ನ್ಯೂಸ್ ನಾಟೌಟ್ : ‘ಹುಣಸೆ ಮರ ಮುಪ್ಪಾದರೂ ಅದರ ಹುಳಿ ಮುಪ್ಪಾಗದು’ ಅನ್ನುವ ಮಾತಿದೆ. ಅಂತೆಯೇ ಇಲ್ಲೊಬ್ಬ 83 ವರ್ಷದ ಮುದುಕ 29 ವರ್ಷದ ಪ್ರೇಯಸಿಯನ್ನು ಗರ್ಭವತಿಯನ್ನಾಗಿಸಿ ಭಾರಿ ಸುದ್ದಿಯಾಗಿದ್ದಾನೆ.
ಹಾಲಿವುಡ್ನ ಅನೇಕ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಜನಪ್ರಿಯರಾಗಿರುವ 83 ವರ್ಷ ಅಲ್ ಪಚಿನೋ ತಂದೆಯಾಗುತ್ತಿದ್ದಾರೆ. 29 ವರ್ಷದ ಪ್ರೇಯಸಿ ನೂರ್ ಅಲ್ಫಾಲ್ಲಾ ಅವರನ್ನು ಅಲ್ ಪಚಿನೋ ವಿವಾಹವಾಗಿದ್ದಾರೆ. ಅಚ್ಚರಿ ಎಂದರೆ ನೂರ್ ಅಲ್ಫಾಲ್ಲಾ ಗರ್ಭವತಿಯಾಗಿದ್ದಾರೆ. ಆದರೆ ಈ ಮಗುವಿಗೆ ನಾನು ಅಪ್ಪನಲ್ಲ ಎಂದು ಆರಂಭದಲ್ಲಿ ಅಲ್ ಪಚಿನೋ ವಾದಿಸಿದ್ದಾರೆ. ಕೊನೆಗೆ ಡಿಎನ್‌ಎ ಪರೀಕ್ಷೆ ನಡೆಸುವುದಕ್ಕೆ ನಿರ್ಧರಿಸಲಾಗಿದೆ. ಅಲ್ಲಿ ಅಲ್ ಪಚಿನೋ ಅವರೇ ತಂದೆ ಅನ್ನುವುದು ಸಾಬೀತಾಗಿದೆ. ತನ್ನ ಫರ್ಫಾಮೆನ್ಸ್ ಬಗ್ಗೆ ಅಲ್ ಪಚಿನೋ ಗೆ ನಂಬಿಕೆಯೇ ಬರಲಿಲ್ಲ. ಡಿಎನ್ಎ ಪರೀಕ್ಷಾ ವರದಿ ನಟನಿಗೆ ಅಚ್ಚರಿ ತಂದಿದೆ. ಅಲ್ಲದೆ ಪ್ರೇಯಸಿ ಮೇಲಿನ ಅನುಮಾನಕ್ಕೂ ಬ್ರೇಕ್ ಬಿದ್ದಂತಾಗಿದೆ.