ನ್ಯೂಸ್ ನಾಟೌಟ್ : ನಟ ರಿಷಬ್ ಶೆಟ್ಟಿ ಕಾಂತಾರ-1 ಬಗ್ಗೆ ಬಿಗ್ ಅಪ್ಡೇಟ್ವೊಂದನ್ನು ಕೊಟ್ಟಿದ್ದಾರೆ. ಈಗಾಗಲೇ ಕಾಂತಾರ ಚಾಪ್ಟರ್ 1 ಶೂಟಿಂಗ್ ಕಂಪ್ಲೀಟ್ ಆಗಿದ್ದು, ಅದೇ ಖುಷಿಯಲ್ಲಿ ತಂಡ ಕಾಂತಾರ ಮೇಕಿಂಗ್ ಗ್ಲಿಂಪ್ಸ್ ಬಿಡುಗಡೆ ಮಾಡಿದೆ.
ಸುಮಾರು 250 ದಿನಗಳ ಶೂಟಿಂಗ್ ಮುಗಿಸಿರೋ ಕಾಂತಾರ ಟೀಂ, ಸಾವಿರಾರು ಕಾರ್ಮಿಕರ ನಡುವೆ ವರ್ಲ್ಡ್ ಆಫ್ ಕಾಂತಾರ ಮೇಕಿಂಗ್ ಗ್ಲಿಂಪ್ಸ್ ವಿಡಿಯೋವನ್ನು ಹೊಂಬಾಳೆ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿದೆ. ಮೇಕಿಂಗ್ ಗ್ಲಿಂಪ್ಸ್ನಲ್ಲಿ ನಟ ರಿಷಬ್ ಶೆಟ್ಟಿ, ‘‘ನನ್ನದೊಂದು ಕನಸು.. ನಮ್ಮ ಮಣ್ಣಿನ ಕಥೆಯನ್ನು ಇಡೀ ಪ್ರಪಂಚಕ್ಕೆ ಹೇಳಬೇಕು ಅಂತ. ನಮ್ಮ ಊರು, ನಮ್ಮ ಜನ, ನಮ್ಮ ನಂಬಿಕೆಗಳು. ನಾನು ಆ ಕನಸಿನ ಬೆನ್ನ ಹತ್ತುವುದಕ್ಕೆ ಶುರು ಮಾಡಿದಾಗ ಸಾವಿರಾರು ಜನ ನನ್ನ ಬೆನ್ನ ಹಿಂದೆ ನಿಂತರು. ಮೂರು ವರ್ಷಗಳ ಪರಿಶ್ರಮ, 250 ದಿನಗಳ ಚಿತ್ರೀಕರಣ. ಎಷ್ಟೆ ಕಷ್ಟ ಬಂದರು ನಾನು ನಂಬಿದ ದೈವ ನನ್ನ ಕೈ ಬಿಡಲಿಲ್ಲ. ನನ್ನ ಇಡೀ ತಂಡ, ನನ್ನ ನಿರ್ಮಾಪಕರು ನನ್ನ ಬೆನ್ನ ಹಿಂದೆ ನಿಂತಿದ್ದರು. ಪ್ರತಿದಿನ ಸೆಟ್ನಲ್ಲಿ ಸಾವಿರಾರು ಜನರನ್ನು ನೋಡುತ್ತಿದ್ದಾಗ ನನಗೆ ಕಾಡುತ್ತಿದ್ದ ವಿಷಯ ಒಂದೇ. ಇದು ಕೇವಲ ಸಿನಿಮಾ ಅಲ್ಲ, ಇದೊಂದು ಶಕ್ತಿ. ಕಾಂತರದ ಪ್ರಪಂಚಕ್ಕೆ ನಿಮ್ಮೆಲ್ಲರಿಗೂ ಸ್ವಾಗತ’’ ಎಂದು ಹೇಳಿದ್ದಾರೆ. ಸದ್ಯಕ್ಕೆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೀತಿವೆ. ಅಕ್ಟೋಬರ್ 2ರಂದು ಬಹುನಿರೀಕ್ಷಿತ ಕಾಂತಾರಾ 1 ಸಿನಿಮಾ ಬಿಡುಗಡೆ ಆಗಲಿದೆ.