ದೇಶ-ಪ್ರಪಂಚ

ಸಿಕ್ಕಿ ಹಾಕಿಕೊಂಡ 20,000 ಹಿಂದೂ, ಸಿಖ್ ಗಳಿಗೆ ಶಾಶ್ವತ ಪುನರ್ವಸತಿ ಕಲ್ಪಿಸಲು ಮುಂದಾದ ಕೆನಡಾ

ಕಾಬೂಲ್: ಯುದ್ಧಗ್ರಸ್ತ ಆಫ್ಘಾನಿಸ್ತಾನದ 20,000 ಹಿಂದೂ, ಸಿಖ್ ಸಮುದಾಯದ ಮಂದಿಗೆ ಶಾಶ್ವತ ಪುನರ್ವಸತಿ ಕಲ್ಪಿಸಲು ಕೆನಡಾ ಮುಂದಾಗಿದೆ. ತಾಲಿಬಾನ್ ಉಗ್ರರು ಆಫ್ಘಾನಿಸ್ತಾನದ ಬಹುತೇಕ ಪ್ರಾಂತ್ಯಗಳು, ಅದರ ರಾಜಧಾನಿ ನಗರಗಳನ್ನು ವಶಪಡಿಸಿಕೊಳ್ಳುತ್ತಿದ್ದು, ಕಾಬೂಲ್ ನತ್ತ ಮುನ್ನುಗ್ಗುತ್ತಿದ್ದಾರೆ. 

ಗುರುವಾರ, ಶುಕ್ರವಾರಗಳಂದು ತಾಲಿಬಾನ್ ಉಗ್ರ ಸಂಘಟನೆ ಆಫ್ಘಾನಿಸ್ತಾನದ ಪ್ರಮುಖ ನಗರಗಳಾದ ಹೆರಾತ್ ಹಾಗೂ ಕಂದಹಾರ್ ನಗರಗಳನ್ನು ವಶಪಡಿಸಿಕೊಂಡಿದೆ. ಈ ಮೂಲಕ ದೇಶದ ಮೂರನೇ ಎರಡರಷ್ಟು ಪ್ರಾಂತ್ಯಗಳು ಹಾಗೂ 34 ಪ್ರಾಂತೀಯ ರಾಜಧಾನಿಗಳ ಪೈಕಿ ಬಹುತೇಕ ಪ್ರದೇಶಗಳನ್ನು ತಾಲಿಬಾನ್ ವಶಕ್ಕೆ ಪಡೆದುಕೊಂಡಿದೆ. ವಲಸೆ ನೀತಿ, ನಿರಾಶ್ರಿತ, ಪೌರತ್ವ ಸಚಿವ ಮಾರ್ಕೊ ಇ ಎಲ್ ಮೆಂಡಿಸಿನೊ, ರಾಷ್ಟ್ರೀಯ ರಕ್ಷಣಾ ಸಚಿವ ಹರ್ಜಿತ್ ಎಸ್ ಸಜ್ಜನ್ ಮತ್ತು ವಿದೇಶಾಂಗ ಸಚಿವ ಮಾರ್ಕ್ ಗರ್ನೌ ಜಂಟಿಯಾಗಿ ಯುದ್ಧಗ್ರಸ್ತ ಆಫ್ಘಾನಿಸ್ತಾನದ 20,000 ಹಿಂದೂ, ಸಿಖ್ ಗಳಿಗೆ ಶಾಶ್ವತ ಪುನರ್ವಸತಿ ಕಲ್ಪಿಸುವ ಕೆನಡಾ ಸರ್ಕಾರದ ಈ ನಿರ್ಧಾರವನ್ನು ಕೈಗೊಂಡಿದ್ದು ಘೋಷಿಸಿದ್ದಾರೆ. ಆಫ್ಘಾನಿಸ್ತಾನದಲ್ಲಿ ಕೆನಡಾದ ಪ್ರಯತ್ನಗಳಿಗೆ ಕೊಡುಗೆ ನೀಡಿದ ಆಫ್ಘನ್ನರಿಗೆ ವಿಶೇಷ ವಲಸೆ ಯೋಜನೆಯನ್ನು ಕೆನಡಾ ಸರ್ಕಾರ ಜಾರಿಗೊಳಿಸಲಿದೆ, ಜೊತೆಗೆ ಸರ್ಕಾರ ದುರ್ಬಲ ವರ್ಗಗಳಿಗಾಗಿಯೇ ಪ್ರತ್ಯೇಕ ಯೋಜನೆಯನ್ನು ಪರಿಚಯಿಸಲಿದೆ. 

Related posts

ಚಲಿಸುತ್ತಿರುವ ಮೆಟ್ರೋದಲ್ಲಿಯೇ ಇಬ್ಬರು ಮಹಿಳೆಯರ ಜಡೆ ಜಗಳ..!,ಗಲಾಟೆ ನಿಲ್ಲಿಸಲು ಬಂದ ಯುವಕನ ಮೇಲೆಯೇ ಕೆಂಡಾಮಂಡಲರಾದ ನಾರಿಯರು!!ಮುಂದೇನಾಯ್ತು? ವಿಡಿಯೋ ಇಲ್ಲಿದೆ..

ವರದಕ್ಷಿಣೆ ಬೇಡಿಕೆ ಇಟ್ಟ ವರನಿಗೆ ಕಾದಿತ್ತು ಬಿಗ್ ಶಾಕ್!ರೊಚ್ಚಿಗೆದ್ದು ವಧು ಕಡೆಯವರು ಮಾಡಿದ್ದೇನು ಗೊತ್ತಾ?

ಬಾಲಕಿಯರಿಗೆ ಮೊಬೈಲ್‌ ನಲ್ಲಿ ಅಶ್ಲೀಲ ವಿಡಿಯೋ ತೋರಿಸುತ್ತಿದ್ದ ಶಿಕ್ಷಕ..! ಬಾಲಕಿ ತೋರಿದ ಧೈರ್ಯದಿಂದ ಬಯಲಾಯ್ತು ನೀಚ ಕೃತ್ಯ..!