ದೇಶ-ವಿದೇಶರಾಜಕೀಯವಿಡಿಯೋವೈರಲ್ ನ್ಯೂಸ್ಸಿನಿಮಾ

ಹಿಮಾಚಲ ಪ್ರದೇಶದಲ್ಲಿ ಕೆಫೆ ಆರಂಭಿಸಿದ ನಟಿ ಕಂಗನಾ ರಣಾವತ್..! ವಿವಾದಿತ ಎಮರ್ಜೆನ್ಸಿ ಚಿತ್ರ ಯಶಸ್ಸು ಕಾಣಲಿಲ್ಲವೆಂದು ಬಿಸಿನೆಸ್ ಗೆ ಇಳಿದ್ರಾ ಸಂಸದೆ..?

416

ನ್ಯೂಸ್ ನಾಟೌಟ್: ನಟಿ ಕಂಗನಾ ರಣಾವತ್​ ಬಹು ವಿವಾದಿತ ಎಮರ್ಜೆನ್ಸಿ ಚಿತ್ರ ಅಂದುಕೊಂದಷ್ಟು ಯಶಸ್ಸು ಕಾಣಿಸಲಿಲ್ಲ. ಹಿಮಾಚಲ ಪ್ರದೇಶದಿಂದ ಸಂಸದೆಯಾದ ಬಳಿಕ, ಮತ್ತೆ ಚಿತ್ರ ಮಾಡುವುದಿಲ್ಲ ಎಂಬ ಬಗ್ಗೆ ಪರೋಕ್ಷವಾಗಿ ಹೇಳಿದ್ದ ನಟಿ, ಇದೀಗ ಹೊಸದೊಂದು ಕೆಲಸಕ್ಕೆ ಮುಂದಾಗಿದ್ದಾರೆ. ಹಿಮಾಚಲ ಪ್ರದೇಶದ ಮನಾಲಿಯಲ್ಲಿ ‘ದಿ ಮೌಂಟೇನ್ ಸ್ಟೋರಿ’ ಎಂಬ ಕೆಫೆಯನ್ನು ಉದ್ಘಾಟನೆ ಮಾಡಲಿದ್ದಾರೆ. ದೀಪಿಕಾ ಪಡುಕೋಣೆ ಈ ಕೆಫೆಗೆ ಮೊದಲ ಅತಿಥಿ ಎಂದು ಹೇಳಿದ್ದಾರೆ.

ಕೆಫೆಯ ಸುಂದರ ದೃಶ್ಯಗಳನ್ನು ಹಾಗೂ ಒಳಾಂಗಣದ ಸೌಂದರ್ಯವನ್ನು, ತಾವು ಆಹಾರ ನೀಡುತ್ತಿರುವ ವಿಡಿಯೋಗಳನ್ನು ಹಿಮಾಚಲ ಪ್ರದೇಶದ ಕೆಲವು ಜನರ ಜೊತೆಗೂಡಿ ಇರುವ ದೃಶ್ಯಗಳನ್ನು ಕಂಗನಾ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಕೆಫೆ ಆರಂಭಿಸುವುದು ನನ್ನ ಬಾಲ್ಯದ ಆಸೆಯಾಗಿತ್ತು. ಬಹು ವರ್ಷಗಳ ಕನಸು ಈಡೇರಿದೆ ಎಂದು ನಟಿ, ಸಂಸದೆ ಹೇಳಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಸುಮಾರು ಹತ್ತು ವರ್ಷಗಳ ಹಿಂದೆ ಕಂಗನಾ ಮಾತನಾಡಿರುವ ವಿಡಿಯೋ ಒಂದು ವೈರಲ್​ ಆಗುತ್ತಿದೆ. ಈ ವಿಡಿಯೋಗೂ, ಕಂಗನಾ ತಮ್ಮ ಮೊದಲ ಅತಿಥಿ ದೀಪಿಕಾ ಪಡುಕೋಣೆ ಎನ್ನುವುದಕ್ಕೂ ಒಂದು ನಂಟಿದೆ. ಅದೇನೆಂದರೆ 2013ರಲ್ಲಿ ಕಂಗನಾ ಸಂದರ್ಶನವೊಂದನ್ನು ನೀಡಿದ್ದರು. ಆ ಸಮಯದಲ್ಲಿ ದೀಪಿಕಾ ಪಡುಕೋಣೆ ಕೂಡ ಹಾಜರಿದ್ದರು. ಆಗ ಕಂಗನಾ ಅವರು, ನಾನು ಪ್ರಪಂಚದ ಹಲವು ದೇಶಗಳಲ್ಲಿ, ಹಲವು ಹೋಟೆಲ್​ಗಳಲ್ಲಿ ಊಟ ಸವಿದಿರುತ್ತೇನೆ. ಹಲವಾರು ರೀತಿಯ ಪಾಕವಿಧಾನಗಳನ್ನು ಆಸ್ವಾದಿಸಿರುತ್ತೇನೆ. ನಾನು ಒಂದು ತುಂಬಾ ಸುಂದರವಾದ, ಚಿಕ್ಕ ಕೆಫೆಟೇರಿಯಾವನ್ನು ಹೊಂದಲು ಬಯಸುತ್ತೇನೆ. ಇದು ನನ್ನ ಬಾಲ್ಯದ ಕನಸು. ನನಗೆ ಆಹಾರದ ಬಗ್ಗೆ ತುಂಬಾ ಚೆನ್ನಾಗಿ ತಿಳಿದಿದೆ ಎಂದಿದ್ದರು.

ಆಗ ತಕ್ಷಣ ಅಲ್ಲಿಯೇ ಹಾಜರು ಇದ್ದ ದೀಪಿಕಾ, “ನಾನು ನಿಮ್ಮ ಮೊದಲ ಗ್ರಾಹಕಿ ಆಗುತ್ತೇನೆ” ಎಂದಿದ್ದರು. ಇದೇ ಕಾರಣಕ್ಕೆ, ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಕೆಫೆ ವಿಡಿಯೋದ ಜೊತೆಗೆ ಆ ಹಳೆಯ ಸಂದರ್ಶನದ ವಿಡಿಯೋ ಕೂಡ ಶೇರ್​ ಮಾಡಿರುವ ಕಂಗನಾ, ದೀಪಿಕಾಗೆ ಅದನ್ನು ಟ್ಯಾಗ್ ಮಾಡಿದ್ದಾರೆ. ನೀವೇ ಮೊದಲ ಗ್ರಾಹಕಿಯಾಗಬೇಕು” ಎಂದು ಆಹ್ವಾನಿಸಿದ್ದಾರೆ.

See also  ಪ್ರಸಾದ ಸೇವಿಸಿ ರಾತ್ರೋರಾತ್ರಿ ಅಸ್ವಸ್ಥರಾದ ಭಕ್ತರು..! 300 ಕ್ಕೂ ಹೆಚ್ಚು ಮಂದಿಗೆ ರಸ್ತೆಯಲ್ಲೇ ಡ್ರಿಪ್ಸ್..! ಏನಿದು ಘಟನೆ..?
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget