ಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಹಿಂದೂಗಳ ಮನೆಗಳಿಗೆ ನುಗ್ಗಿ ಬಾಂಗ್ಲಾ ಸೇನೆಯಿಂದ ದಾಂಧಲೆ..! ವಿಡಿಯೋ ವೈರಲ್‌

ನ್ಯೂಸ್ ನಾಟೌಟ್: “ಇಸ್ಕಾನ್‌’ ಸಂಸ್ಥೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮುಸ್ಲಿಂ ವ್ಯಾಪಾರಿ ವಿರುದ್ಧ ಪ್ರತಿಭಟಿಸುತ್ತಿದ್ದ ಹಿಂದೂಗಳ ಮೇಲೆ ಬಾಂಗ್ಲಾದ ಚಿತ್ತಗಾಂಗ್‌ ನ ಹಜಾರಿ ಗಾಲಿ ಎಪಟ್ಟಣ ಎಂಬಲ್ಲಿ ಬಾಂಗ್ಲಾ ದೇಶದ ಸೇನೆಯೇ ದಾಳಿ ನಡೆಸಿದೆ ಎನ್ನಲಾಗಿದೆ. ಅಲ್ಲದೆ, ಹಿಂದೂಗಳ ಮನೆಗಳಿಗೂ ನುಗ್ಗಿ, ಸೇನೆ ಸಿಬ್ಬಂದಿಯೇ ದಾಂಧಲೆ ನಡೆಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಒಸ್ಮಾನ್‌ ಅಲಿ ಎಂಬ ವ್ಯಾಪಾರಿಯು ಇಸ್ಕಾನ್‌ ಅನ್ನು ಭಯೋತ್ಪಾದಕ ಸಂಘಟನೆ ಎಂದು ಕರೆದಿದ್ದಲ್ಲದೇ, ಅದನ್ನು ನಿಷೇಧಿಸಬೇಕು ಎಂದು ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದ. ಇದನ್ನು ಖಂಡಿಸಿ ಹಿಂದೂಗಳು ಮಂಗಳವಾರ ರಾತ್ರಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಬಾಂಗ್ಲಾ ಸೇನಾ ಸಿಬ್ಬಂದಿ, ಪೊಲೀಸರು ಲಾಠಿ ಚಾರ್ಜ್‌ ನಡೆಸಿದ್ದಾರೆ.

ನಗರದಲ್ಲಿರುವ ಹಿಂದೂಗಳ ಮನೆಗಳಿಗೂ ನುಗ್ಗಿ, ಸಿಸಿಟಿವಿ ಕೆಮರಾಗಳನ್ನೂ ಹಾಳುಗಡೆವಿದ್ದಾರೆ. ಮಾಧ್ಯಮಗಳು ಪ್ರಶ್ನಿಸಿದಾಗ ಅಲಿ ಮತ್ತು ಆತನ ಸಹೋದರನ್ನು ರಕ್ಷಿಸಿ ಕರೆದೊಯ್ಯಲು ಲಘು ಲಾಠಿ ಪ್ರಹಾರದ ಮೂಲಕ ಗುಂಪು ಚದುರಿಸಿದ್ದಾಗಿ ಹೇಳಿವೆ. ಬಾಂಗ್ಲಾ ಲೇಖಕಿ ತಸ್ಲಿಮಾ ನಸ್ರಿàನ್‌ ಕೂಡ ವೀಡಿಯೋ ಶೇರ್‌ ಮಾಡಿದ್ದಾರೆ.

Click

https://newsnotout.com/2024/11/bhairati-shivaraj-kumar-kannada-news-fans-viral-news-d/
https://newsnotout.com/2024/11/vloger-in-bengaluru-road-kannada-news-10-year-old-boy-misbehaviour/
https://newsnotout.com/2024/11/3-children-and-father-got-nomore-kannada-news-thungabhadra/
https://newsnotout.com/2024/11/bengaluru-kannada-news-doctor-issue-with-patient-d/
https://newsnotout.com/2024/11/mangaluru-cow-theft-kannada-news-judicial-custody-kannada-news-ff/
https://newsnotout.com/2024/11/chikka-ballapura-kannada-news-viral-news-waqf-name-to-school-land/
https://newsnotout.com/2024/11/juice-kannada-news-restaurants-viral-news-price-at-mall/

Related posts

ಯುವತಿ ನಿಗೂಢ ನಾಪತ್ತೆ..! ಬಲವಂತದಿಂದ ಮದುವೆ ಮಾಡಿ ಇಸ್ಲಾಂಗೆ ಮತಾಂತರ ಮಾಡಿದ್ದಾರೆಂದು ತಂದೆ ದೂರು

ಮಸೀದಿ ಸಮೀಕ್ಷೆ ವೇಳೆ ಹಿಂಸಾಚಾರ ಪ್ರಕರಣ: ಸಂಸದ ಸೇರಿ 400 ಮಂದಿ ವಿರುದ್ಧ ಎಫ್‌.ಐ.ಆರ್..! ಡ್ರೋನ್ ದೃಶ್ಯಗಳನ್ನು ಬಳಸಿಕೊಂಡು ಹಿಂಸಾಚಾರ ನಡೆಸಿದವರನ್ನು ಸೆರೆಹಿಡಿದ ಪೊಲೀಸರು..!

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆ ಪ್ರಕರಣ, ಸಿಡಿ ಒದಗಿಸುವಂತೆ ಹೈ ಕೋರ್ಟ್ ಸೂಚನೆ