ಕರಾವಳಿಪುತ್ತೂರುರಾಜಕೀಯಸುಳ್ಯ

ಸುಳ್ಯಕ್ಕೆ ಬರುತ್ತಿದ್ದಾರೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ!

271

ನ್ಯೂಸ್ ನಾಟೌಟ್ : ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಸುಳ್ಯಕ್ಕೆ ಆಗಮಿಸಲಿದ್ದಾರೆ.ಈ ಬಗ್ಗೆ ಮಾಹಿತಿ ನೀಡಿದ ತಾಲೂಕು ಪೂಜಾ ಸಮಿತಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಸುಳ್ಯ ಇದರ ವತಿಯಿಂದ ಲೋಕಕಲ್ಯಾಣಾರ್ಥವಾಗಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಜೂನ್ ೪ರಂದು ನಡೆಯುತ್ತಿದ್ದು,ಪೂರ್ವಾಹ್ನ ಗಂಟೆ 7-30ರಿಂದ ಆರಂಭವಾಗಲಿದೆ ಎಂದು ತಿಳಿಸಿದರು.

ಈ ಕುರಿತು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಸಂಪೂರ್ಣ ಮಾಹಿತಿ ನೀಡಿದ ಅವರು ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ದ ” ಕಾರ್ತಿಕೇಯ ಸಭಾಭವನ” ದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಲಿದ್ದು, ಈ ಧಾರ್ಮಿಕ ಸಭಾ ಕಾರ್ಯಕ್ರಮದ ಉಪನ್ಯಾಸವನ್ನು ಹಿಂದೂ ಮುಖಂಡ ಶ್ರೀ ಅರುಣ್ ಕುಮಾರ್ ಪುತ್ತಿಲ ನೆರವೇರಿಸಲಿದ್ದಾರೆ ಎಂದು ಹೇಳಿದರು.

ಸಭಾಧ್ಯಕ್ಷತೆಯನ್ನು ಶ್ರೀ ಗೋಪಾಲಕೃಷ್ಣ ಬೋರ್ಕರ್ ಭಗವಾನ್ ಕನ್ಸ್ಟ್ರಕ್ಷನ್ ,ಮುಖ್ಯ ಅತಿಥಿಗಳಾಗಿ ಎನ್ ಎ. ರಾಮಚಂದ್ರ (ಮಾಜಿ ಅಧ್ಯಕ್ಷರು , ನಗರ ಪಂಚಾಯತ್ ಸುಳ್ಯ) ಜಯರಾಮ ರೈ ಜಾಲ್ಸೂರು( ಅಧ್ಯಕ್ಷರು ,ವ್ಯವಸ್ಥಾಪನಾ ಸೇವಾ ಸಮಿತಿ , ಅಡ್ಕಾರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ) ಕೇಶವಮೂರ್ತಿ ಹೆಬ್ಬಾರ್( ಅಧ್ಯಕ್ಷರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಮಂಡೆಕೋಲು) ಹರೀಶ್ ರಾವ್ ಗುಬ್ಬಲಡ್ಕ ಉಪಸ್ಥಿತಲಿದ್ದಾರೆ ಎಂದವರು ತಿಳಿಸಿದರು. ಈ ಸಂದರ್ಭದಲ್ಲಿ ಸುಧಾಕರ್ , ಸೂರ್ಯ ಮೊಗೇರ್ ಕನಕಮಜಲು, ಶ್ಯಾಮ್ ಕುಮಾರ್ ಹೆಬ್ಬಾರ್ , ರಕ್ಷಿತ್ ಅಡ್ಕಾರ್ , ಪುಪ್ಪರಾಜ್ ಕೆ .ಜಿ , ಶರತ್ ಉಬರಡ್ಕ , ಕಿಶನ್ ಮತ್ತಿತರರು ಉಪಸ್ಥಿತರಿದ್ದರು.

See also  ಹಿಮಪಾತಕ್ಕೆ ಸಿಲುಕಿ ಮೂವರು ಯೋಧರು ಬಲಿ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget