Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಹನಿಟ್ರ್ಯಾಪ್ ಕೇಸ್ ​ನಲ್ಲಿ ಗುಜರಾತ್ ​ನ ಸೋಶಿಯಲ್ ಮೀಡಿಯಾ ಸ್ಟಾರ್ ಬಂಧನ..! 11 ತಿಂಗಳು ತಲೆಮರೆಸಿಕೊಂಡಿದ್ದಾಕೆ ವಿರುದ್ಧ ಒಟ್ಟು 9 ಪ್ರಕರಣ..!

184

ನ್ಯೂಸ್ ನಾಟೌಟ್: ಗುಜರಾತ್ ​ನ ಸೋಶಿಯಲ್ ಮೀಡಿಯಾ ಸ್ಟಾರ್ ಕೀರ್ತಿ ಪಟೇಲ್ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

2024ರಲ್ಲಿ ಕೀರ್ತಿ ವಿರುದ್ಧ ಸುಲಿಗೆ, ಹನಿಟ್ರ್ಯಾಪಿಂಗ್ ಮತ್ತು ಐಟಿ ಕಾಯ್ದೆಯಡಿ ದೂರು ದಾಖಲಾಗಿತ್ತು.. ಈ ಪ್ರಕರಣದಲ್ಲಿ ಒಟ್ಟು 5 ಆರೋಪಿಗಳಿದ್ದಾರೆ ಎಂದು ಸೂರತ್ ಡಿಸಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ. ಕೀರ್ತಿ ಕಳೆದ 11 ತಿಂಗಳಿನಿಂದ ತಲೆಮರೆಸಿಕೊಂಡಿದ್ದಳು. ಈ ಹಿನ್ನೆಲೆಯಲ್ಲಿ ಕೋರ್ಟ್​ ಅರೆಸ್ಟ್ ವಾರೆಂಟ್ ಹೊರಡಿಸಿತ್ತು. ವಾರೆಂಟ್ ಜಾರಿ ಬೆನ್ನಲ್ಲೇ ಆಕೆಗಾಗಿ ಹುಡುಕಾಟ ನಡೆಸುತ್ತಿದ್ದೆವು. ಕೊನೆಗೂ ಆಕೆಯನ್ನು ಅಹ್ಮದಾಬಾದ್ ​ನಲ್ಲಿ ಬಂಧಿಸಲಾಗಿದೆ. ಶೀಘ್ರದಲ್ಲೇ ಕೋರ್ಟ್​​ಗೆ ಒಪ್ಪಿಸಿ ಮುಂದಿನ ಕ್ರಮ ತೆಗೆದುಕೊಳ್ತೇವೆ ಎಂದು ಡಿಸಿಪಿ ತಿಳಿಸಿದ್ದಾರೆ.

ಕೀರ್ತಿ ವಿರುದ್ಧ ಒಟ್ಟು ಒಂಬತ್ತು ಪ್ರಕರಣಗಳಿವೆ. ಇವುಗಳಲ್ಲಿ 5 ಪ್ರಕರಣಗಳು ಸೂರತ್ ನಗರದಲ್ಲಿ ದಾಖಲಾಗಿವೆ. ಈಕೆ ಸೋಶಿಯಲ್ ಮೀಡಿಯಾ ಪ್ರಭಾವಿಯಾಗಿ ಕೆಲಸ ಮಾಡಿದ್ದಾಳೆ. ಇನ್‌ ಸ್ಟಾಗ್ರಾಮ್‌ನಲ್ಲಿ 1 ಮಿಲಿಯನ್‌ ಗಿಂತಲೂ ಹೆಚ್ಚು ಫಾಲೋವರ್ಸ್​ ಹೊಂದಿದ್ದಾಳೆ. ಸದ್ಯ ಸೂರತ್ ​ನ ಬಿಲ್ಡರ್ ಒಬ್ಬರನ್ನು ಹನಿಟ್ರ್ಯಾಪ್ ಮಾಡಿದ ಪ್ರಕರಣದಲ್ಲಿ ಬಂಧಿಸಲಾಗಿದೆ.

ಅರೆಸ್ಟ್ ಬೆನ್ನಲ್ಲೇ ಕೀರ್ತಿಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಡಿಸೆಂಬರ್ 2022ರಲ್ಲಿ, ಕುಟುಂಬವೊಂದಕ್ಕೆ ಕಿರುಕುಳ ನೀಡಿದ್ದಕ್ಕಾಗಿ ಕೀರ್ತಿ ಸೇರಿದಂತೆ ಹತ್ತು ಜನರನ್ನು ಬಂಧಿಸಲಾಗಿತ್ತು. ಈಗ ಮತ್ತೆ ಬಂಧನವಾಗಿದೆ.

ಬೆಂಗಳೂರಿನ ಅಪಾರ್ಟ್​​ಮೆಂಟ್ ನ ಒಳಚರಂಡಿಯಲ್ಲಿ ನಿಗೂಢ ತಲೆಬುರುಡೆ, ಅಸ್ತಿಪಂಜರ ಪತ್ತೆ..!ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮಾದರಿಗಳನ್ನು ಕಳುಹಿಸಿದ ಪೊಲೀಸರು..!

ಇಸ್ರೇಲ್‌ ನ ಅತಿ ದೊಡ್ಡ ಆಸ್ಪತ್ರೆ ಮೇಲೆ ಇರಾನ್ ಕ್ಷಿಪಣಿ ದಾಳಿ..! ವಿಡಿಯೋ ವೈರಲ್

See also  ಕುರ್ತಾ, ಪೈಜಾಮಾದಲ್ಲಿ ಇರುತ್ತಿದ್ದ ನರೇಂದ್ರ ಮೋದಿ ಪಂಚೆಯಲ್ಲಿ ಮಿಂಚಿದ್ದೇಕೆ..? ಇಲ್ಲಿದೆ ವೈರಲ್‌ ವಿಡಿಯೋ
  Ad Widget   Ad Widget   Ad Widget   Ad Widget   Ad Widget   Ad Widget   Ad Widget