ಕ್ರೈಂದೇಶ-ವಿದೇಶವೈರಲ್ ನ್ಯೂಸ್

ವೇದಿಕೆ ಮೇಲೆ ಕೋಳಿ ಕತ್ತರಿಸಿ ರಕ್ತ ಕುಡಿದ ಕಲಾವಿದ..! ಹಲವು ದಿನಗಳ ಬಳಿಕ ಎಫ್.ಐ.ಆರ್ ದಾಖಲು..!

197

ನ್ಯೂಸ್ ನಾಟೌಟ್: ವೇದಿಕೆಯಲ್ಲಿ ಕಾರ್ಯಕ್ರಮದ ವೇಳೆ ಕಲಾವಿದರೊಬ್ಬರು ಕೋಳಿಯ ಕತ್ತು ಕೊಯ್ದು ರಕ್ತ ಕುಡಿದಿರುವ ಘಟನೆ ಅರುಣಾಚಲ ಪ್ರದೇಶದಲ್ಲಿ ನಡೆದಿದೆ. ಕಾರ್ಯಕ್ರಮದ ವೇಳೆ ಕೋನ್ ವಾಯ್ ಸನ್ ಎಂಬ ರಂಗ ಕಲಾವಿದ ಕೋಳಿಯನ್ನು ಕೊಂದು ಅದರ ರಕ್ತವನ್ನು ಕುಡಿದಿದ್ದಾನೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆ ತಡವಾಗಿ ವೈರಲ್ ಆಗಿದ್ದು, ಅಕ್ಟೋಬರ್ 27 ರಂದು ಈ ಘಟನೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಈ ಕುರಿತು ಪೇಟಾ ಸಂಘಟನೆ ಪ್ರತಿಭಟನೆಗೆ ಮುಂದಾಗಿದೆ. ಪ್ರಾಣಿಗಳನ್ನು ನಿಂದಿಸುವ ಜನರು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಪೇಟಾ ಹೇಳಿದೆ.

ಅವರಿಗೆ ಕೌನ್ಸೆಲಿಂಗ್ ನೀಡಬೇಕು. ಪ್ರಾಣಿಗಳ ಮೇಲೆ ಕ್ರೂರವಾಗಿ ವರ್ತಿಸುವವರು ಮನುಷ್ಯರಿಗೆ ಹಾನಿ ಮಾಡಲು ಹಿಂಜರಿಯುವುದಿಲ್ಲ. ಅವರು ಘೋರ ಕ್ರಿಮಿನಲ್‌ ಗಳು ಎಂದು ಪೇಟಾ ಕೂಡ ಅಭಿಪ್ರಾಯಪಟ್ಟಿದೆ. ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್), 2023 ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ಪಿಸಿಎ) ಕಾಯ್ದೆ, 1960 ರ ಅಡಿಯಲ್ಲಿ ಕಾನ್ ವಾಯ್ ಸನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

See also  ಸಂದರ್ಶನದ ವೇಳೆ ಶರ್ಟ್ ಬಿಚ್ಚಲೆತ್ನಿಸಿದ ನಟ!,ಮಹಿಳಾ ಆ್ಯಂಕರ್ ಶಾಕ್ !,ಇಲ್ಲಿದೆ ವೈರಲ್ ವಿಡಿಯೋ..
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget