ಕ್ರೈಂಬೆಂಗಳೂರುವೈರಲ್ ನ್ಯೂಸ್

ಗಂಡನೇ ಹೆಂಡತಿಯನ್ನು ಹನಿಟ್ರ್ಯಾಪ್ ಗೆ ಕಳುಹಿಸಿದ್ದೆಲ್ಲಿ..? ಕೋಟ್ಯಧಿಪತಿಗೆ ಹಾಕಿದ ಗಾಳ ತಪ್ಪಿದ್ದೇಗೆ? ಇಲ್ಲಿದೆ ಸಿನಿಮೀಯ ಘಟನೆ!

ನ್ಯೂಸ್ ನಾಟೌಟ್: ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್ ಮಾಡಿದ್ದ ಗ್ಯಾಂಗ್ ಒಂದನ್ನು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಉದ್ಯಮಿಯೊಬ್ಬನನ್ನು ಹನಿಟ್ರ್ಯಾಪ್‌ಗೆ (Honey Trap) ಬೀಳಿಸಿ ಹಣಕ್ಕೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಗಂಡ-ಹೆಂಡತಿ ಮತ್ತು ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಖಲೀಮ್, ಸಭಾ, ಓಬೆದ್ ರಕೀಮ್, ಅತೀಕ್ ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಉದ್ಯಮಿ ಅತೀವುಲ್ಲಾ ಎಂಬಾತನನ್ನು ಆರೋಪಿಗಳು ಟ್ರ್ಯಾಪ್ ಮಾಡಲು ಹೋಗಿದ್ದರು ಎನ್ನಲಾಗಿದೆ.

ಗಂಡ ಖಲೀಮ್ ಹೆಂಡತಿ ಸಭಾಳನ್ನು ಹನಿಟ್ರಾಪ್ ಗೆ ಕಳುಹಿಸಿಕೊಡುತ್ತಿದ್ದ ಎನ್ನಲಾಗಿದೆ. ಎರಡು ತಿಂಗಳ ಹಿಂದೆ ಅತಾವುಲ್ಲಾ ಎಂಬವರನ್ನು ಖಲೀಮ್ ಪರಿಚಯ ಮಾಡಿಕೊಂಡಿದ್ದ. ಈ ವೇಳೆ ಮೊಬೈಲ್ ನಂಬರ್ ಪಡೆದುಕೊಂಡಿದ್ದ. ಕೆಲ ದಿನಗಳ ಬಳಿಕ ಅತಾವುಲ್ಲಾಗೆ ಕರೆ ಮಾಡಿ ಸಭಾಳನ್ನ ಪರಿಚಯಿಸಿದ್ದ ಎನ್ನಲಾಗಿದೆ.
ಈಕೆ ವಿಧವೆ ಎಂದು ಹೇಳಿದ್ದು, ಆಕೆಯ ಜೊತೆಯಿರುವಂತೆ ಉದ್ಯಮಿಗೆ ಗಂಡನೇ ಹೇಳಿದ್ದ ಎನ್ನಲಾಗಿದೆ.

ನವೆಂಬರ್ 14 ರಂದು ಅತಾವುಲ್ಲಾಗೆ ಫೋನ್ ಮಾಡಿದ್ದ ಸಭಾ,‌ ‘ಆರ್.ಆರ್. ನಗರದ ಬಳಿ ಬಾ.. ಬರುವಾಗ ರೂಂ ಬುಕ್ ಮಾಡಲು ಆಧಾರ್ ತರುವಂತೆ’ ಹೇಳಿದ್ದಳು. ಪ್ಲ್ಯಾನ್‌ನಂತೆ ಇತ್ತ ಸಭಾ ಹಾಗು ಅತಾವುಲ್ಲಾ ಜೊತೆಯಲ್ಲಿದ್ದಾಗ ಗಂಡನ ಹನಿಟ್ರ‍್ಯಾಪ್ ಗ್ಯಾಂಗ್ ಎಂಟ್ರಿ ಕೊಟ್ಟಿತ್ತು ಎನ್ನಲಾಗಿದೆ.

ಒಬೇದ್ ಖಾನ್ ಎಂಬಾತ ಇಬ್ಬರನ್ನ ತಡೆದು ಸೀನ್ ಕ್ರಿಯೇಟ್ ಮಾಡಿದ್ದಾನೆ. ಖಲೀಮ್, ರಕೀಬ್, ಅತೀಕ್‌ನನ್ನ ಸ್ಥಳಕ್ಕೆ ಕರೆಸಿ ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ. ನಿಮ್ಮ ವಿಚಾರ ಮನೆಯವರಿಗೆ ತಿಳಿಸುವುದಾಗಿ ಹೆದರಿಸಿ ಜೇಬಲ್ಲಿದ್ದ 4,000 ರೂ. ಹಣವನ್ನು ಗ್ಯಾಂಗ್ ಕಸಿದಿತ್ತು. ಅಲ್ಲದೆ 6 ಲಕ್ಷ ರೂ. ಹಣ ತರುವಂತೆ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ.

ಸಿಸಿಬಿಗೆ ಮಾಹಿತಿ ತಲುಪಿ ಮಧ್ಯ ಪ್ರವೇಶಿಸಿದೆ.ಸದ್ಯ ಪ್ರಕರಣ ಸಂಬಂಧ ಆರ್.ಆರ್. ನಗರ ಪೊಲೀಸರು, ದಂಪತಿ ಸೇರಿ ಆರು ಮಂದಿಯನ್ನು ಬಂಧಿಸಿದ್ದಾರೆ. ಸಭಾ ಹಾಗೂ ಖಲೀಮ್ ದಂಪತಿಯ ಹನಿಟ್ರ‍್ಯಾಪ್ ಪ್ಲ್ಯಾನ್‌ ಬಯಲಿಗೆಳೆದಿದೆ ಎಮದು ವರದಿ ತಿಳಿಸಿದೆ.

Related posts

ಮೂಲ್ಕಿಯಲ್ಲಿ ಭೀಕರ ಬೈಕ್-ಕಾರು ಅಪಘಾತ, ಖಾಸಗಿ ಸಂಸ್ಥೆಯ ಉದ್ಯೋಗದಲ್ಲಿದ್ದ ಯುವತಿ ಸ್ಥಳದಲ್ಲೇ ಕೊನೆಯುಸಿರು

ನವಜಾತ ಶಿಶುವನ್ನು ಜೀವಂತವಾಗಿ ಮಣ್ಣಡಿಯಲ್ಲಿ ಹೂತ ಕ್ರೂರಿಗಳು..! ಬಹಿರ್ದೆಸೆಗೆ ಹೋದವರಿಂದ ಮಗು ಪತ್ತೆ..!

ಕೆರೆಯ ಮೀನು ತಿಂದು ಇಬ್ಬರು ಸಾವು, ಹಲವರು ಅಸ್ವಸ್ಥ..! ನೀರಿಲ್ಲದೆ ಬತ್ತಿದ್ದ ಕೆರೆಯ ಕೆಸರಿನಲ್ಲಿದ್ದ ಮೀನುಗಳಲ್ಲಿ ವಿಷವಿತ್ತಾ..?