಬಿದವು. ಧಾರ್ಮಿಕ ಶಿಕ್ಷಣ ಪಡೆಯುವ 15 ಕೇಂದ್ರಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು, ಎರಡು ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

See also  ಕೊಡೆ ಬಿಡಿಸಿದ ಪರಿಣಾಮ ರಸ್ತೆಗೆ ಎಸೆಯಲ್ಪಟ್ಟ ಜೂನಿಯರ್ ಕಾಲೇಜಿನ ಉಪನ್ಯಾಸಕಿ, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget