ಕರಾವಳಿವೈರಲ್ ನ್ಯೂಸ್

ಕ್ರೈಸ್ತ ಮಹಿಳೆ ಹಿಂದೂ ದೇಗುಲದ ಅರ್ಚಕಿಯಾಗಿದ್ದೇಗೆ..? ಮತಾಂತರವಾಗದಿದ್ದರೂ ದೇಗುಲದಲ್ಲಿ ಪೂಜೆ ಮಾಡುತ್ತಿರುವ ಈ ಮಹಿಳೆ ಯಾರು? ಯಾವುದು ಆ ದೇಗುಲ?

ನ್ಯೂಸ್ ನಾಟೌಟ್: ಲೆಬನಾನ್ ಇದು ಮಧ್ಯಪೂರ್ವದಲ್ಲಿನ ಒಂದು ಮುಸಲ್ಮಾನ ಬಹುಸಂಖ್ಯಾತ ದೇಶವಾಗಿದೆ. ಇಲ್ಲಿಯ ಕ್ರೈಸ್ತ ರ ಜನಸಂಖ್ಯೆ ಶೇಕಡ ೩೨ ರಷ್ಟು ಇದೆ. ಈ ದೇಶದಲ್ಲಿನ ಹನೀನ ಎಂಬ ಓರ್ವ ಕ್ರೈಸ್ತ ಮಹಿಳೆ ತಮಿಳುನಾಡಿನ ಕೊಯಿಮುತ್ತೂರ್ ಇಲ್ಲಿಯ ಈಶ ಯೋಗ ಕೇಂದ್ರದಲ್ಲಿ ಮಾ ಲಿಂಗ ಭೈರವಿ ದೇವಸ್ಥಾನದಲ್ಲಿ ಅರ್ಚಕಿಯಾಗಿದ್ದಾರೆ.

ಭಾರತದ ಆಶ್ರಮಗಳನ್ನು, ತೀರ್ಥ ಕ್ಷೇತ್ರ ಗಳನ್ನು ಹುಡುಕಿಕೊಂಡು ವಿದೇಶಿಯರು ಲಕ್ಷಾಂತರ ಸಂಖ್ಯೆಯಲ್ಲಿ ಬರುತ್ತಾರೆ, ಮಾತ್ರವಲ್ಲ ಇಲ್ಲೇ ನೆಲೆಸುತ್ತಾರೆ. ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸು ದೇವ್‌ ಆಶ್ರಮದಲ್ಲಿರುವ ಲಿಂಗ ಭೈರವಿ ದೇಗುಲ ದಲ್ಲಿ ಅರ್ಚಕಿಯಾಗಿ ಕೆಲಸ ಮಾಡುತ್ತಿದ್ದಾರೆ.

ಲೆಬನಾನ್‌ ದೇಶದಿಂದ ಬಂದ ಕ್ರೈಸ್ತ ಧರ್ಮೀಯ ಹೆಣ್ಣು ಮಗಳು ಹ್ಯಾನಿನ್‌, ಕೆಂಪು ಸೀರೆ ಉಟ್ಟು ಕೊಂಡು ಶುದ್ಧ ಭಾರ ತೀಯ ದಿರಿಸಿನಲ್ಲಿ ಕಂಗೊಳಿಸುತ್ತಿದ್ದಾರೆ. ಬರೀ ಅಷ್ಟೇ ಆಗಿದ್ದರೆ ವಿಶೇಷವಿರಲಿಲ್ಲ. ಲಿಂಗ ಭೈರವಿಗೆ ಎಲ್ಲ ರೀತಿಯ ಪೂಜೆಯನ್ನೂ ನೆರವೇರಿಸುತ್ತಾರೆ. ಭಾರತೀಯರೂ ಆಕೆಯನ್ನು ಅಷ್ಟೇ ಸಹಜವಾಗಿ ಸ್ವೀಕರಿಸಿದ್ದಾರೆ. ಕೊಯಿಮತ್ತೂರದಲ್ಲಿ ಈ ಮಹಿಳೆಯನ್ನು ‘ಭೈರಾಗಿನಿ ಮಾ ಹನೀನ್’ ಎಂದು ಕರೆಯುತ್ತಾರೆ.

