ಕ್ರೀಡೆ/ಸಿನಿಮಾ

‘ಬಿಗ್ ಬಾಸ್ ಮನೆಗೆ ಹೋಗಲು ನನಗೂ ಅವಕಾಶ ನೀಡಿ’ ಎಂದು ಕಿಚ್ಚನ ಮನೆ ಮುಂದೆ ಹೈಡ್ರಾಮಾ..!ಎತ್ತಿನ ಗಾಡಿಯಲ್ಲಿ ಬಂದು ರಂಪಾಟ ಮಾಡಿದ ಆ ವ್ಯಕ್ತಿ ಯಾರು?

ನ್ಯೂಸ್ ನಾಟೌಟ್ :ಬಿಗ್ ಬಾಸ್ (Big Boss Kannada) ಮನೆಗೆ ನನಗೂ ಚಾನ್ಸ್ ಕೊಡಿ ಅಂತ ವ್ಯಕ್ತಿಯೊಬ್ಬ ಎತ್ತಿನ ಗಾಡಿಯಲ್ಲಿ ಸುದೀಪ್ ಮನೆಗೆ ಬಂದು ರಂಪಾಟವನ್ನೇ ಮಾಡಿದ ಘಟನೆ ವರದಿಯಾಗಿದೆ.ಕಿಚ್ಚನ (Sudeep) ಮನೆ ಮುಂದೆ ಬಂದು ವ್ಯಕ್ತಿಯೊಬ್ಬ ಅತಿರೇಕದ ವರ್ತನೆ ಮಾಡಿದ್ದು, ಈ ವರ್ತನೆ ಕಂಡು ಮನೆಯ ಸೆಕ್ಯೂರಿಟಿಯೇ ದಂಗಾಗಿದ್ದಾರೆ.

ಮಂಜು (Manju) ಹೆಸರಿನ ವ್ಯಕ್ತಿಯು ಈ ಹೈ ಡ್ರಾಮಾ ಶುರುಮಾಡಿದ್ದ ವ್ಯಕ್ತಿ.ಭಾನುವಾರ ಸಂಜೆ ಸುಮಾರು 6 ಗಂಟೆಯಿಂದ 10ಗಂಟೆವರೆಗೂ ಅಂದ್ರೆ ಬರೋಬ್ಬರಿ ೪ ಗಂಟೆಗಳ ಕಾಲ ಸುದೀಪ್ ಮನೆ ಮುಂದೆ ಕಾದು ನಿಂತಿದ್ದ ಎಂದು ತಿಳಿದು ಬಂದಿದೆ. ತಾನು ಟಿ ನರಸಿಪುರದಿಂದ ಬಂದಿರುವುದಾಗಿ ತಿಳಿಸಿದ್ದು, ನಾವು ಅನಕ್ಷರಸ್ಥರು. ರೈತರಿಗೂ ಬಿಗ್ ಬಾಸ್ ಮನೆಗೆ ಹೋಗಲು ಅವಕಾಶ ಕೊಡಿ ಅಂತ ಎತ್ತಿನ ಗಾಡಿ ತಂದು ಸುದೀಪ್ ಅವರು ಮನೆ ಮುಂದೆ ನಿಲ್ಲಿಸಿದ್ದ. ನಂತರ ಸುದೀಪ್ ಮನೇಲಿಲ್ಲ. ಚೆನ್ನೈ ಹೋಗಿದ್ದಾರೆ ಅಂತ ಹೇಳಿ ಸೆಕ್ಯುರಿಟಿ ಮನವಿ ಮಾಡಿ ಕಳಿಸಿದ್ದಾರೆ ಎಂದು ತಿಳಿದು ಬಂದಿದೆ.ಎತ್ತಿನ ಗಾಡಿಗೆ ಬ್ಯಾನರ್ ಕಟ್ಕೊಂಡ್ ಬಂದು, ಜೆಪಿ ನಗರದ ಸುದೀಪ್ ಮನೆ ಮುಂದೆ ಗಾಡಿ ನಿಲ್ಲಿಸಿದ್ದ. ನಂತರ ಬುದ್ದಿ ಹೇಳಿ ಆತನನ್ನ ಕಳಿಸಲಾಗಿದೆ. ಮಂಜು ಅಂತ ಹೆಸರನ್ನು ಬ್ಯಾನರ್ ನಲ್ಲಿ ಬರೆಯಲಾಗಿತ್ತು. ಕೆಲ ಸಮಯದ ನಂತರ ಅವರನ್ನು ಸಮಾಧಾನಿಸಿ ಕಳುಹಿಸಲಾಗಿದೆ ಎಂದಿದ್ದಾರೆ ಸುದೀಪ್ ಆಪ್ತರು.

Related posts

‘ಅಗ್ನಿಸಾಕ್ಷಿ’ ಧಾರಾವಾಹಿ ನಟನಾಗಿದ್ದ ಸಂಪತ್ ಜಯರಾಮ್‌ ಆತ್ಮಹತ್ಯೆ!

ರಾಜ್‌ ಕುಂದ್ರಾಗೆ ಹೆದರಿ ಟಾಯ್ಲೆಟ್ ನಲ್ಲಿ ಅಡಗಿ ಕುಳಿತಿದ್ದಳು ಕಾಮಸೂತ್ರ 3ಡಿ ಸಿನಿಮಾ ಖ್ಯಾತಿಯ ನಟಿ

ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು ಸಿನಿಮಾದಲ್ಲಿ ನಟಿಸುತ್ತಿದ್ದಾರಾ? ಆ ಸಿನಿಮಾ ಯಾವುದು..?