ಕ್ರೈಂವೈರಲ್ ನ್ಯೂಸ್

ಹಿಂದೂಗಳನ್ನು ಮತಾಂತರ ಮಾಡುತ್ತಿವೆಯಾ ಕ್ರಿಶ್ಚಿಯನ್‌ ಪ್ರಾರ್ಥನಾ ಮಂದಿರಗಳು? ಸ್ಥಳೀಯರಿಂದ ಪ್ರಾರ್ಥನಾ ಮಂದಿರಕ್ಕೆ ಮುತ್ತಿಗೆ..! ಮುಂದೇನಾಯ್ತು?

ನ್ಯೂಸ್‌ ನಾಟೌಟ್‌: ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾ ಎಂಬ ಸುಳಿವಿನ ಮೇರೆಗೆ ಸ್ಥಳೀಯರು ‘ಕ್ರಿಶ್ಚಿಯನ್ ಪ್ರಾರ್ಥನಮಂದಿರ’ಕ್ಕೆ ನುಗ್ಗಿ ಕಾರ್ಯಾಚರಣೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಚಿತ್ತಾಕುಲದಲ್ಲಿ ನಡೆದಿದೆ.

ಬಲತ್ಕಾರವಾಗಿ ಮತಾಂತರ ಮಾಡಿಸುವುದಕ್ಕೆ ಕಾನೂನಿನ ವಿರೋಧವಿದ್ದು, ಆದರೆ, ಸ್ವ-ಇಚ್ಛೆಯಿಂದ ಮತಾಂತರವಾಗುವವರಿಗೆ ಕಾನೂನಿನಲ್ಲಿ ಯಾವುದೆ ತಡೆಯಿಲ್ಲ. ಆದರೆ, ಅನಧಿಕೃತವಾಗಿ ಮತ್ತು ಜನರ ದೌರ್ಬಲ್ಯಗಳನ್ನು ಬಳಸಿಕೊಂಡು ಆಸೆ, ಆಮಿಷಗಳ ಮೂಲಕ ಮತಾಂತಗೊಳಿಸುವ ದಂಧೆಗಳು ಹಲವು ಭಾರಿ ಬೆಳಕಿಗೆ ಬಂದಿವೆ.

ಚಿತ್ತಾಕುಲದ ಶ್ಯಾಮ್ ನಾಯ್ಕ್ ಎಂಬವರಿಂದ ಆಯೋಜನೆಗೊಂಡಿದ್ದ ಪ್ರಾರ್ಥನೆ. ಸಾಮೂಹಿಕವಾಗಿ ಯೇಸುವಿನ ಪ್ರಾರ್ಥನೆ ಮಾಡುತ್ತಿದ್ದರು. ಈ ಪ್ರಾರ್ಥನೆಯಲ್ಲಿದ್ದವರು ಬಹುತೇಕರು ಹಿಂದೂಗಳು ಎಂದು ಆರೋಪಿಸಲಾಗಿದ್ದು. ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದ ಹಿಂದೂಗಳು ಅಮಲಿನ ವಸ್ತು ನಶೆಯಲ್ಲಿ ತೇಲಾಡುವ ಭಂಗಿಯಲ್ಲಿ ಕುಳಿತಿದ್ದರು ಎನ್ನಲಾಗಿದೆ.

ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದ ಬಹುತೇಕರು ಹಿಂದೂಗಳೇ ಆಗಿದ್ದರಿಂದ ಮತಾಂತರ ಸ್ಥಳೀಯರು ಮತಾಂತರ ಆರೋಪ ಮಾಡಿ ಗಲಾಟೆ ಮಾಡಿದ್ದಾರೆ. ಸಭಾಂಗಣದ ಕೊಠಡಿಗಳಲ್ಲಿ ಕ್ರಿಶ್ಚಿಯನ್ ಧರ್ಮದ ಬಗ್ಗೆ ಮಾಹಿತಿ ನೀಡುತ್ತಿದ್ದ ದೃಶ್ಯಗಳು ಕಂಡುಬಂದಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು ಸತ್ಯಾಸತ್ಯತೆ ಇನ್ನಷ್ಟೇ ತಿಳಿಯಬೇಕಿದೆ.

Related posts

ಒಂದೇ ಕುಟುಂಬದ ಐವರು 20 ದಿನಗಳೊಳಗೆ ನಿಗೂಢ ಸಾವು..! ಕೊಲೆಗಾರರು ಸಿಕ್ಕಿಬಿದ್ದಿದ್ದು ಹೀಗೆ? ಇಲ್ಲಿದೆ ಸಿನಿಮೀಯ ಕ್ರೈಮ್ ಸ್ಟೋರಿ

ರೇವ್ ಪಾರ್ಟಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..! 86 ಮಂದಿಯ ಬ್ಲಡ್ ರಿಪೋರ್ಟ್ ಪಾಸಿಟಿವ್..!

ಇಸ್ಲಾಂಗೆ ಮತಾಂತರವಾಗಿ ಪಾಕ್ ಗೆ ಹಾರಿದ ವಿವಾಹಿತ ಹಿಂದೂ ಮಹಿಳೆ! ಗಂಡನಿಗೆ ಬರ್ತೇನೆಂದು ಹೇಳಿ ಮುಸ್ಲಿಂ ಗೆಳೆಯನ ಜೊತೆ ಪರಾರಿ! ಇಲ್ಲಿದೆ ವೈರಲ್ ವಿಡಿಯೋ