ಕರಾವಳಿರಾಜಕೀಯವೈರಲ್ ನ್ಯೂಸ್

ಹಿಂದೂ ಪೈರ್ ಬ್ರಾಂಡ್ ಶಾಸಕ ಯತ್ನಾಳ್‌ ಗೆ ಚಿಕಿತ್ಸೆ ನೀಡಿದ್ದು ಮುಸ್ಲಿಂ ಡಾಕ್ಟರ್! “ನನಗೆ ಮುಸ್ಲಿಂ ಓಟು ಬೇಡ” ಎಂದಿದ್ದ ಶಾಸಕನ ಕುರಿತು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ವೈರಲ್

ನ್ಯೂಸ್ ನಾಟೌಟ್ : ವಿಧಾನಸೌಧದಲ್ಲಿ ನಡೆದ ಗದ್ದಲದಲ್ಲಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಬಿಜೆಪಿ ಶಾಸಕ ಹಿಂದುತ್ವದ ಫೈರ್ ಬ್ರಾಂಡ್ ಎಂದು ಕರೆಸಿಕೊಳ್ಳುವ ಬಸನಗೌಡ ಪಾಟೀಲ ಯತ್ನಾಳ್‌ ಪೋರ್ಟಿಸ್‌ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಹೆಸರು ಡಾ.ಅಬ್ದುಲ್ ಖಾದರ್ ಎಂಬ ವಿಷಯ ಎಲ್ಲೆಡೆ ವೈರಲ್ ಆಗುತ್ತಿದೆ. ನೆಟ್ಟಿಗರು ಈ ವಿಷಯದಲ್ಲಿ ನಾನಾ ಬಗೆಯಲ್ಲಿ ವಿಶ್ಲೇಷಿಸಿದ್ದಾರೆ.

ತಮ್ಮ ಭಾಷಣಗಳಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಸದಾ ಕಿಡಿಕಾರುತ್ತಿದ್ದ ಯತ್ನಾಳ್‌ ಮುಸ್ಲಿಂ ಡಾಕ್ಟರೊಬ್ಬರು ಚಿಕಿತ್ಸೆ ನೀಡುತ್ತಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. “ನನಗೆ ಮುಸ್ಲಿಂ ಓಟು ಬೇಡ” ಎಂದಿದ್ದ ಶಾಸಕ ಯತ್ನಾಳ್‌ ಅವರು ಮುಸ್ಲಿಂ ಡಾಕ್ಟರ್‌ ಅವರಿಂದ ಚಿಕಿತ್ಸೆ ಬೇಡ ಎಂದು ನಿರಾಕರಿಸುತ್ತಾರೆಯೇ? ಎಂದು ಕೆಲವರು ಪ್ರಶ್ನಿಸಿದ್ದಾರೆ.

ಇನ್ನು ಕೆಲವರು ವೈದ್ಯಕೀಯ ವಿಚಾರ ಎಂದಾಗ ಜಾತಿ, ಧರ್ಮ ಮುಖ್ಯವಾಗುವುದಿಲ್ಲ. ಇದೇ ಮಾನವೀಯ ಧರ್ಮ ಎಂದು ಟ್ವೀಟ್‌ ಮಾಡಿಕೊಂಡಿದ್ದಾರೆ.
ಶಾಸಕ ಯತ್ನಾಳ್‌ ಅವರು ದಾಖಲಾಗಿರುವ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಸ್ಪೀಕರ್‌ ಖಾದರ್‌ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಸದ್ಯ ಈ ಪೋಟೋಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದೆ.

Related posts

ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರಿಂದ ಕಿರುಕುಳ ಎಂದದ್ದೇಕೆ ವಿಜಯೇಂದ್ರ..? ಏನಿದು ನೂತನ ಬಿಜೆಪಿ ರಾಜ್ಯಾಧ್ಯಕ್ಷನ ಗಂಭೀರ ಆರೋಪ?

ಗೂನಡ್ಕ: ಸೋಲಾರ್ ಬೀದಿ ದೀಪವನ್ನೇ ಕದ್ದೊಯ್ದ ಕಳ್ಳರು..!

ಚಿನ್ನ ಕದ್ದು ತಂದವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದರು..!