ಕರಾವಳಿ

ಮುಸ್ಲಿಂ ಯುವಕನ ಜತೆ ಸ್ಲೀಪರ್ ಕೋಚ್ ಬಸ್‌ನಲ್ಲಿ ಪ್ರಯಾಣಿಸಿದ ಹಿಂದೂ ಯುವತಿ..!

ನ್ಯೂಸ್ ನಾಟೌಟ್ : ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನ ಜತೆಗೆ ಸ್ಲೀಪರ್ ಕೋಚ್ ಬಸ್ ನಲ್ಲಿ ಪ್ರಯಾಣಿಸಿ ಸಿಕ್ಕಿಬಿದ್ದಿದ್ದಾಳೆ. ಇತ್ತೀಚೆಗೆ ಅನ್ಯಕೋಮಿನ ಜೋಡಿಗಳು ಅಲ್ಲಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಕೈಗೆ ಸಿಕ್ಕಿ ಬೀಳುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿರುವುದು ವಿಶೇಷವಾಗಿದೆ.  

ಯುವಕ-ಯುವತಿ ಪ್ರಯಾಣಿಸುತ್ತಿದ್ದ ಬಸ್ ಅನ್ನು ಕಲ್ಲಡ್ಕ ಬಳಿ ಹಿಂದೂ ಸಂಘಟನೆ ಕಾರ್ಯಕರ್ಯರು ತಡೆ ಹಿಡಿದಿದ್ದಾರೆ. ಭಟ್ಕಳದ ಮುಸ್ಲಿಂ ಯುವಕ- ಮಂಗಳೂರಿನ ಹಿಂದು ಯುವತಿ ಎಂದು ತಿಳಿದು ಬಂದಿದೆ. ಖಾಸಗಿ ಬಸ್ ನ  ಸ್ಲೀಪರ್ ಕೋಚ್‌ನಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಪೊಲೀಸರ ಮಧ್ಯಪ್ರವೇಶ ಮಾಡಿ ಯುವತಿಯನ್ನು ಪೋಷಕರ ವಶಕ್ಕೆ ನೀಡಿದ್ದಾರೆ.

Related posts

ಸುಳ್ಯ: ಮದ್ಯ ಸೇವಿಸಿ ಯದ್ವಾತದ್ವಾ ವಾಹನ ಚಲಾಯಿಸಿದ ಪ್ರಕರಣ, ಸರ್ಕಾರಿ ಅಧಿಕಾರಿ ಅಮಾನತು, ವರ್ಕೌಟ್ ಆಗದ ಕಾಫಿ ನಾಟಕ..!

‘ದಿ ಗ್ರೇಟ್‌ ಸನ್‌ ಆಫ್‌ ಇಂಡಿಯಾ’ ಪ್ರಶಸ್ತಿಗೆ ಸ್ಪೀಕರ್‌ ಯು.ಟಿ. ಖಾದರ್‌ ಆಯ್ಕೆ

ಸರಕಾರದಿಂದಲೇ ತುಳುನಾಡಿನ ದೈವೀ ಶಕ್ತಿಗಳಿಗೆ ಅವಮಾನ