ಕ್ರೈಂವಿಡಿಯೋವೈರಲ್ ನ್ಯೂಸ್

ರಾತ್ರೋರಾತ್ರಿ ಹಿಂದೂ ಯುವತಿಯನ್ನು ಭೇಟಿಯಾಗಲು ಬಂದ ಮುಸ್ಲಿಂ ಯುವಕ! ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದವರಿಗಾಗಿ ಪೊಲೀಸರ ಶೋಧ!

ನ್ಯೂಸ್ ನಾಟೌಟ್: ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಪ್ರಿಯತಮೆಯನ್ನು ಭೇಟಿ ಮಾಡಲು ಹೋಗಿದ್ದ ವೇಳೆ ರೆಡ್‌ ಹ್ಯಾಂಡ್‌ ಆಗಿ ಯುವತಿಯ ಸಂಬಂಧಿಕರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಪರಿಣಾಮ ಆತನನ್ನು ನಡುರಸ್ತೆಯಲ್ಲೇ ಬಟ್ಟೆ ಬಿಚ್ಚಿ ಹಿಗ್ಗಾಮುಗ್ಗವಾಗಿ ಥಳಿಸಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಯುವಕನೊಬ್ಬ ತನ್ನ ಗೆಳತಿಯ ಮನೆಗೆ ಭೇಟಿ ಮಾಡಲು ಬಂದಿದ್ದ ವೇಳೆ ಆಕೆಯ ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರು ಆತನನ್ನು ಹಿಡಿದು ನಡುರಸ್ತೆಯಲ್ಲೇ ವಿವಸ್ತ್ರಗೊಳಿಸಿ ದಾಳಿ ಮಾಡಿದ್ದಾರೆ. ಅದರ ವಿಡಿಯೋ ಕೂಡ ಈಗ ಹೊರಬಿದ್ದಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೊಲೀಸರು ವೈರಲ್ ಆಗಿರುವ ವಿಡಿಯೋ ಕುರಿತು ತನಿಖೆ ನಡೆಸುತ್ತಿದ್ದು, ಯುವಕ ಮತ್ತು ಯುವತಿ ಇಬ್ಬರಿಗಾಗಿಯೂ ಹುಡುಕಾಟ ನಡೆಸುತ್ತಿದ್ದಾರೆ. ಸಿಕ್ಕಿರುವ ಮಾಹಿತಿ ಪ್ರಕಾರ ಘಟನೆಯ ನಂತರ ಯುವಕ ಇನ್ನೂ ತನ್ನ ಮನೆಗೆ ಬಂದಿಲ್ಲ. ಈ ಸಂಪೂರ್ಣ ಘಟನೆ ಬಾರಾಬಂಕಿಯ ಪಸಿನ್‌ಪುರವಾ ಗ್ರಾಮದಲ್ಲಿ ನಡೆದಿದೆ. ಇಲ್ಲಿ ತನ್ನ ಗೆಳತಿಯನ್ನು ಭೇಟಿಯಾಗಲು ಹೋಗಿದ್ದ ಯುವಕನನ್ನು ಮೊದಲು ದೇವಾ-ಫತೇಪುರ್ ರಸ್ತೆಯ ಮಧ್ಯದಲ್ಲಿ ಗ್ರಾಮಸ್ಥರು ವಿವಸ್ತ್ರಗೊಳಿಸಿ ನಂತರ ಥಳಿಸಿದ್ದಾರೆ ಎಂದು ಮನೆಯವರು ಆರೋಪಿಸಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಯುವಕ ತನ್ನನ್ನು ಬಿಟ್ಟುಬಿಡಿ ಎಂದು ಜನರಲ್ಲಿ ಮನವಿ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣಿಸಿದೆ. ಆದರೂ ಎಲ್ಲರೂ ದೊಣ್ಣೆ, ಬೆಲ್ಟ್‌ಗಳಿಂದ ಆತನಿಗೆ ಮನಸೋ ಇಚ್ಛೆ ಥಳಿಸಿದ್ದಾರೆ. ಯುವತಿ ಹಿಂದೂ ಆಗಿದ್ದು, ಯುವಕ ಮುಸ್ಲಿಂ ಆಗಿದ್ದಾನೆ. ಇದೇ ಕಾರಣಕ್ಕೆ ಯುವತಿಯನ್ನು ಭೇಟಿಯಾಗಲು ಬಂದಿದ್ದ ವೇಳೆ ಆತನಿಗೆ ಯುವತಿಯ ಕುಟುಂಬಸ್ಥರು ಮತ್ತು ಗ್ರಾಮದ ಮುಖಂಡರು ಆತನ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

Related posts

ಪತಿ ಪತ್ನಿಯನ್ನು ಹುಡುಕಿಕೊಡುವಂತೆ ದೂರು..! ಇತ್ತ ಪತ್ನಿಯೂ ಪತಿಯನ್ನು ಹುಡುಕಿಕೊಡುವಂತೆ ಮನವಿ! ಇವರಿಬ್ಬರ ನಡುವೆ ಬಂದವಳ್ಯಾರು..?

ಮಹಿಳೆಯ ಸ್ತನ ಶಸ್ತ್ರಚಿಕಿತ್ಸೆಯ ವಿಡಿಯೋ ಚಿತ್ರೀಕರಿಸಿ ವೈರಲ್‌ ಮಾಡಿದ ಕಿಡಿಗೇಡಿಗಳು.! ರೊಚ್ಚಿಗೆದ್ದ ಮಹಿಳೆ ಮಾಡಿದ್ದೇನು..?

ಮಡಿಕೇರಿ:ಭೀಕರ ಬೈಕ್ ಅಪಘಾತ,ಕಾಲೇಜ್ ವಿದ್ಯಾರ್ಥಿನಿ ದಾರುಣ ಅಂತ್ಯ