ಲೆಬನಾನ್‌ನಲ್ಲಿ ಜಾಹೀರಾತು ಕಂಪೆನಿಯೊಂದರಲ್ಲಿ ಕಲಾನಿರ್ದೇಶಕಿಯಾಗಿದ್ದ ಹ್ಯಾನಿನ್‌ರದ್ದು ಐಷಾರಾಮಿ ಜೀವನವಾಗಿತ್ತು. ಆದರೆ ಅತ್ಯಂತ ಆತ್ಮೀಯ ಸ್ನೇಹಿತ ರೊಬ್ಬರ ಅಂತ್ಯದ ನಂತರ ಅವರಿಗೆ ಜೀವನದ ಬಗ್ಗೆ ಪ್ರಶ್ನೆ ಶುರುವಾಯಿತು. 2009ರಲ್ಲಿ ಎಲ್ಲವನ್ನೂ ತೊರೆದು ಸದ್ಗುರು ಆಶ್ರಮಕ್ಕೆ ಬಂದರು. ಇಲ್ಲಿ ಸ್ವಯಂಸೇವಕಿ ಯಾದರು ಎನ್ನಲಾಗಿದೆ.

ಈಗ ಅವರಿಗೆ ಸಂಪೂರ್ಣ ಸಂತೋಷ ಸಿಕ್ಕಿದೆಯಂತೆ. ಆಕೆಗೆ ಸದ್ಗುರು, ಭೈರಾಗಿನಿ ಮಾ ಎಂಬ ಹೆಸರು ನೀಡಿ ಲಿಂಗ ಭೈರವಿಯ ಅರ್ಚಕಿಯನ್ನಾಗಿಸಿದ್ದಾರೆ! ೨೦೦೯ ರಲ್ಲಿ ಅವರು ಸ್ವಯಂಸೇವಕ ಎಂದು ಭಾರತಕ್ಕೆ ಬಂದರು ಮತ್ತು ಕಳೆದ 14 ವರ್ಷಗಳಿಂದ ಇಲ್ಲೇ ವಾಸಿಸುತ್ತಿದ್ದಾರೆ. ಆಧ್ಯಾತ್ಮ ಮತ್ತು ಸನಾತನದ ಜೊತೆಗೆ ಜೋಡಣೆಯಾಗುವುದಕ್ಕಾಗಿ ಅವರು ಹೆಚ್ಚಿನ ವೇತನದ ನೌಕರಿ ಬಿಟ್ಟರು.

ಇದನ್ನೂ ಓದಿ: ವಿಜಯದಶಮಿ ವೇಳೆ ಪಲ್ಲಕ್ಕಿ ತಡೆದದ್ದೇಕೆ ಮುಸ್ಲಿಮರು..?

ವಿಶೇಷವೆಂದರೆ ಹ್ಯಾನಿನ್‌ ಈಗಲೂ ಕ್ರೈಸ್ತರೆ. ಅವರು ಮತಾಂತರಗೊಂಡಿಲ್ಲ. ಯಾರೂ ಆಕೆಗೆ ಮತಾಂತರ ಗೊಳ್ಳಬೇಕೆಂದು ಹೇಳಿಲ್ಲ. ಹಾಗೆಯೇ ಲೆಬನಾನ್‌ನಲ್ಲಿರುವ ಕುಟುಂಬದೊಂದಿಗೂ ಸಂಪರ್ಕದಲ್ಲಿದ್ದಾರೆ. ಅವರ ಸಂಪೂರ್ಣ ಸಹಕಾರವೂ ಇದೆ ಎನ್ನಲಾಗಿದೆ.

https://www.youtube.com/watch?v=mtKTEHG9O4I

Related posts

ಯುವಕನನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ,ಮಾಜಿ ಸೈನಿಕನ ಈ ಕೃತ್ಯಕ್ಕೆ ಕಾರಣವಾದರೂ ಏನು?

ವಿಟ್ಲ:ವಿದೇಶದಲ್ಲಿ ಉದ್ಯೋಗದಲ್ಲಿದ್ದ ಯುವಕ ಅನಾರೋಗ್ಯದಿಂದ ನಿಧನ

ಗಂಡನ ಮರ್ಮಾಂಗವನ್ನು ಹಿಚುಕಿ ಕೊಂದ ಪತ್ನಿ..! ಹಲವು ದಿನಗಳ ಬಳಿಕ ಬಯಲಾದದ್ದೇಗೆ ಸಾವಿನ ರಹಸ್ಯ..? ಇಲ್ಲಿದೆ ಸಂಪೂರ್ಣ ಕಹಾನಿ